More

    ಹಳಸಿದ ಆಹಾರ ತಿಂದು ಸತ್ತ ಕುರಿಗಳು

    ಗಂಗಾವತಿ: ಆನೆಗೊಂದಿ ಉತ್ಸವ ಬಳಿಕ ಎಸೆಯಲಾಗಿದ್ದ ಆಹಾರ ತಿಂದ 23 ಕುರಿಗಳು ತಾಲೂಕಿನ ಕಡೇಬಾಗಿಲು ಹೊಲದಲ್ಲಿ ಶುಕ್ರವಾರ ಸತ್ತಿವೆ. ಅಸ್ವಸ್ಥಗೊಂಡ 200ಕ್ಕೂ ಹೆಚ್ಚು ಕುರಿಗಳಿಗೆ ಅಧಿಕಾರಿಗಳ ತಂಡ ಚಿಕಿತ್ಸೆ ನೀಡಿದೆ.

    ಮಲ್ಲಾಪುರದ ಹೇಮವ್ವ, ಮಲ್ಲಯ್ಯ, ಚಿಕ್ಕಬೆಣಕಲ್‌ತಿಮ್ಮಣ್ಣ, ಲಕ್ಷ್ಮಣ, ವೆಂಕಪ್ಪ ಮತ್ತು ಆನೆಗೊಂದಿ ಮಂಜುನಾಥ ಅವರ ಕುರಿಗಳು ಸತ್ತಿವೆ. ಇತ್ತೀಚಿಗೆ ಜಿಲ್ಲಾಡಳಿತದಿಂದ ನಡೆದಿದ್ದ ಆನೆಗೊಂದಿ ಉತ್ಸವ ನಿಮಿತ್ತ ಮುಖ್ಯರಸ್ತೆ ಹೊಲದಲ್ಲಿ ಸಾರ್ವಜನಿಕರಿಗಾಗಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಳಿದ ಅನ್ನ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದೆ ಹೊಲದಲ್ಲಿ ಬಿಡಲಾಗಿತ್ತು. ಕುರಿಗಳು ಹಳಸಿದ ಆಹಾರ ಪದಾರ್ಥ ತಿಂದು ಸತ್ತಿವೆ.

    ಮಾಹಿತಿ ತಿಳಿದ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಜಾಕೀರ್ ಹುಸೇನ್ ತಂಡ ಸ್ಥಳಕ್ಕೆ ಆಗಮಿಸಿ, ಅಸ್ವಸ್ಥಗೊಂಡಿದ್ದ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಸತ್ತ ಕುರಿಗಳನ್ನು ಮಣ್ಣಿನಲ್ಲಿ ಹೂತು ಹಾಕಲಾಯಿತು. ಆಹಾರ ತಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಗ್ರಾಪಂ ಗಮನಕ್ಕೆ ತರಲಾಗಿದೆ. 200ಕ್ಕೂ ಹೆಚ್ಚು ಕುರಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿವೆ ಎಂದರು. ವೈದ್ಯರಾದ ಡಾ.ಅರುಣಗುರು, ಡಾ.ವೈ.ಸೋಮಪ್ಪ ಇತರರಿದ್ದರು.

    ವಿಲೇವಾರಿಯಾಗದ ತ್ಯಾಜ್ಯ ಕುರಿತು ವಿಜಯವಾಣಿಯಲ್ಲಿ ಗಮನಸೆಳೆದಿದ್ದರೂ ಯಾರೂ ಎಚ್ಚೆತ್ತುಕೊಂಡಿರಲಿಲ್ಲ. ಜಾನುವಾರುಗಳಿಗೂ ಇದೇ ಪರಿಸ್ಥಿತಿ ಬರಬಾರದೆಂಬ ಉದ್ದೇಶದಿಂದ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಜಾಕೀರ್ ಹುಸೇನ್ ಸಂಬಂಧಪಟ್ಟ ಇಲಾಖೆಯೊಂದಿಗೆ ಸಂಪರ್ಕಿಸಿ, ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ.

    ಹಳಸಿದ ಆಹಾರ ತಿಂದು ಕುರಿಗಳು ಸತ್ತಿವೆ. ಉತ್ಸವದ ನಂತರ ಆಹಾರ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕಿತ್ತು. ಸಕಾಲಕ್ಕೆ ಚಿಕಿತ್ಸೆ ನೀಡಿದ ಪರಿಣಾಮ ಉಳಿದ ಕುರಿಗಳನ್ನು ಉಳಿಸಿಕೊಳ್ಳಲಾಗಿದೆ.
    ಡಾ.ಜಾಕೀರ್ ಹುಸೇನ್
    ಸಹಾಯಕ ನಿರ್ದೇಶಕ, ಪಶುಸಂಗೋಪನೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts