More

    ಮಾ.11ರಿಂದ ಆನೆಗೊಂದಿ ಉತ್ಸವ, ಶಾಸಕ ಜನಾರ್ದನರೆಡ್ಡಿ ಹೇಳಿಕೆ

    ಕೊಪ್ಪಳ: ಐತಿಹಾಸಿಕ ಆನೆಗೊಂದಿ ಉತ್ಸವ ಮಾರ್ಚ್​ 11 ಮತ್ತು 12 ರಂದು ನಡೆಸಲು ತೀಮಾರ್ನಿಸಲಾಗಿದ್ದು, ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

    ಸಚಿವ ತಂಗಡಗಿ, ಸಿಎಂ ಸಿದ್ದರಾಮಯ್ಯ ಉತ್ಸವ ಆಚರಣೆಗೆ ಸಹಕಾರ ನೀಡುತ್ತಿದ್ದಾರೆ. 3&4ಕೋಟಿ ಅನುದಾನ ನೀಡಲು ಸರ್ಕಾರ ಒಪ್ಪಿದೆ. ಜನ ಮೆಚ್ಚುವಂತೆ ಉತ್ಸವ ಮಾಡಲಾಗುವುದು. ವಿಜಯನಗರ ಸಾಮ್ರಾಜ್ಯದ ಅರಸರು ದೇಶದ ನಾನಾ ರಾಜ್ಯ ಮತ್ತು ವಿದೇಶದಲ್ಲೂ ವ್ಯಾಪಾರ ಸಂಪರ್ಕ ಹೊಂದಿದ್ದರು. ಈ ಹಿನ್ನೆಲೆ ವಿಜಯನಗರದ ಮೂಲ ಸಂಸ್ಥಾನ ಆಗಿರುವ ಆನೆಗೊಂದಿ ಉತ್ಸವದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವೈಭೋಗ ಇರಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ದೇಶದ ಜನ ಪ್ರಧಾನಿ ನರೇಂದ್ರ ಮೋದಿ ಆಡಳಿತ ಮೆಚ್ಚಿದ್ದಾರೆ. ನಾನು ಬಿಜೆಪಿಯೊಂದಿಗೆ ಮೈತ್ರಿಗೆ ಸಿದ್ಧನಿರುವೆ. ಆದರೆ, ಪಕ್ಷ ವಿಲೀನ ಮಾಡುವುದಿಲ್ಲ. ಕೆಆರ್​ಪಿಪಿ ಬಿಟ್ಟು ಬಿಜೆಪಿ, ಕಾಂಗ್ರೆಸ್​ ಸೇರುವುದಿಲ್ಲ. ನಾನು ಪಕ್ಷ ಬದಲಿಸುವ ಮಾತು ದೂರ. ನನ್ನೊಂದಿಗೆ ಮಾತುಕತೆ ನಡೆಸಿದವರಿಗೆ ನನ್ನ ಅಭಿಪ್ರಾಯ ಸ್ಪಷ್ಟಪಡಿಸಿರುವೆ. ರಾಜ್ಯಸಭೆ ಚುನಾವಣೆ ಬಗ್ಗೆ ಯಾವ ಮಾತುಕತೆಯಾಗಿಲ್ಲ.

    ಡಿಸಿಎಂ ಶಿವಕುಮಾರ್​ ನನ್ನ ಸ್ನೇಹಿತರು. ಹಾಗಂತ ಕಾಂಗ್ರೆಸ್​ಗೆ ಹೋಗುತ್ತೇನೆ ಎಂಬುದು ಸುಳ್ಳು. ಸ್ನೇಹ, ರಾಜಕಾರಣ ಎರಡೂ ಬೇರೆಯೇ. ಸಿಎಂ ಸಿದ್ದರಾಮಯ್ಯ ಅಂಜನಾದ್ರಿಗೆ 100 ಕೋಟಿ ರೂ. ನೀಡಿದ್ದಾರೆ. ಯಾವುದೇ ತಾರತಮ್ಯ ಮಾಡಿಲ್ಲ. ಹೊಟ್ಟೆಕಿಚ್ಚಿನ ವ್ಯಕ್ತಿ ಅಭಿವೃದ್ಧಿ ವಿಷಯದಲ್ಲಿ ಕಿರಿಕಿರಿ ಮಾಡುತ್ತಿದ್ದಾನೆ. ಲೋಕಸಭೆ ಚುನಾವಣೆವರೆಗೆ ಮಾತ್ರ ಅವರಿಗೆ ಒಂದಿಷ್ಟು ಬೆಲೆ. ನಂತರ ಅವರ ಕಾರ್ಯಕರ್ತರೇ ಅವರನ್ನು ಕಸದಬುಟ್ಟಿಗೆ ಎಸೆಯತ್ತಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಇಕ್ಬಾಲ್​ ಅನ್ಸಾರಿಗೆ ಟಾಂಗ್​ ನೀಡಿದರು.

    ಇರಕಲ್​ಗಡಾ ಭಾಗದಲ್ಲಿ ಕರಡಿಧಾಮ ರಚನೆಗೆ ಸರ್ಕಾರ ಅನುಮೋದನೆ ನೀಡಿದೆ. ಆಹಾರ ಕೊರತೆ ಕಾರಣ ಅವು ನಾಡಿಗೆ ಬರುತ್ತಿವೆ. ಧಾಮ ರಚನೆಯಿಂದ ಮಾನವ- ಪ್ರಾಣಿ ಸಂರ್ಷ ತಪ್ಪಲಿದೆ. ಸರ್ಕಾರದ ಅನುದಾನದ ಜತೆಗೆ ಉದ್ಯಮಿಗಳಿಂದ ದೇಣಿಗೆ ಪಡೆದು ಅಭಿವೃದ್ಧಿ ಮಾಡುವ ಚಿಂತನೆ ಇದೆ.

    -ಗಾಲಿ ಜನಾರ್ದನ ರೆಡ್ಡಿ.ಶಾಸಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts