ಇಂದು ಮುಕಾರ್ತಿಹಾಳಕ್ಕೆ ಚಿತ್ರನಟಿ ಮಾಲತಿಗೌಡ

blank
blank

ಗೊಳಸಂಗಿ: ಸಮೀಪದ ಮುಕಾರ್ತಿಹಾಳ ಗ್ರಾಮಕ್ಕೆ ಕನ್ನಡ ಚಲನಚಿತ್ರ ನಟಿ, ನಿರ್ಮಾಪಕಿ, ನಿರ್ದೇಶಕಿ ಮಾಲತಿಗೌಡ ಮಾ.13 ರಂದು ಸಂಜೆ 4.30 ಗಂಟೆಗೆ ಆಗಮಿಸಲಿದ್ದಾರೆ.
‘ವಿಜಯವಾಣಿ’ಯ ‘ಕೃಷಿಮಿತ್ರ’ ಅಂಕಣಕಾರರೂ ಆಗಿರುವ ಡಾ.ಆರ್.ಬಿ.ಬೆಳ್ಳಿ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಮುಕಾರ್ತಿಹಾಳದ ಹಾದಿ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ, ಉತ್ನಾಳ ಮಹಾಲಕ್ಷ್ಮೀ ಎಜ್ಯಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಇವರ ಶಕುಂತಲಾಬಾಯಿ ಬಸವರಾಜ ಬೆಳ್ಳಿ ಮೆಮೋರಿಯಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ 3ನೇ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ನಟಿ ಮಾಲತಿಗೌಡ ಚಾಲನೆ ನೀಡಲಿದ್ದಾರೆ.
ಉತ್ನಾಳ ಮಹಾಲಕ್ಷ್ಮೀ ಹಿರೇಮಠದ ಶಿವಪುತ್ರಯ್ಯ ಸ್ವಾಮಿ, ಕರಬಂಟನಾಳ ಗುರು ಗಂಗಾಧರೇಶ್ವರ ಹಿರೇಮಠದ ಶಿವಕುಮಾರ ಶ್ರೀಗಳು, ಕೃಷಿ ವಿಸ್ತರಣಾಧಿಕಾರಿ ಡಾ.ಆರ್.ಬಿ. ಬೆಳ್ಳಿ ಅಧ್ಯಕ್ಷತೆ ವಹಿಸುವರು. ಸಚಿವ ಶ್ರೀರಾಮಲು ಅಭಿಮಾನಿ ಬಳಗದ ರೈತ ಮೋರ್ಚಾ ಅಧ್ಯಕ್ಷ ಮಂಜುನಾಥ ವಂದಾಲ, ಸಿಂದಗಿ ತಹಸೀಲ್ದಾರ್ ಸಂಜೀವಕುಮಾರ ಡಿ., ಬಸವನ ಬಾಗೇವಾಡಿ ಡಿವೈಎಸ್‌ಪಿ ಈ. ಶಾಂತವೀರ, ತಾಲೂಕು ಶಿಕ್ಷಕರ ಸಂಘದ ಆಧ್ಯಕ್ಷ ಶಿವಾನಂದ ಮಂಗಾನವರ, ಬಿಇಒ ಬಸವರಾಜ ತಳವಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮುರುಗೇಶ ಹೆಬ್ಬಾಳ, ಸಂಯುಕ್ತಾ ಪಾಟೀಲ, ಗ್ರಾಪಂ ಉಪಾಧ್ಯಕ್ಷ ಸಾಯಬಣ್ಣ ಮಸಬಿನಾಳ, ಪ್ರಮುಖರಾದ ಶಶಿಧರ ಮಾಮನಿ, ಸುರೇಶ ಮಾಮನಿ ಮತ್ತಿತರರಿದ್ದರು.

Share This Article

ಪೈಲ್ಸ್​ ಇರುವವರು ಈ ಆಹಾರಗಳನ್ನು ಬಿಟ್ಟುಬಿಡಿ! ಸಮಸ್ಯೆಯಿಂದ ಹೊರಬರಲು ಇಲ್ಲಿವೆ ಉಪಯುಕ್ತ ಸಲಹೆ | Piles

Piles: ಮೂಲವ್ಯಾಧಿ ಅಥವಾ ಪೈಲ್ಸ್​ ಸಮಸ್ಯೆ ಬಹುಜನರಲ್ಲಿ ಕಾಡುವ ತೀರ ಸಾಮಾನ್ಯ ರೋಗ. ಅದರಲ್ಲೂ ಇಂದಿನ…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ! ಯಾವ ಆರೋಗ್ಯ ಸಮಸ್ಯೆನೂ ಬರಲ್ಲ.. curry leaves water

ಬೆಂಗಳೂರು: ( curry leaves water )  ನೀವು ಕೂಡ ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು…