More

    ಟ್ರೋಲ್‌ಗಳಿಗೆ ದಿಟ್ಟ ಉತ್ತರ ನೀಡಿದ ಆಸೀಸ್​ ಕ್ರಿಕೆಟಿಗ ಮ್ಯಾಕ್ಸ್‌ವೆಲ್ ಅವರ ಭಾರತೀಯ ಗೆಳತಿ!

    ಮೆಲ್ಬೋರ್ನ್: ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಗೆಳತಿ ವಿನಿ ರಾಮನ್ ಭಾರತ ಮೂಲದವರು. ಇವರಿಬ್ಬರು ಈಗಾಗಲೆ ಭಾರತೀಯ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಈ ನಡುವೆ, ಇತ್ತೀಚೆಗೆ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸಿದ್ದ ಮ್ಯಾಕ್ಸ್‌ವೆಲ್‌ರನ್ನು ಕೈಹಿಡಿಯುತ್ತಿರುವ ಬಗ್ಗೆ ವಿನಿ ರಾಮನ್ ಅವರನ್ನು ಕೆಲ ಭಾರತೀಯರು ಟ್ರೋಲ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ವಿನಿ ರಾಮನ್ ದಿಟ್ಟ ಉತ್ತರವನ್ನೂ ನೀಡಿದ್ದಾರೆ.

    ವಿನಿ ರಾಮನ್ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಮ್ಯಾಕ್ಸ್‌ವೆಲ್ ಜತೆಗಿನ ಹಳೆಯ ಚಿತ್ರವೊಂದನ್ನು ಪೋಸ್ಟ್ ಮಾಡಿ, ಯುಎಇಯಲ್ಲಿ ಐಪಿಎಲ್ ಆಡುತ್ತಿರುವ ಗೆಳೆಯನನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಕೆಲ ನೆಟ್ಟಿಗರು, ಮ್ಯಾಕ್ಸ್‌ವೆಲ್ ಅವರ ಮಾನಸಿಕ ಆರೋಗ್ಯ ಸಮಸ್ಯೆಯ ವಿಷಯವನ್ನು ಮುಂದಿಟ್ಟುಕೊಂಡು ವಿನಿ ರಾಮನ್ ಅವರನ್ನು ಟ್ರೋಲ್ ಮಾಡಿದ್ದರು.

    ‘ಮಾನಸಿಕ ಆರೋಗ್ಯ ಸರಿಯಿಲ್ಲದ ಆ ವ್ಯಕ್ತಿಯನ್ನು ಬಿಟ್ಟುಬಿಡು’, ‘ನಿನಗೆ ಭಾರತದ ಹುಡುಗರೇ ಯಾರಾದರೂ ಸಿಗುತ್ತಾರೆ’ ಎಂದು ಕೆಲವರು ಕಮೆಂಟ್ ಹಾಕಿದ್ದರೆ, ಇನ್ನು ಕೆಲವರು, ‘ನಿನಗೆ ಭಾರತೀಯರು ಯಾರೂ ಸಿಗಲಿಲ್ಲವೇ? ಆ ವಿದೇಶೀಯನೇ ಸಿಕ್ಕಿದನೇ’ ಎಂದು ಪ್ರಶ್ನಿಸಿದ್ದರು. ಕಳೆದ ವರ್ಷ ಮ್ಯಾಕ್ಸ್​ವೆಲ್​ ಮಾನಸಿಕ ಆರೋಗ್ಯ ಸಮಸ್ಯೆಯಿಂದಾಗಿ ಕ್ರಿಕೆಟ್​ನಿಂದ ಬಿಡುವು ಪಡೆದಿದ್ದನ್ನು ನೆಟ್ಟಿಗರು ಟೀಕೆಗೆ ಬಳಸಿಕೊಂಡಿದ್ದಾರೆ.

    ಇದನ್ನೂ ಓದಿ: ಆಸ್ಟ್ರೇಲಿಯಾದ ಸರ್ಫಿಂಗ್ ಕ್ರೀಡಾಪಟು ಈಗ ನೀಲಿಚಿತ್ರ ತಾರೆ!

    ತಮ್ಮ ಬಗೆಗಿನ ಕೆಟ್ಟ ಕಮೆಂಟ್‌ಗಳಿಗೆ ದಿಟ್ಟ ಉತ್ತರವನ್ನೇ ನೀಡಿರುವ ವಿನಿ ರಾಮನ್, ‘ಸಾಮಾನ್ಯವಾಗಿ ನಾನು ಯಾವುದೇ ಕಮೆಂಟ್‌ಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಕೇವಲ ಗಮನಸೆಳೆಯುವ ಸಲುವಾಗಿ ಟ್ರೋಲ್‌ಗಳನ್ನು ಮಾಡಲಾಗುತ್ತದೆ ಎಂದು ಗೊತ್ತಿದೆ. ಆದರೆ 6 ತಿಂಗಳ ಲಾಕ್‌ಡೌನ್ ಸಮಯದಲ್ಲಿ ನಾನು ಈ ಅವಿವೇಕಿಗಳಿಗೆ ಬುದ್ದಿ ಕಲಿಸಲು ಸಾಕಷ್ಟು ಸಮಯ ಹೊಂದಿದ್ದೇನೆ. ಬೇರೆಯೇ ಮೈಬಣ್ಣದ ವ್ಯಕ್ತಿಯನ್ನು ಪ್ರೀತಿಸುವುದೆಂದರೆ ನಿಮ್ಮನ್ನು ಮಾರಿಕೊಳ್ಳುವುದು ಎಂದರ್ಥವಲ್ಲ. ಬಿಳಿಯ ವ್ಯಕ್ತಿಯನ್ನು ಪ್ರೀತಿಸುವುದರಿಂದ ನಾನು ಭಾರತೀಯಳಾಗಿರುವುದಕ್ಕೆ ಮುಜುಗರಗೊಂಡಿದ್ದೇನೆ ಎಂದೂ ಅರ್ಥವಲ್ಲ. ಬಿಳಿಯ ವ್ಯಕ್ತಿಯನ್ನು ಪ್ರೀತಿಸುವುದು ನನ್ನ ಆಯ್ಕೆ. ಬೇರೆಯವರು ಏನು ಯೋಚಿಸುತ್ತಾರೆ ಎಂಬ ಬಗ್ಗೆ ನಾನು ಚಿಂತಿಸುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗಳಿಗೆ ದಿಟ್ಟ ಉತ್ತರ ನೀಡಿರುವ ಭಾವಿ ಪತ್ನಿಯ ಬಗ್ಗೆ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಕೆಲ ವ್ಯಕ್ತಿಗಳು ಸ್ವಾಭಾವಿಕವಾಗಿಯೇ ಜಿಗುಪ್ಸೆ ಹುಟ್ಟಿಸುವವರಾಗಿರುತ್ತಾರೆ’ ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ವಿನಿ ರಾಮನ್ ಸದ್ಯ ಮೆಲ್ಬೋರ್ನ್‌ನಲ್ಲಿದ್ದು, ಅಲ್ಲಿ ಈಗ 6 ತಿಂಗಳ ಲಾಕ್‌ಡೌನ್ ಜಾರಿಯಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts