More

    ಗೋವಾ ಆಕ್ಸಿಜನ್ ಗೊಂದಲ : ಒಂದೇ ಆಸ್ಪತ್ರೆಯಲ್ಲಿ 4 ದಿನಗಳಲ್ಲಿ 74 ಸಾವು

    ಗೋವಾ : ಗೋವಾದ ಅತಿದೊಡ್ಡ ಕೋವಿಡ್​ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿರುವ ಗೋವಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 74 ಜನ ಕರೊನಾ ರೋಗಿಗಳು ಸಾವಪ್ಪಿದ್ದಾರೆ. ಈ ಎಲ್ಲ ಸಾವುಗಳಿಗೆ ಮೆಡಿಕಲ್ ಆಕ್ಸಿಜನ್​​ನ ಕೊರತೆಯೇ ಕಾರಣ ಎಂದು ಆರೋಪಿಸಲಾಗಿದೆ.

    ನಿನ್ನೆ ಮಧ್ಯರಾತ್ರಿ 2 ಗಂಟೆಯಿಂದ ಇಂದು ಬೆಳಿಗ್ಗೆ 6 ಗಂಟೆಯ ನಡುವೆ 13 ಜನ ಸಾವಪ್ಪಿದ್ದಾರೆ. ನಿನ್ನೆ ಮುಂಜಾನೆ 15 ಜನ ಸತ್ತಿದ್ದಾರೆ. ಮೊನ್ನೆ, ಬುಧವಾರ, 20 ಜನ ಸತ್ತಿದ್ದರೆ, ಮಂಗಳವಾರವೂ ಮಧ್ಯರಾತ್ರಿ ಮತ್ತು ಬೆಳಗಿನ ಜಾವದ ನಡುವೆ 26 ಮಂದಿ ಜೀವ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

    ಗೋವಾ ಸಿಎಂ ಪ್ರಮೋದ್​ ಸಾವಂತ್​ ಅವರು ಮೆಡಿಕಲ್ ಆಕ್ಸಿಜನ್​​ನ ಲಭ್ಯತೆ ಮತ್ತು ಪೂರೈಕೆಯಲ್ಲಿನ ಅಂತರದಿಂದಾಗಿ ಈ ದುರಂತ ನಡೆದಿದೆ ಎಂದಿದ್ದು, ಹೈಕೋರ್ಟ್​​ಗೆ ತನಿಖೆ ನಡೆಸಬೇಕೆಂದು ಕೋರಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂಬುದೇ ಅವರ ಅಂಬೋಣ.

    ಇದನ್ನೂ ಓದಿ: ‘ಲಸಿಕೆ ಹಾಕಿಸಿಕೊಳ್ಳಿ ಅಂತ ಸಂದೇಶ ಹಾಕ್ತೀರಿ… ಆದರೆ ಲಸಿಕೆ ಎಲ್ಲಿದೆ ?’ – ಹೈಕೋರ್ಟ್​ ಪ್ರಶ್ನೆ

    ಆದರೆ, ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ಕೆ.ಗೋಯಲ್ ಅವರು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರ ಬೇರೆಯೇ ಚಿತ್ರಣ ನೀಡುತ್ತದೆ. ಮೇ 1 ರಿಂದ 10 ರ ನಡುವೆ ರಾಜ್ಯಕ್ಕೆ ಮುಖ್ಯವಾಗಿ ಆಕ್ಸಿಜನ್ ಪೂರೈಕೆಯಾಗುವ ಮಹಾರಾಷ್ಟ್ರದ ಕೋಲ್ಹಾಪುರದಿಂದ 110 ಮೆಟ್ರಿಕ್​ ಟನ್ ನಿಗದಿತ ಆಕ್ಸಿಜನ್​​ ಬದಲಿಗೆ 66.74 ಮೆಟ್ರಿಕ್ ಟನ್​ಗಳಷ್ಟು ಮಾತ್ರ ಬಂದಿದೆ ಎಂದು ಗೋಯಲ್ ಬರೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

    ಕಳೆದ 24 ಗಂಟೆಗಳಲ್ಲಿ ಗೋವಾದ ಕರೊನಾ ಪಾಸಿಟಿವಿಟಿ ದರವು ಶೇ. 48.1 ರಷ್ಟಿದೆ. ಒಟ್ಟು 2,491 ಹೊಸ ಪ್ರಕರಣಗಳು ವರದಿಯಾಗಿದ್ದು, 62 ಕರೊನಾ ಸಾವು ಸಂಭವಿಸಿವೆ. ರಾಜ್ಯದಲ್ಲಿ ಹಾಲಿ 33,000 ಸಕ್ರಿಯ ಪ್ರಕರಣಗಳಿವೆ. (ಏಜೆನ್ಸೀಸ್)

    ಲಸಿಕೆ ಪಡೆಯಲು ಹೋದ ಆಟೋ ಡ್ರೈವರ್​… ಮನೆಗೆ ವಾಪಸಾದಾಗ ಅಲ್ಮೆರಾ ಖಾಲಿ !

    ಕೈಮುಗಿದು, ಮನೆಯೊಳಗೇ ಇರಿ ಎನ್ನುವ ಪೊಲೀಸ್ ಅಧಿಕಾರಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts