More

    ಜಿಎನ್‌ಆರ್, ಬಡಿಗೇರ, ಶರಣು ನಿಧನಕ್ಕೆ KUWJ ಸಂತಾಪ

    ಬೆಂಗಳೂರು:
    ನಾಡಿನ ಹಿರಿಯ ಪತ್ರಕರ್ತರಾದ ಜಿ.ಎನ್.ರಂಗನಾಥರಾವ್, ಹಿರಿಯ ಡಿಸೈನರ್ ನಾಗಲಿಂಗಪ್ಪ ಬಡಿಗೇರ, ವಿಜಯವಾಣಿ ವರದಿಗಾರ ಶರಣು ಪಾಟೀಲ ಅವರುಗಳ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ಸಂತಾಪ ವ್ಯಕ್ತಪಡಿಸಿದೆ. ಅವರುಗಳ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

    ಜಿ.ಎನ್.ರಂಗನಾಥರಾವ್:
    ಲೇಖಕ, ಅನುವಾದಕರಾಗಿಯೂ ಗಮನ ಸೆಳೆದಿದ್ದ ಜಿಎನ್‌ಆರ್, ಅರವತ್ತರ ದಶಕದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಪ್ರಜಾವಾಣಿ ಪತ್ರಿಕೆಯಲ್ಲಿ ದಶಕಗಳ ಕಾಲ ವೃತ್ತಿ ಬದುಕು ಮುಂದುವರಿಸಿದ್ದಲ್ಲದೆ, ಆ ಪತ್ರಿಕೆಯ ಸಂಪಾದಕರಾಗಿ ನಿವೃತ್ತರಾದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು.
    ಬಹುರೂಪಿ ಹೊರತಂದಿದ್ದ ಜಿಎನ್‌ಆರ್ ಅವರ ಆ ಪತ್ರಿಕೋದ್ಯಮ ಪುಸ್ತಕವನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂೃಜೆ)ದ ಸಭಾಂಗಣದಲ್ಲಿ ವರ್ಷದ ಹಿಂದೆ ಬಿಡುಗಡೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಪತ್ರಿಕೋದ್ಯಮ ವೃತ್ತಿ ಘನತೆಯ ಬಗ್ಗೆ ಮಾತನಾಡಿದ್ದೆ ಕೊನೆಯ ಮಾತಾಯಿತು. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಅವರು 81ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದರು. ಸುದ್ದಿಮನೆಯಲ್ಲಿ ಹಿರಿಯಣ್ಣರಾಗಿದ್ದ ಜಿಎನ್‌ಆರ್, ಆದರ್ಶದ ಪತ್ರಿಕೋದ್ಯಮಕ್ಕೆ ಜೀವ ತುಂಬಿದ ಚೈತನ್ಯದ ಜೀವ ಎಂದು KUWJ ಸ್ಮರಿಸಿದೆ.

    ನಾಗಲಿಂಗಪ್ಪ ಬಡಿಗೇರ:
    ಪುಟ ವಿನ್ಯಾಸಕರಾಗಿ (ಡಿಸೈನರ್) ಆಗಿ ಸುದ್ದಿಮನೆಯಲ್ಲಿ ಗಮನ ಸೆಳೆದಿದ್ದ ನಾಗಲಿಂಗಪ್ಪ ಬಡಿಗೇರ ಅವರು, ಒಂದೂವರೆ ದಶಕಗಳ ಕಾಲ ವಿಜಯ ಕರ್ನಾಟಕದಲ್ಲಿ ಮತ್ತು ಕನ್ನಡ ಪ್ರಭ ಪತ್ರಿಕೆ ಸೇರಿದಂತೆ ಹಲವು ಮಾಧ್ಯಮದಲ್ಲಿ ಕೆಲಸ ಮಾಡಿದವರು. ಕೊಪ್ಪಳ ಜಿಲ್ಲೆ ಯಲಬುರ್ಗ ತಾಲೂಕು ಸಂಗನಾಳ ಗ್ರಾಮದ ಬಡಿಗೇರ ಅವರು, ವಿಜಯ ಕರ್ನಾಟಕ ಮತ್ತು ಕನ್ನಡ ಪ್ರಭ ಮಾಸ್ಟರ್ ಹೆಡ್ ಕೂಡ ಮಾಡುವ ಮೂಲಕ ತಮ್ಮ ಕ್ರೀಯಾಶೀಲತೆಯನ್ನು ಮೆರೆದಿದ್ದರು. ಹಿರಿಯ ಡಿಸೈನರ್ ಬಡಿಗೇರ ಅವರು ಇಷ್ಟು ಬೇಗ ಹೃದಯಘಾತದಿಂದ ಮೃತಪಟ್ಟಿದ್ದು ನೋವಿನ ಸಂಗತಿ ಎಂದು KUWJ ಶೋಕಿಸಿದೆ.

    ಶರಣು ಪಾಟೀಲ:
    ವಿಜಯವಾಣಿ, ಕನ್ನಡಮ್ಮ, ಈಟಿವಿ ಭಾರತ್ ಸೇರಿದಂತೆ ಹಲವು ಮಾಧ್ಯಮದಲ್ಲಿ ಕೆಲಸ ಮಾಡಿದ್ದ ಕ್ರೀಯಾಶೀಲ ವರದಿಗಾರ ಶರಣು ಪಾಟೀಲ(50) ತಮ್ಮದೇ ಆದ ರೀತಿಯಲ್ಲಿ ಸುದ್ದಿ ಮನೆಯಲ್ಲಿ ಗುರುತಿಸಿಕೊಂಡಿದ್ದರು. ವಿಜಯಪುರ ವಿಜಯವಾಣಿ ವರದಿಗಾರನಾಗಿದ್ದ ಶರಣು ಅವರು ಚಿಕ್ಕ ವಯಸ್ಸಿಗೆ ಕೊನೆಯುಸಿರೆಳೆದಿದ್ದು ನೋವಿನ ಸಂಗತಿ ಎಂದು KUWJ ಶೋಕಿಸಿದೆ.

    ಜಿಎನ್‌ಆರ್, ಬಡಿಗೇರ, ಶರಣು ನಿಧನಕ್ಕೆ KUWJ ಸಂತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts