More

    ಬೆಳ್ಳಂಬೆಳಗ್ಗೆ ಮನೆ ಬಾಗಿಲಿಗೆ ಬಂದ ಕಸದ ಗಾಡಿಗೆ ಚಿನ್ನ ಸುರಿದ ಗೃಹಿಣಿ! ಆಮೇಲೇನಾಯ್ತು ಗೊತ್ತಾ?

    ವಿಜಯಪುರ: ‘ಗಾಡಿ ವಾಲಾ ಆಯಾ ಗರಸೆ ಕಚರಾ ನಿಕಾಲ್’ ಎನ್ನುತ್ತ ಬೆಳ್ಳಂಬೆಳಗ್ಗೆ ಬರುವ ಕಸದ ಗಾಡಿಗೆ ಇಲ್ಲೊಬ್ಬ ಮಹಿಳೆ ಕಸದ ಬದಲು ಚಿನ್ನವನ್ನೇ ಹಾಕಿದ್ಳು!

    ಅಯ್ಯೋ, ಆಕೆಗೇನು ತಲೆ ಕೆಟ್ಟಿದ್ಯಾ? ಅಂತ ನಿಮ್ಗೆ ಅನ್ನಿಸ್ಬಹುದು. ಹೌದು ಇಂತಹ ವಿಚಿತ್ರ ಘಟನೆ ವಿಜಯಪುರದ 22ನೇ ವಾರ್ಡ್​ನಲ್ಲಿ ಗುರುವಾರ ನಡೆದಿದೆ. ಶಂಕರ್​ ಚವಾಣ್ ಅವರ ಪತ್ನಿ ಚಿನ್ನದ ಮಾಂಗಲ್ಯ ಸರವನ್ನು ಕಸದ ಗಾಡಿಗೆ ಹಾಕಿ ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ಮುಂದೇನಾಯ್ತು ಗೊತ್ತಾ? ಇದನ್ನೂ ಓದಿರಿ ನಟಿ ಪದ್ಮಜಾ ರಾವ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

    ಗುರುವಾರ ಬೆಳಗ್ಗೆ ಕಸದ ಗಾಡಿ ಬಂದು ಹೋದಾಗಿನಿಂದ ಶಂಕರ್​ ಚವಾಣ್​ರ ಪತ್ನಿಯ ಮಾಂಗಲ್ಯ ಸರ ಕಾಣೆಯಾಗಿದೆ. ಕಸ ಗುಡಿಸುವಾಗ ಚಿನ್ನದ ಸರವೂ ಕಸದ ರಾಶಿಗೆ ಸೇರಿದ್ದು, ತಡವಾಗಿ ಗೃಹಿಣಿ ಗಮನಕ್ಕೆ ಬಂದಿದೆ. ಆಗಲೇ ಪಾಲಿಕೆ ಕಸದ ಗಾಡಿ ಓಣಿಯಿಂದ ನಿರ್ಗಮಿಸಿದೆ. ಕೂಡಲೇ ಮಹಾನಗರ ಪಾಲಿಕೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪಾಲಿಕೆ ಸಿಬ್ಬಂದಿ ತಕ್ಷಣಕ್ಕೆ ಆ ಗಾಡಿ ಚಾಲಕನಿಗೆ ಕರೆ ಮಾಡಿ ಕಸದ ರಾಶಿ ಖಾಲಿ ಮಾಡದೇ ಗಾಡಿ ನಿಲ್ಲಿಸುವಂತೆ ತಿಳಿಸಿದ್ದಾರೆ. ಇನ್ನೇನು ಕಸ ಚೆಲ್ಲಬೇಕೆಂದಿದ್ದ ಚಾಲಕ, ಸಿಬ್ಬಂದಿ ಕರೆ ಮೇರೆಗೆ ಕಸ ತುಂಬಿದ ಗಾಡಿಯೊಂದಿಗೆ ನಗರ ಹೊರವಲಯದಲ್ಲಿ ನಿಂತಿದ್ದಾನೆ. ಸ್ಥಳಕ್ಕೆ ಪಾಲಿಕೆಯ ಸಿಬ್ಬಂದಿ ತೆರಳಿ ಹುಡುಕಿಸಲಾಗಿ ಚಿನ್ನದ ಸರ ಸಿಕ್ಕಿದೆ.

    ಬೆಳ್ಳಂಬೆಳಗ್ಗೆ ಮನೆ ಬಾಗಿಲಿಗೆ ಬಂದ ಕಸದ ಗಾಡಿಗೆ ಚಿನ್ನ ಸುರಿದ ಗೃಹಿಣಿ! ಆಮೇಲೇನಾಯ್ತು ಗೊತ್ತಾ?ಚಿನ್ನದ ಸರ ಹಸ್ತಾಂತರ: ಬಳಿಕ ಪಾಲಿಕೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಚವಾಣ್​ರ ಮನೆಗೆ ಆಗಮಿಸಿ ಚಿನ್ನದ ಸರ ನೀಡಿ ಪ್ರಾಮಾಣಿಕತೆ ಹಾಗೂ ನಿಷ್ಠೆ ಮೆರೆದಿದ್ದಾರೆ. ಪೌರಕಾರ್ಮಿಕ-ಮೇಲ್ವಿಚಾರಕ ಗಿರೀಶ್ ಚಿಮ್ಮಲಗಿ ಹಾಗೂ ವಿಜಯ ಖಾಕಂಡಕಿ ಚಿನ್ನದ ಸರ ಹುಡುಕಿ ಶಂಕರ್​ ಅವರಿಗೆ ಮರಳಿಸಿ ಆ ಕುಟುಂಬಸ್ಥರಲ್ಲಿ ಚಿನ್ನದ ನಗೆ ತರಿಸಿದ್ದಾರೆ. ಪೌರ ಕಾರ್ಮಿಕರ ಹಾಗೂ ಪಾಲಿಕೆ ಸಿಬ್ಬಂದಿ ಕಾರ್ಯಕ್ಕೆ ಶಂಕರ್ ಕುಟುಂಬ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸಿದೆ. ಇಂಥವರ ಸಂಖ್ಯೆ ಹೆಚ್ಚಲಿ ಎಂದು ಹಾರೈಸಿದ್ದಾರೆ. ಒಟ್ಟಿನಲ್ಲಿ ಚಿನ್ನವೂ ಕ್ಷಣಕಾಲ ಕಸವಾಗಿ ಮತ್ತೆ ವಾರಸುದಾರರ ಕೈಸೇರಿದ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿತ್ತು.

    ಜೆಡಿಎಸ್​ಗೆ ಮತ್ತೊಂದು ಶಾಕ್​! ಮುಂದಿನ ವಾರವೇ ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ

    ಆಂಜನೇಯ ದೇಗುಲಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದ ಕಿಡಿಗೇಡಿಗಳು!

    ಅಪ್ರಾಪ್ತ ತಂಗಿ ಮೇಲೆ ಅಣ್ಣನಿಂದ ನಿರಂತರ ಅತ್ಯಾಚಾರ: ಚಿಕ್ಕಮಗಳೂರಲ್ಲಿ ಮತ್ತೊಂದು ಹೇಯಕೃತ್ಯ ಬಯಲು

    ಅಪ್ರಾಪ್ತ ತಂಗಿ ಮೇಲೆ ಅಣ್ಣನಿಂದ ನಿರಂತರ ಅತ್ಯಾಚಾರ: ಚಿಕ್ಕಮಗಳೂರಲ್ಲಿ ಮತ್ತೊಂದು ಹೇಯಕೃತ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts