More

    ಮಂಜು ಕರಗದಂತೆ ಹಿಮಪರ್ವತಗಳಿಗೆ ಬೃಹತ್​ ಟಾರ್ಪಲಿನ್​ ಹೊದಿಕೆ

    ನವದೆಹಲಿ: ಜಾಗತಿಕ ತಾಪಮಾನ ಹೆಚ್ಚಳದಿಂದ ಹಿಮಪರ್ವತಗಳು ತುಂಬಾ ತ್ವರಿತವಾಗಿ ಕರಗುತ್ತಿವೆ. ಇದನ್ನು ತಡೆಗಟ್ಟಲು ಜಾಗತಿಕ ತಾಪಮಾನ ಹೆಚ್ಚಳ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಕರಗುವಿಕೆ ನಿರಂತರವಾಗಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಹಿಮಪರ್ವತಗಳಿಗೆ ಬೃಹತ್​ ಟಾರ್ಪಲಿನ್​ ಹೊದಿಕೆ ಹಾಕುವ ಮೂಲಕ ಮಂಜು ಕರಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.

    ಇದು ಭಾರತದಲ್ಲಿ ಅಲ್ಲ, ಬದಲಿಗೆ ಉತ್ತರ ಇಟಲಿಯಲ್ಲಿರುವ ಹಿಮಪರ್ವತಗಳಿಗೆ ಈ ರೀತಿ ಬೃಹತ್​ ಟಾರ್ಪಲಿನ್​ ಹೊದಿಕೆಗಳನ್ನು ಹೊದಿಸಲಾಗುತ್ತಿದೆ. ಪ್ರೆಸೆನ್ನಾ ಗ್ಲೇಸಿಯರ್​ನಲ್ಲಿ ಹಿಮ ಕರಗುವಿಕೆ ಹೆಚ್ಚಾಗಿದೆ. ಇದನ್ನು ತಡೆಯಲು 1 ಲಕ್ಷ ಚದರ ಮೀಟರ್​ ವ್ಯಾಪ್ತಿಯ ಹಿಮಪರ್ವತಗಳಿಗೆ ಟಾರ್ಪಲಿನ್​ ಹೊದಿಕೆ ತೊಡಿಸಲಾಗುತ್ತಿದೆ.

    ಈ ಪ್ರದೇಶ ಸ್ಕೀಯಿಂಗ್​ಗೆ ತುಂಬಾ ಪ್ರಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಹಿಮಪರ್ವತಗಳಲ್ಲಿನ ಮಂಜು ಕರಗದಂತೆ ತಡೆಯಲು ಇಟಲಿ ಈ ಕ್ರಮ ಕೈಗೊಳ್ಳುತ್ತಿದೆ. ಸ್ಕೀಯಿಂಗ್​ ಋತು ಕೊನೆಗೊಂಡು, ಬೇಸಿಗೆ ತುರುಸುಗೊಳ್ಳುತ್ತಿರುವಂತೆ ಅಲ್ಲಿನ ಅಧಿಕಾರಿಗಳು ಪ್ರತಿವರ್ಷವೂ ಹಿಮಪರ್ವತಗಳಿಗೆ ಟಾರ್ಪಲಿನ್​ ಹೊದಿಗೆ ಹೊದಿಸುತ್ತಾರೆ.

    ಇಟಲಿಯ ಕಾರೊಸೆಲ್ಲೋ-ಟೊನಾಲೆ ಸಂಸ್ಥೆ 2008ರಲ್ಲಿ ಹಿಮಪರ್ವತಗಳ ರಕ್ಷಣೆಗೆ ಮುಂದಾಗಿತ್ತು. 30 ಸಾವಿರ ಚದರ ಮೀಟರ್​ ಹಿಮಪರ್ವತಗಳಿಗೆ ಇದು ಮೊದಲ ಬಾರಿಗೆ ಟಾರ್ಪಲಿನ್​ ಹೊದಿಕೆ ಹಾಕಿ ರಕ್ಷಿಸಿತ್ತು. 1993ರಿಂದ ಪ್ರೆಸೆನ್ನಾ ಗ್ಲೇಸಿಯರ್​ ಮೂರನೇ ಒಂದು ಭಾಗದಷ್ಟು ಹಿಮವನ್ನು ಕಳೆದುಕೊಂಡಿದೆ. ಇದನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಿದೆ ಎಂದು ಕಾರೊಸೆಲ್ಲೋ-ಟೊನಾಲೆಯ ಮುಖ್ಯಸ್ಥ ಡೇವಿಡ್​ ಪಾನಿಜಾ ಹೇಳಿದ್ದಾರೆ.

    ಇದನ್ನೂ ಓದಿ: ಟೆಂಟ್​ ತೆಗೆಯಿರಿ ಎಂದು ಹೇಳಲು ಹೋದ ಭಾರತೀಯ ಯೋಧರ ಮೇಲೆ ಚೀನಿಯರ ದಾಳಿ

    ಲೊಂಬಾರ್ಡಿ ಮತ್ತು ಟ್ರೆಂಟಿನೊ ಆಲ್ಟೋ ಆಡಿಜ್​ ವಲಯದಲ್ಲಿ 2,700ರಿಂದ 3 ಸಾವಿರ ಮೀಟರ್​ ಎತ್ತರದಲ್ಲಿ ಡೇವಿಡ್​ ಪಾನಿಜಾ ಅವರ ತಂಡ ಟಾರ್ಪಲಿನ್​ ಹೊದಿಕೆ ಹೊದಿಸಲಾರಂಭಿಸಿದೆ. ಇದು ಜಿಯೋಟೆಕ್ಸ್​ಟೈಲ್​ ಟಾರ್ಪಲಿನ್​ಗಳಾಗಿದ್ದು, ಸೂರ್ಯನ ಬೆಳಕು ತಾಗದಂತೆ ನೋಡಿಕೊಳ್ಳುತ್ತವೆ. ಜತೆಗೆ ಹೊರಗಿನ ತಾಪಮಾನಕ್ಕಿಂತಲೂ ಕಡಿಮೆ ತಾಪಮಾನ ಕೆಳಭಾಗದಲ್ಲಿ ಇರುವಂತೆ ಮಾಡುತ್ತವೆ ಎಂದು ಅವರು ವಿವರಿಸಿದ್ದಾರೆ.

    ಆಸ್ಟ್ರಿಯಾದ ಗ್ಲೇಸಿಯರ್​ಗಳಿಗೂ ಇದೇ ರೀತಿಯ ಟಾರ್ಪಲಿನ್​ ಹೊದಿಕೆಗಳನ್ನು ಹಾಕಲಾಗುತ್ತದೆ. ಆದರೆ, ಅವು ಗಾತ್ರದಲ್ಲಿ ತುಂಬಾ ಸಣ್ಣದಾಗಿವೆ. ಆದರೆ, ಅಂದಾಜು 34,091 ರೂ. ಮೌಲ್ಯದ ಟಾರ್ಪಲಿನ್​ ಸ್ಟ್ರಿಪ್​ಗಳನ್ನು 70 ಮೀಟರ್​ X 5 ಮೀಟರ್​ ಅಳತೆಯ ಸ್ಟ್ರಿಪ್​ಗಳನ್ನು ಹೊಲಿದು ಪ್ರೆಸನ್ನಾ ಗ್ಲೇಸಿಯರ್​ಗೆ ಹಾಕಲಾಗುತ್ತದೆ. ಅವುಗಳು ಹಾರದಂತೆ ಮರಳಿನ ಚೀಲಗಳನ್ನು ಇರಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

    ಸೆಪ್ಟೆಂಬರ್​ನಲ್ಲಿ ಟಾರ್ಪಲಿನ್​ ಅನ್ನು ತೆರೆಯಲು ಆರಂಭಿಸಲಾಗುತ್ತದೆ. ಈ ಕಾರ್ಯಾಚರಣೆ ಪೂರ್ಣಗೊಳಿಸಲು ಆರು ತಿಂಗಳು ಬೇಕಾಗುತ್ತದೆ. ಟಾರ್ಪಲಿನ್​ ತೆಗೆದ ಬಳಿಕವೂ ಹಿಮ ಹಾಗೆಯೇ ಇರುವುದನ್ನು ನೋಡಲು ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.

    ಪರಿಸ್ಥಿತಿ ಕೈಮೀರುವಂತಿದ್ದರೆ ಮುಲಾಜಿಲ್ಲದೆ ಶಸ್ತ್ರಾಸ್ತ್ರ ಬಳಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts