More

    ಈತನ ಪಾದದಲ್ಲಿತ್ತು ಚಿನ್ನದ ಬ್ಯಾಂಡೇಜ್​; ಅದರ ಬೆಲೆ ಎಷ್ಟು ಗೊತ್ತೇ?

    ಬೆಂಗಳೂರು: ಈತ ಅಂಥಿಂಥವನಲ್ಲ, ಏಕೆಂದರೆ ಇವನು ಪಾದಗಳಿಗೆ ಚಿನ್ನದ ಬ್ಯಾಂಡೇಜನ್ನೇ ಹಾಕಿಸಿಕೊಂಡಿದ್ದ. ಹೀಗೆ ಪಾದಗಳಿಗೆ ಬಂಗಾರದ ಬ್ಯಾಂಡೇಜ್​ ಹಾಕಿಸಿಕೊಂಡು ಬಂದಿದ್ದ ಈ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅರೇ.. ಕಾಲಿಗೆ ಚಿನ್ನದ ಬ್ಯಾಂಡೇಜ್ ಇದ್ದ ಮಾತ್ರಕ್ಕೇ ಅವನನ್ನು ಪೊಲೀಸರು ಯಾಕೆ ಬಂಧಿಸಿದರು ಎಂದು ಒಮ್ಮೆ ಅಚ್ಚರಿಯಾದರೂ ವಿಶೇಷವೇನಲ್ಲ.

    ಆದರೆ ಹೀಗೆ ಚಿನ್ನದ ಬ್ಯಾಂಡೇಜ್​ ಹಾಕಿಸಿಕೊಂಡಿದ್ದವನ ಕಾಲಲ್ಲಿ ಯಾವುದೇ ಗಾಯವೂ ಇರಲಿಲ್ಲ. ಏಕೆಂದರೆ ಈತ ಒಬ್ಬ ಸ್ಮಗ್ಲರ್, ಅರ್ಥಾತ್ ಚಿನ್ನದ ಕಳ್ಳಸಾಗಣಿಕೆದಾರ. ಎಲ್ಲ ಕಳ್ಳಸಾಗಣೆದಾರರಂತೆ ಈತನೂ ಸಿಕ್ಕಿಹಾಕಿಕೊಳ್ಳಬಾರದು ಎಂದು ತನ್ನದೇ ಆದರೀತಿಯಲ್ಲಿ ಬೇರೆಯದೇ ಐಡಿಯಾ ಮಾಡಿದ್ದ. ಅದಾಗ್ಯೂ ಕೊನೆಯ ಹಂತದಲ್ಲಿ ಸಿಕ್ಕಿಬಿದ್ದು ಬಂಧಿಯಾಗಿದ್ದಾನೆ.

    ಎರಡೂ ಪಾದಗಳಡಿ ಚಿನ್ನ ಇಟ್ಟುಕೊಂಡು ಅದಕ್ಕೆ ಬ್ಯಾಂಡೇಜ್​ ಹಾಕಿಕೊಂಡು ಕಳ್ಳಸಾಗಣೆಗೆ ಯತ್ನಿಸಿದ ಇವನನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈತ ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿಕೊಂಡು ಬಂದಿದ್ದ. ತಪಾಸಣೆ ವೇಳೆ ಅನುಮಾನ ಉಂಟಾಗಿ ಹೆಚ್ಚಿನ ಪರಿಶೀಲನೆಗೆ ಒಳಪಡಿಸಿದಾಗ ಸಿಕ್ಕಿಬಿದ್ದಿದ್ದಾನೆ. ಈತ ಆ ಬ್ಯಾಂಡೇಜ್​ನೊಳಗೆ ಕಳ್ಳಸಾಗಣೆ ಮಾಡಿಕೊಂಡು ಬಂದಿದ್ದ ಚಿನ್ನದ ಮೌಲ್ಯ 5.42 ಲಕ್ಷ ರೂಪಾಯಿ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಅಮ್ಮಾ ತಾಯಿ.. ಭಿಕ್ಷೆ ನೀಡಿ.. ಸಂಬಳ ಕೊಟ್ಟಿಲ್ಲ, ದಯವಿಟ್ಟು ಭಿಕ್ಷೆ ಹಾಕಿ: ಹಬ್ಬದ ದಿನವೇ ಸಾರಿಗೆ ಸಂಸ್ಥೆ ನೌಕರರಿಂದ ಭಿಕ್ಷಾಟನೆ

    ಅಂಬಾರಿಯ ಕನಸು ಚೂರುಚೂರು; ಒಂದೇ ವಾರದಲ್ಲಿ 36 ಬಸ್​ಗಳಿಗೆ ಹಾನಿ, 19 ಸಿಬ್ಬಂದಿಯ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts