More

    ಟೀಮ್ ಇಂಡಿಯಾ ಗೆಲುವು ಕಸಿದ ಗ್ಲೆನ್ ಮ್ಯಾಕ್ಸ್‌ವೆಲ್: ಉಪನಾಯಕ ಋತುರಾಜ್ ಗಾಯಕ್ವಾಡ್ ಶತಕದ ಆಟ ವ್ಯರ್ಥ

    ಗುವಾಹಟಿ: ಉಪನಾಯಕ ಋತುರಾಜ್ ಗಾಯಕ್ವಾಡ್ (123*, 57 ಎಸೆತ, 13 ಬೌಂಡರಿ, 7 ಸಿಕ್ಸರ್) ಅಬ್ಬರದ ಶತಕದ ನಡುವೆಯೂ ಭಾರತ ತಂಡ ಮೂರನೇ ಟಿ20ಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 5 ವಿಕೆಟ್‌ಗಳಿಂದ ಪರಾಭವಗೊಂಡಿದೆ. ಗ್ಲೆನ್ ಮ್ಯಾಕ್ಸ್‌ವೆಲ್ (104*ರನ್, 48 ಎಸೆತ, 8 ಬೌಂಡರಿ, 8 ಸಿಕ್ಸರ್) ಶತಕದ ಸಾಹಸದಿಂದ ಸೂರ್ಯಕುಮಾರ್ ಬಳಗಕ್ಕೆ ಹ್ಯಾಟ್ರಿಕ್ ಗೆಲುವು ತಪ್ಪಿಸಿದ ಆಸೀಸ್, ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿ 5 ಪಂದ್ಯಗಳ ಸರಣಿಯನ್ನು ಜೀವಂತವಿರಿಸಿದೆ.

    ಬರ್ಸಾಪುರ ಅಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಆರಂಭಿಕ ಆಘಾತದ ಬಳಿಕ, ಋತುರಾಜ್ – ತಿಲಕ್ ವರ್ಮ (31*) ಜೋಡಿ 4ನೇ ವಿಕೆಟ್‌ಗೆ ಕಲೆಹಾಕಿದ 149 ರನ್‌ಗಳ ಜತೆಯಾಟದ ಬಲದಿಂದ ಭಾರತ 3 ವಿಕೆಟ್‌ಗೆ 222 ರನ್ ಪೇರಿಸಿತು. ಪ್ರತಿಯಾಗಿ ಆಲ್ರೌಂಡರ್ ಮ್ಯಾಕ್ಸ್‌ವೆಲ್ ಶತಕದ ಸಾಹಸದಿಂದ ಆಸೀಸ್ ತಂಡ ಭರ್ತಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 225 ರನ್‌ಗಳಿಸಿ ಜದ ನಗೆ ಬೀರಿತು.

    ಮ್ಯಾಕ್ಸ್‌ವೆಲ್ ಹೋರಾಟ: ಏಕದಿನ ವಿಶ್ವಕಪ್ ೈನಲ್ ಹೀರೋ ಟ್ರಾವಿಸ್ ಹೆಡ್ (35) ಹಾಗೂ ಆರೋನ್ ಹಾರ್ಡಿ (16) ಜೋಡಿ ಆಸೀಸ್ ಚೇಸಿಂಗ್‌ಗೆ ಬಿರುಸಿನ ಆರಂಭ ಒದಗಿಸಿತು. ಇವರಿಬ್ಬರು ಮೊದಲ ವಿಕೆಟ್‌ಗೆ 47 ರನ್ ಕಸಿದರು. 5ನೇ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಈ ಜೋಡಿಗೆ ಬ್ರೇಕ್ ಹಾಕಿದರು. ಬಳಿಕ 6ನೇ ಓವರ್‌ನಲ್ಲಿ ಹೆಡ್, ಆವೇಶ್ ಖಾನ್‌ಗೆ ವಿಕೆಟ್ ಒಪ್ಪಿಸಿದರೆ, ರವಿ ಬಿಷ್ಣೋಯಿ ಎಸೆದ ಮರು ಓವರ್‌ನಲ್ಲಿ ಜೋಸ್ ಇಂಗ್ಲಿಸ್ (10) ಬೌಲ್ಡ್ ಆದರು. 4ನೇ ವಿಕೆಟ್‌ಗೆ ಜತೆಯಾದ ಮ್ಯಾಕ್ಸ್‌ವೆಲ್ ಹಾಗೂ ಮಾರ್ಕಸ್ ಸ್ಟೋಯಿನಿಸ್ (17) 60 ರನ್ ಕಸಿದು ಪ್ರತಿರೋಧ ತೋರಿದರು. 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಮ್ಯಾಕ್ಸ್‌ವೆಲ್, ಭಾರತದ ಅನನುಭವಿ ಬೌಲರ್‌ಗಳನ್ನು ದಂಡಿಸಿದರು. ಮುರಿಯದ 6ನೇ ವಿಕೆಟ್‌ಗೆ ಮ್ಯಾಕ್ಸ್‌ವೆಲ್- ನಾಯಕ ಮ್ಯಾಥ್ಯೂ ವೇಡ್ (28*) ಜೋಡಿ 40 ಎಸೆತಗಳಲ್ಲಿ 91 ರನ್ ಕಸಿದು ಗೆಲುವಿನ ದಡ ಸೇರಿಸಿತು. ಅಂತಿಮ 3 ಓವರ್‌ಗಳಲ್ಲಿ 49 ರನ್ ಅಗತ್ಯವಿದ್ದಾಗ 18ನೇ ಓವರ್‌ನಲ್ಲಿ ಪ್ರಸಿದ್ಧ ಕೃಷ್ಣ ಕೇವಲ 6 ರನ್ ನೀಡಿದರೆ, ನಂತರದ ಓವರ್‌ನಲ್ಲಿ ಅಕ್ಷರ್ ಪಟೇಲ್ 22 ರನ್ ಬಿಟ್ಟುಕೊಟ್ಟರು. ಅಂತಿಮ ಓವರ್‌ನಲ್ಲಿ 23 ರನ್ ಕಸಿದ ಗ್ಲೆನ್ ಮ್ಯಾಕ್ಸ್‌ವೆಲ್ 47 ಎಸೆತಗಳಲ್ಲಿ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts