More

    ಜಿಯೋ ಪೊಲಿಟಿಕಲ್ ಟೆನ್ಶನ್​ ಕಾರಣ ಚಿನ್ನದ ಬೆಲೆ ಏರಿಕೆ

    ನವದೆಹಲಿ: ಭೌಗೋಳಿಕ ರಾಜಕೀಯ ಸನ್ನಿವೇಶಗಳು ಮಾರುಕಟ್ಟೆ ಮೇಲೂ ಪರಿಣಾಮ ಬೀರುತ್ತಿದ್ದು, ಬುಧವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ ಏರುವಂತೆ ಮಾಡಿದೆ ಎಂದು ಎಚ್​ಡಿಎಫ್​ಸಿ ಸೆಕ್ಯುರಿಟೀಸ್ ಹೇಳಿದೆ.

    ಚಿನ್ನ, ಬೆಳ್ಳಿ ಮಾರುಕಟ್ಟೆಯಲ್ಲಿ ಬುಧವಾರದ ವಹಿವಾಟಿನ ವೇಳೆ ಜಾಗತಿಕ ಸನ್ನಿವೇಶಗಳು ಮತ್ತು ಅಮೆರಿಕನ್ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿತ ಕಂಡ ಕಾರಣ ಚಿನ್ನದ ಬೆಲೆ 10 ಗ್ರಾಂಗೆ 485 ಏರಿಕೆ ಆಗಿದ್ದು, 41,810 ರೂಪಾಯಿಯಲ್ಲಿ ವಹಿವಾಟು ಕೊನೆಗೊಂಡಿದೆ. ಇದೇ ರೀತಿ, ಬೆಳ್ಳಿಯ ಬೆಲೆ ಕಿಲೋ ಒಂದರ 855 ರೂಪಾಯಿ ಹೆಚ್ಚಳವಾಗಿದ್ದು 49,530 ರೂಪಾಯಿಯಲ್ಲಿ ಮುಕ್ತಾಯವಾಗಿದೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಹೆಚ್ಚಳ ಮತ್ತು ರೂಪಾಯಿ ಮೌಲ್ಯ ಕುಸಿತ ಭಾರತದಲ್ಲಿ ಚಿನ್ನದ ವಹಿವಾಟನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿದೆ ಎಂದು ಎಚ್​ಡಿಎಫ್​ಸಿ ಸೆಕ್ಯುರಿಟೀಸ್​ ಪಿಸಿಜಿ ಅಡ್ವೈಸರಿ ದೇವರ್ಷ್​ ವಕೀಲ್​ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts