More

    ಕರೊನಾ ಪರೀಕ್ಷೆ: ಲ್ಯಾಬ್‌ಗೆ ಆಟ, ಯುವಕನಿಗೆ ಸಂಕಷ್ಟ

    ಕಾರವಾರ: ಗೋವಾ ಖಾಸಗಿ ಪ್ರಯೋಗಾಲಯದ ಎಡವಟ್ಟಿನಿಂದ ಜೊಯಿಡಾದ ಉದ್ಯೋಗಿ ಸಂಕಷ್ಟಕ್ಕೀಡಾದ ಘಟನೆ ಬೆಳಕಿಗೆ ಬಂದಿದೆ.

    ಗೋವಾದ ಔಷಧ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಜೊಯಿಡಾ ಅಣಶಿ ಮೂಲದ 24 ವರ್ಷದ ಉದ್ಯೋಗಿಗೆ ಕರೊನಾ ಇತ್ತು ಎಂದು ಅಲ್ಲಿನ ಎಸ್‌ಆರ್‌ಎಸ್ ಪ್ರಯೋಗಾಲಯ ವರದಿ ನೀಡಿತ್ತು. ಆದರೆ, ವರದಿಯ ಬಗ್ಗೆ ಆತ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗೋವಾ ಸರ್ಕಾರಿ ಮೆಡಿಕಲ್ ಕಾಲೇಜ್‌ನಲ್ಲಿ ಗಂಟಲ ದ್ರವ ಮರು ಪರೀಕ್ಷೆ ಮಾಡಿದಾಗ ಕರೊನಾ ಇಲ್ಲ ಎಂದು ದೃಢಪಟ್ಟಿದೆ.

    ಇದನ್ನೂ ಓದಿ ಕ್ವಾರಂಟೈನ್​ನಲ್ಲಿ ಇದ್ದರೂ ನಿಲ್ಲದ ಕಾಮುಕರ ಅಟ್ಟಹಾಸ, ಮುಚ್ಚಿಹಾಕಲು ರಾಜಕೀಯ ಒತ್ತಡ

    ಇದರಿಂದ ಆತನನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಉಕ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಆದರೆ ಖಾಸಗಿ ಲ್ಯಾಬ್ ನೀಡಿದ ತಪ್ಪು ವರದಿಯಿಂದ ಯುವಕ ಮಾನಸಿಕ ಹಿಂಸೆ, ಅವಮಾನ ಅನುಭವಿಸಬೇಕಾಯಿತು.

    ಮೇ 14 ರಂದು ಯುವಕ ಅಣಶಿಯಿಂದ ಕಾರವಾರ ಮಾಜಾಳಿ ತನಿಖಾ ಠಾಣೆಯ ಮೂಲಕ ಗೋವಾ ಪ್ರವೇಶಿಸಿದ್ದ ವಾಸ್ಕೋದ ಹೋಟೆಲ್ ಒಂದರಲ್ಲಿ ಕ್ವಾರಂಟೈನ್‌ನಲ್ಲಿ ಇದ್ದು, ಅಲ್ಲಿನ ಸರ್ಕಾರದ ನಿಯಮಾವಳಿಯಂತೆ ತನ್ನ ಖರ್ಚಿನಲ್ಲಿ ಖಾಸಗಿ ಲ್ಯಾಬ್‌ನಲ್ಲಿ ಗಂಟಲ ದ್ರವ ಪರೀಕ್ಷೆಗೆ ನೀಡಿದ್ದ. ಆತನಿಗೆ ರೋಗ ಇಲ್ಲದೇ ಹೋದರೂ ಲ್ಯಾಬ್ ಇದೆ ಎಂದು ವರದಿ ನೀಡಿದ್ದರಿಂದ ಆತ ಹಾಗೂ ಆತನ ಕುಟುಂಬ ತೊಂದರೆ ಅನುಭವಿಸಬೇಕಾಯಿತು.

    ಇದನ್ನೂ ಓದಿ 3 ವಾರಗಳಲ್ಲಿ 4446 ಕೋಟಿ ರೂ. ಪಾವತಿಸಲು ಕೋರ್ಟ್ ಆದೇಶ: ಯಾರಿಗೆ, ಏಕೆ?

    ಮುನ್ನೆಚ್ಚರಿಕೆ ಕ್ರಮವಾಗಿ ಆತನ ಕುಟುಂಬ ಸೇರಿ ಆತನ ಸಂಪರ್ಕಕ್ಕೆ ಬಂದ 45 ಜನರನ್ನು ಜೊಯಿಡಾ ಹಾಗೂ ಕಾರವಾರದಲ್ಲಿ ಕ್ವಾರಂಟೈನ್ ಮಾಡಲಾಯಿತು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಯುವಕನ ಫೋಟೋ ಹರಿದಾಡಿದ್ದು, ಆತನನ್ನು ಆರೋಪಿ ಎಂಬಂತೆ ಬಿಂಬಿಸಲಾಯಿತು. ಗೋವಾದ ಜನ ಉತ್ತರ ಕನ್ನಡದಿಂದ ಬರುವ ಉದ್ಯೋಗಿಗಳನ್ನು ಕೆಟ್ಟದಾಗಿ ನೋಡಲು ಪ್ರಾರಂಭಿಸಿದ್ದರು.

    ಎಸ್‌ಆರ್‌ಎಸ್ ಪ್ರಯೋಗಾಲಯದಿಂದ ನೀಡಿದ ಹಲವು ವರದಿಗಳು ವ್ಯತ್ಯಾಸ ಉಂಟಾಗಿದ್ದ ಹಿನ್ನೆಲೆಯಲ್ಲಿ ಲ್ಯಾಬ್‌ಗೆ ಗೋವಾ ಸರ್ಕಾರ ನೋಟಿಸ್ ನೀಡಿದ್ದು, ಕರೊನಾ ಪರೀಕ್ಷೆಯನ್ನು ಇನ್ನು ನಡೆಸದಂತೆ ಸೂಚಿಸಿದೆ ಎನ್ನಲಾಗಿದೆ.

    ಮೂರ‌್ನಾಲ್ಕು ದಿನಗಳಲ್ಲಿ ಸಂಪೂರ್ಣ ಸಡಿಲವಾಗಲಿದೆ ಲಾಕ್‌ಡೌನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts