More

    ಪರಿಸ್ಥಿತಿ ಕೈಮೀರುವಂತಿದ್ದರೆ ಮುಲಾಜಿಲ್ಲದೆ ಶಸ್ತ್ರಾಸ್ತ್ರ ಬಳಸಿ

    ನವದೆಹಲಿ: ವಾಸ್ತವ ಗಡಿರೇಖೆ ಬಳಿ ಚೀನಿಯರು ಹೆಚ್ಚಿನ ಉದ್ಧಟತನ ತೋರಿ, ಪರಿಸ್ಥಿತಿ ಕೈಮೀರುವಂತಿದ್ದರೆ ಯಾವುದೇ ಮುಲಾಜಿಲ್ಲದೆ ಶಸ್ತ್ರಾಸ್ತ್ರಗಳನ್ನು ಬಳಸುವಂತೆ ಸರ್ಕಾರ ಭಾರತೀಯ ಸೇನಾಪಡೆ ಯೋಧರಿಗೆ ಸೂಚನೆ ರವಾನಿಸಿದೆ.

    ಗಲ್ವಾನ್​ ನದಿಯ ಬಳಿ ಉಂಟಾದ ಘರ್ಷಣೆಯ ನಂತರದಲ್ಲಿ ಚೀನಾದೊಂದಿಗಿನ ಜಟಾಪಟಿಯ ನಿಯಮಗಳನ್ನು ಬದಲಿಸಿರುವ ಕೇಂದ್ರ ಸರ್ಕಾರ ಪರಿಸ್ಥಿತಿ ತೀರಾ ಕೈಮೀರುತ್ತಿದೆ ಎಂದಾದರೆ, ಶಸ್ತ್ರಾಸ್ತ್ರಗಳ ಬಳಕೆಗೆ ಹಿಂದೆಮುಂದೆ ಆಲೋಚಿಸದಂತೆ ಹೇಳಿದೆ.

    ಎಲ್​ಎಸಿ ಬಳಿ ಪರಿಸ್ಥಿತಿಯನ್ನು ಆಧರಿಸಿ ದಾಳಿ ಅಥವಾ ಪ್ರತಿದಾಳಿ ಕೈಗೊಳ್ಳಲು ಭಾರತೀಯ ಸೇನಾಪಡೆಗೆ ಮುಕ್ತ ಅವಕಾಶ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಬೆನ್ನಲ್ಲೇ ಇಂಥ ಒಂದು ನಿರ್ಧಾರ ಹೊರಬಿದ್ದಿದೆ.

    ಇದನ್ನೂ ಓದಿ: ಟೆಂಟ್​ ತೆಗೆಯಿರಿ ಎಂದು ಹೇಳಲು ಹೋದ ಭಾರತೀಯ ಯೋಧರ ಮೇಲೆ ಚೀನಿಯರ ದಾಳಿ

    ಲಡಾಖ್​ನ ಪೂರ್ವ ಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಕೋರ್​ ಕಮಾಂಡರ್​ ಮಟ್ಟದ ಸಭೆ ನಡೆಯಲಿದೆ. ಆ ಸಭೆಯಲ್ಲಿ ಈ ವಿಷಯವೂ ಸೇರಿ ಇನ್ನೂ ಹಲವು ವಿಷಯಗಳು ಚರ್ಚೆಗೆ ಬರುವ ಸಾಧ್ಯತೆ ಇರುವುದಾಗಿ ಹೇಳಲಾಗಿದೆ.

    1996 ಮತ್ತು 2005ರಲ್ಲಿನ ಒಪ್ಪಂದದ ಪ್ರಕಾರ ಎಲ್​ಎಸಿಯ 2 ಕಿ.ಮೀ. ವ್ಯಾಪ್ತಿಯಲ್ಲಿ ಭಾರತ ಮತ್ತು ಚೀನಾ ಯೋಧರು ಯಾವುದೇ ಸ್ಫೋಟಕಗಳನ್ನಾಗಲಿ ಅಥವಾ ಶಸ್ತ್ರಾಸ್ತ್ರಗಳನ್ನಾಗಲಿ ಬಳಸುವುದಿಲ್ಲ. ಆದರೆ ಅಂದಾಜು 45 ವರ್ಷಗಳ ಬಳಿಕ ಗಲ್ವಾನ್​ ನದಿಯ ಬಳಿ ರಕ್ತಸಿಕ್ತ ಘರ್ಷಣೆ ಉಂಟಾದ ಹಿನ್ನೆಲೆಯಲ್ಲಿ ಭಾರತ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ.

    ಚೀನಿ ಯೋಧರು ಬಾಲ ಬಿಚ್ಚಿದರೆ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts