More

    ಮತದಾರರಿಗೆ ಯಾವುದೇ ಆಮಿಷ ಒಡ್ಡಲ್ಲ

    ತೀರ್ಥಹಳ್ಳಿ: ಚುನಾವಣೆ ಅಂದ ಮೇಲೆ ಹಣ, ಹೆಂಡ ಸೇರಿ ಮತದಾರರಿಗೆ ಹತ್ತು ಹಲವು ಆಮಿಷಗಳು ಸಹಜ. ಆದರೆ ಇದಕ್ಕೆ ಅಪವಾದವೆಂಬಂತೆ ಹೊದಲ-ಅರಳಾಪುರ ಗ್ರಾಪಂ-1 ಕ್ಷೇತ್ರದ ಅಭ್ಯರ್ಥಿಗಳು ಮತದಾರರಿಗೆ ಯಾವುದೇ ಆಮಿಷವೊಡ್ಡದೆ ಮಾದರಿ ಚುನಾವಣೆ ನಡೆಸಲು ತೀರ್ವನಿಸಿ ದೇವರ ಎದುರು ಪ್ರಮಾಣ ಮಾಡಿದ್ದಾರೆ.

    ಪ್ರಜಾತಂತ್ರ ವ್ಯವಸ್ಥೆಯ ಆಶಯದಂತೆ ಜನಾದೇಶಕ್ಕೆ ಪೂರಕವಾಗಿ ಚುನಾವಣೆ ನಡೆಸಲು ಒಮ್ಮತದ ತೀರ್ವನಕ್ಕೆ ಬಂದ ಅಭ್ಯರ್ಥಿಗಳು ಶುಕ್ರವಾರ ಗ್ರಾಮದ ಕಾನುಕೊಪ್ಪ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ಈ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹೆಂಡ ಮುಂತಾದ ಯಾವುದೇ ಆಮಿಷವೊಡ್ಡದೆ ಭ್ರಷ್ಟಾಚಾರ ಮುಕ್ತವಾಗಿ ಮಾದರಿ ಚುನಾವಣೆ ಮಾಡುತ್ತೇವೆ ಎಂದು ಪ್ರಮಾಣ ಮಾಡಿದರು. ಅರಳಾಪುರ ಶ್ರೀಹರ್ಷ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.

    ಬಿಜೆಪಿ, ಕಾಂಗ್ರೆಸ್ ಸೇರಿ ಇತರ ರಾಜಕೀಯ ಪಕ್ಷಗಳ ಬೆಂಬಲಿತ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೊದಲ ಗೋಪಾಲಭಟ್, ಡಿ.ಮಂಜುನಾಥ, ಗಂಗಾಧರ ತಲವಡಗ, ಗಂಗಾ ಜಿ.ಶೆಟ್ಟಿ, ಹೊದಲ ದಿನೇಶ್, ಆಶಾ ತಾರಾನಾಥ್, ಕವಿತಾ ಶ್ರೀಧರ್ ಹಾಗೂ ಅಂಬಿಕಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಭ್ರಷ್ಟಾಚಾರ ಮುಕ್ತ ಚುನಾವಣೆ ಮಾತ್ರವಲ್ಲದೇ ಸೋಲು-ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ಮೂಲಕ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಬಯಕೆ ಹೊಂದಿರುವುದಾಗಿಯೂ ಈ ಅಭ್ಯರ್ಥಿಗಳಿಂದ ಅಭಿಪ್ರಾಯವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts