More

    ಮೇಕಪ್ ಪೇಸ್ಟ್, ಪ್ಲಾಸ್ಟರ್‌ನಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

    ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತೆ 11,00,946 ರೂ. ಮೌಲ್ಯದ 238 ಗ್ರಾಂ ಚಿನ್ನ ಅಕ್ರಮ ಸಾಗಾಟ ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

    ಗುಜರಾತ್‌ನ ಖಾಸಿಂ ಇಬ್ರಾಹಿಂ ಕೊಲ್ಲಾಡ್ ಮತ್ತು ಭಟ್ಕಳದ ಮೊಹಮ್ಮದ್ ಬಶೀರ್ ರುಕ್ನುದ್ದೀನ್ ಬಂಧಿತರು. ಇವರು ಗುರುವಾರ ದುಬೈಯಿಂದ ಆಗಮಿಸಿದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು.

    ಚಿನ್ನವನ್ನು ಮೇಕಪ್ ಪೊಟ್ಟಣದಲ್ಲಿ ಪೇಸ್ಟ್ ರೂಪದಲ್ಲಿ ಹಾಗೂ ಚಿನ್ನದ ಪೌಡರ್ ಪ್ಲಾಸ್ಟರ್ ಮೂಲಕ ಕಟ್ಟಿ ಕೈ ಅಡಿಯಲ್ಲಿಟ್ಟು ಸಾಗಾಟ ಮಾಡಿದ್ದರು. ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ವೇಳೆ ಆರೋಪಿಗಳು ಪತ್ತೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts