More

    65 ಸಾವಿರ ರೂ.ಗೆ ಏರಲಿದೆ 10 ಗ್ರಾಂ ಚಿನ್ನದ ಬೆಲೆ; ಬಂಗಾರದಲ್ಲಿ ಹೂಡಿಕೆಗೆ ಸಕಾಲ….!

    ನವದೆಹಲಿ: ಸದ್ಯ ಕರೊನಾದೊಂದಿಗೆ ಆಕಾಶಮುಖಿಯಾಗುತ್ತಿರುವ ಇನ್ನೊಂದು ಸಂಗತಿ ಎಂದರೆ ಬಂಗಾರದ ಬೆಲೆ. ಮುಂದಿನ ಕೆಲ ತಿಂಗಳಲ್ಲಿ ಕರೊನಾಗೆ ಕಡಿವಾಣ ಬೀಳಬಹುದೇನೋ ಆದರೆ, ಚಿನ್ನದ ಬೆಲೆಗಲ್ಲ ಎನ್ನುತ್ತಾರೆ ಮಾರುಕಟ್ಟೆ ಪಂಡಿತರು.

    ಬ್ಯಾಂಕಿಂಗ್​ ವಹಿವಾಟಿಗೆ ಬಲ ತುಂಬಲು ಭಾರಿ ಪ್ರಮಾಣದಲ್ಲಿ ಹಣಕಾಸಿನ ಪೂರೈಕೆಯನ್ನು ಮಾಡುತ್ತಿದ್ದರೂ ಅಮೂಲ್ಯ ಲೋಹಗಳ ಬೆಲೆ ಮಾತ್ರ ಏರುಗತಿಯಲ್ಲಿಯೇ ಸಾಗುತ್ತಿದೆ. ಚಿನ್ನದ ಬೆಲೆ ಸಾರ್ವಕಾಲಿಕ ಎತ್ತರ ತಲುಪಿದ್ದರೆ, ಕಳೆದ ಮಾರ್ಚ್​ನಲ್ಲಿ ಭಾರಿ ಇಳಿಕೆಯಾಗಿದ್ದ ಬೆಳ್ಳಿಯ ಬೆಲೆಗೆ ಹೋಲಿಸಿದರೆ, ಅದು ದುಪ್ಪಟ್ಟಾಗಿದೆ. ತಾಮ್ರದ ಬೆಲೆ ಕೂಡ ಶೇ.40 ಹೆಚ್ಚಾಗಿದೆ.

    ಇದನ್ನೂ ಓದಿ; ಈ ಬ್ಯಾಂಕ್​ಗೆ ಚೀನಾ ಸಾರಥ್ಯ, ಭಾರತವಿಲ್ಲಿ ಭಾರಿ ಸಾಲಗಾರ…! ಎಲ್ಲಿದೆ ಬ್ಯಾಂಕ್​?ಎಷ್ಟು ಸಾಲ? 

    ಚಿನ್ನದ ಬೆಲೆ ಸದ್ಯ 10 ಗ್ರಾಂಗೆ 52 ಸಾವಿರ ರೂ. ಇದ್ದರೆ, ಬೆಳ್ಳಿ ಪ್ರತಿ ಕೆಜಿಗೆ 65 ಸಾವಿರ ರೂ.ಗೆ ತಲುಪಿದೆ. ಇನ್ನೂ ತಾಮ್ರದ ಬೆಲೆ ಪ್ರತಿ ಕೆಜಿಗೆ 506 ರೂ. ಆಗಿದೆ.
    ಕಳೆದೆರಡು ವರ್ಷಗಳಿಂದ ಉತ್ತಮ ಲಾಭ ದೊರಕಿಸಿಕೊಟ್ಟಿರುವುದರತ್ತ ಜನರು ಹೆಚ್ಚು ಆಕರ್ಷಿತರಾಗಿರುವುದರಿಂದ ಚಿನ್ನಕ್ಕೀಗ ಭಾರಿ ಬೇಡಿಕೆ ವ್ಯಕ್ತವಾಗಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

    ಕಳೆದ ಎರಡು ವರ್ಷಗಳಲ್ಲಿ ಬಂಗಾರದ ಮೇಲೆ ತೊಡಗಿಸಿರುವ ಹಣದ ಮೇಲೆ ಶೇ.55 ಲಾಭಾಂಶ ಬಂದಿದ್ದರೆ, ಇತರೆಡೆಗಳ ಹೂಡಿಕೆಗೆ ಶೇ.11.3 ಲಾಭ ಸಿಕ್ಕಿದೆ.
    ಅಮೆರಿಕದ ಮಾರುಕಟ್ಟೆ ಅಂದಾಜಿನ ಪ್ರಕಾರ ಪ್ರತಿ ಔನ್ಸ್​ ಬಂಗಾರ ಮುಂದಿನ ವರ್ಷದ ಸೆಪ್ಟೆಂಬರ್​ ವೇಳೆಗೆ 3,000 ಡಾಲರ್​ಗೆ ಏರಲಿದೆ. ಇದನ್ನು ಸದ್ಯದ ರೂಪಾಯಿ ಮೌಲ್ಯಕ್ಕೆ ಹೋಲಿಸಿದಲ್ಲಿ 83,000 ರೂ. ಆಗಲಿದೆ. ಹೀಗಾಗಿ ಮುಂದಿನ ವರ್ಷದ ಕೊನೆಗೆ ಅಥವಾ ಅದಕ್ಕೂ ಮುನ್ನವೇ 10 ಗ್ರಾಂ ಚಿನ್ನದ ಬೆಲೆ 65,000 ರೂ.ಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

    ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts