More

    ಚಿನ್ನದ ರಾಣಿ ನಾಪತ್ತೆ ಆದಾಗಿನಿಂದ ಇವನೂ ಪತ್ತೆಯಿಲ್ಲ; ಪೊಲೀಸರಿಂದ ಈತನ ಪತ್ನಿ ವಿಚಾರಣೆ!

    ತಿರುವನಂತಪುರ: ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿರುವ 30 ಕೆ.ಜಿ. ಚಿನ್ನದ ಪ್ರಕರಣ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ.

    ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸೌದಿ ಅರೆಬಿಯಾ ದೂತಾವಾಸ ಕಚೇರಿಯ ಮಾಜಿ ಅಧಿಕಾರಿ ಹಾಗೂ ಕೇರಳ ರಾಜ್ಯ ಮಾಹಿತಿ ತಂತ್ರಜ್ಞಾನ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಸ್ಪೇಸ್ ಪಾರ್ಕ್‌ ಮಾರ್ಕೆಟಿಂಗ್ ಸಂಪರ್ಕ ಅಧಿಕಾರಿ ಸ್ವಪ್ನಾ ಸುರೇಶ್ ಪರಾರಿಯಾಗಿರುವ ಬೆನ್ನಲ್ಲೇ ದೂತಾವಾಸ ಕಚೇರಿಯ ಮಾಜಿ ಪಿಆರ್‌ಒ ಸರಿತ್ ಅವರ ಸಹಾಯಕರಾಗಿರುವ ಸಂದೀಪ್‌ ನಾಯರ್‌ ಅವರೂ ತಲೆಮರೆಸಿಕೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಸಂದೀಪ್‌ ಅವರ ಪತ್ನಿ ಸೌಮ್ಯಾ ಅವರ ವಿಚಾರಣೆಯನ್ನು ಕಸ್ಟಮ್ಸ್‌ ಅಧಿಕಾರಿಗಳು ನಡೆಸಿದರು. ಈ ವಿಚಾರಣೆಯಲ್ಲಿ ಬೆಳಕಿಗೆ ಬಂದಿರುವ ಅಂಶಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಈ ಪ್ರಕರಣದಲ್ಲಿ ಇನ್ನಷ್ಟು ಅಪರಾಧಿಗಳು ಭಾಗಿಯಾಗಿರುವುದು ಪೊಲೀಸರಿಗೆ ಸ್ಪಷ್ಟವಾಗಿದೆ.

    ಇದನ್ನೂ ಓದಿ: ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!

    ಸಂದೀಪ್ ನಾಯರ್ ಕಾರ್ಬನ್ ಡಾಕ್ಟರ್ ಎಂಬ ಕಾರ್ಯಾಗಾರದ ಮಾಲೀಕರಾಗಿದ್ದಾರೆ. ಇದೇ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಸ್ಪೀಕರ್ ಶ್ರೀರಾಮಕೃಷ್ಣನ್ ಅವರೂ ಉಪಸ್ಥಿತರಿದ್ದ ಹಿನ್ನೆಲೆಯಲ್ಲಿ, ಚಿನ್ನದ ಕಳ್ಳಸಾಗಣೆ ಪ್ರಕರಣ ಇನ್ನಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

    ಈ ನಡುವೆ ಸ್ವಪ್ನಾ ಸುರೇಶ್‌ರನ್ನು ಹುಡುಕಲು ಅಧಿಕಾರಿಗಳು ವ್ಯಾಪಕ ಶೋಧ ಆರಂಭಿಸಿದ್ದಾರೆ. ಸ್ವಪ್ನಾ ಕೊಚ್ಚಿಯಲ್ಲಿರುವ ವಕೀಲರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಇವರು ಅವಳು ಶರಣಾಗುವ ಸಾಧ್ಯತೆ ಇದೆ ಎನ್ನಲಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಸುಮಾರು 6 ಗಂಟೆಗಳ ಕಾಲ ಅಂಬಾಲಾಮುಕ್ಕಿನಲ್ಲಿರುವ ಸ್ವಪ್ನಾ ಅವರ ಫ್ಲ್ಯಾಟ್‌ನಲ್ಲಿ ದಾಳಿ ನಡೆಸಿ ಕೆಲವು ದಾಖಲೆಗಳು, ಲ್ಯಾಪ್‌ಟಾಪ್ ಮತ್ತು ಪೆನ್ ಡ್ರೈವ್ ಸಂಗ್ರಹಿಸಿದೆ.

    ಏನಿದು ಪ್ರಕರಣ? ಈ ಲಿಂಕ್‌ ಕ್ಲಿಕ್‌ ಮಾಡಿ-

    ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts