More

    ಅಮೆರಿಕ-ಇರಾನ್​ ಸಂಘರ್ಷದ ಪರಿಣಾಮ: ‘ಚಿನ್ನ’ವಾಯ್ತು ಬಲು ದುಬಾರಿ, ಇಂದು ಹೊಸ ಗರಿಷ್ಠ ಮಟ್ಟಕ್ಕೆ ಬೆಲೆ ಏರಿಕೆ

    ಮುಂಬೈ: ಅಮೆರಿಕ ಹಾಗೂ ಇರಾನ್ ನಡುವೆ ಏರ್ಪಟ್ಟಿರುವ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆ ಪರಿಸ್ಥಿತಿಯೂ ಬಿಗಡಾಯಿಸಿದೆ. ಇದು ಚಿನ್ನ, ಬೆಳ್ಳಿಯ ಬೆಲೆಯ ಮೇಲೆ ಕೂಡ ಪರಿಣಾಮ ಬೀರಿದೆ. ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದ್ದು 41,000ರೂ. ಗಡಿದಾಟಿದೆ.

    ಇಂದು 10 ಗ್ರಾಂ ಬಂಗಾರದ ಬೆಲೆ 41,096 ರೂ.ಗೆ ತಲುಪುವ ಮೂಲಕ ಹೊಸ ಗರಿಷ್ಠ ಮಟ್ಟಕ್ಕೆ ಏರಿದಂತಾಗಿದೆ. ಬೆಳಗ್ಗೆ 10.26ರ ಹೊತ್ತಿಗೆ 10 ಗ್ರಾಂ ಚಿನ್ನಕ್ಕೆ 40,939 ರೂ.ರಂತೆ ವಹಿವಾಟು ನಡೆದಿದೆ. ಎಂಸಿಎಕ್ಸ್​ ಮಾರುಕಟ್ಟೆ ದರದಲ್ಲಿ ಶೇ.2.06 (827 ರೂ.) ಹೆಚ್ಚಳವಾಗಿದೆ. ಬೆಳ್ಳಿಯ ಬೆಲೆಯಲ್ಲೂ ಹೆಚ್ಚಳವಾಗಿದ್ದು ಕೆಜಿಗೆ 48,514ರೂ.ಗೆ ತಲುಪಿವೆ.

    ಜಾಗತಿಕ ಮಾರುಕಟ್ಟೆಯಲ್ಲಿ ತೈಲಬೆಲೆಗಳೂ ಏರಿಕೆಯಾದ ಪರಿಣಾಮ ಭಾರತದ ರೂಪಾಯಿ ಮೌಲ್ಯ ಯುಎಸ್​ ಡಾಲರ್​ ಎದುರು ಕುಸಿದಿದ್ದು 72 ರೂ.ಗೆ ಇಳಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts