More

    ಗೋ ಶಾಲೆಯಲ್ಲಿ ಮೇವಿಲ್ಲದೆ ಬಳಲುತ್ತಿವೆ ಗೋವು

    ಅಥಣಿ: ಕರೊನಾ ವೈರಸ್ ಭೀತಿ ಹಾಗೂ ಲಾಕ್‌ಡೌನ್ ಆದೇಶದಿಂದ ಜನರು ಬದುಕು ಸಾಗಿಸಲು ಹೈರಾಣಾಗಿದ್ದರೆ, ಇತ್ತ ಜಾನುವಾರುಗಳೂ ಮೇವು ಸಿಗದೇ ಬಳಲುತ್ತಿವೆ.

    ಇದಕ್ಕೆ ಸಾಕ್ಷಿ ಪಟ್ಟಣದ ಹೊರ ವಲಯದಲ್ಲಿರುವ ತಂಗಡಿ-ಸಿನ್ನಾಳ ರಸ್ತೆಯಲ್ಲಿನ ಶ್ರೀಕೃಷ್ಣ ಗೋ ಶಾಲೆಯಲ್ಲಿನ 18 ಗೋವುಗಳು ಆಹಾರವಿಲ್ಲದೇ ಪರಿತಪಿಸುತ್ತಿವೆ. ಸಮಾನ ಮನಸ್ಕ ಯುವಕರ ಬಳಗದವರು ಈ ಗೋಶಾಲೆ ನಡೆಸುತ್ತಿದ್ದಾರೆ. ಸಾರ್ವಜನಿಕರಿಂದ, ದಾನಿಗಳಿಂದ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಾಯದಿಂದ ನಿತ್ಯವೂ ಗೋವುಗಳಿಗೆ ಮೇವು, ಹಿಂಡಿ ಬರುತ್ತಿತ್ತು. ಆದರೆ, ಈಗ ಇದು ನಿಂತು ಹೋಗಿದೆ. ಕಳೆದ ಒಂದು ತಿಂಗಳಿನಿಂದ ಗೋವುಗಳಿಗೆ ಸರಿಯಾಗಿ ಮೇವು ಸಿಗುತ್ತಿಲ್ಲ. ಕರೊನಾ ವೈರಸ್ ಭೀತಿ ಮತ್ತು ಲಾಕ್‌ಡೌನ್ ಆದೇಶದಿಂದ ಗ್ರಾಮೀಣ ಜನರು ಗೋಶಾಲೆಯತ್ತ ಬರುತ್ತಿಲ್ಲ. ಹೀಗಾಗಿ, ಗೋವುಗಳ ರಕ್ಷಣೆ ಜತೆಗೆ, ಆಹಾರ ಸಮಸ್ಯೆ ಎದುರಾಗಿದೆ. ಕರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ ಗೋವುಗಳ ರಕ್ಷಣೆಗೆ ನೆರವು ನೀಡಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂಬುದು ಪ್ರಜ್ಞಾವಂತರ ಆಶಯವಾಗಿದೆ.

    ಮೇವು ದಾನ ಮಾಡಲು ಕೋರಿಕೆ

    ಗೋ ಶಾಲೆಯಲ್ಲಿನ ಗೋವುಗಳಿಗೆ ಮೇವು ಕೊರತೆಯಾಗಿದೆ. ರೈತರು ಹಾಗೂ ದಾನಿಗಳು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆ ಅಥವಾ ಮೇವು ಇದ್ದರೆ ಸಾಧ್ಯವಾದಷ್ಟು ಗೋಶಾಲೆಗೆ ತಲುಪಿಸಿದರೆ ಈ ಗೋವುಗಳನ್ನು ಉಳಿಸಿಕೊಳ್ಳಲು ಸಾಧ್ಯ. ಸಾರ್ವಜನಿಕರು, ವ್ಯಾಪಾರಿಗಳು ಸಹಾಯ ಮಾಡಬೇಕು ಎಂದು ಗೋಶಾಲೆಯ ಸಂಘಟಕರು ಮನವಿ ಮಾಡಿದ್ದಾರೆ. ಗೋ ಶಾಲೆಯವರ ಸಂಪರ್ಕಕ್ಕೆ ಮೊ. 9964984949

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts