More

    ಉತ್ತರಾಖಂಡದಲ್ಲಿ ಮತ್ತೆ ಹಿಮ ಯಮ: ಹಿಮಪರ್ವತ ಕುಸಿದು ಒಡೆದ ಡ್ಯಾಂ, ಹೆಚ್ಚಿದ ಪ್ರವಾಹ ಭೀತಿ

    ಚಮೋಲಿ (ಉತ್ತರಾಖಂಡ): ಇಲ್ಲಿನ ತಪೋವನ ಏರಿಯಾದಲ್ಲಿ ಹಿಮಪರ್ವತ ಕುಸಿದು ಡ್ಯಾಂ ಒಡೆದ ಪರಿಣಾಮ ಚಮೋಲಿ ಜಿಲ್ಲೆಯ ಜೋಶಿ ಮಠ ಬಳಿಯಿರುವ ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ನದಿ ಪಾತ್ರ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಪ್ರವಾಹದಿಂದ ರಿಷಿಗಂಗಾ ವಿದ್ಯುತ್​ ಯೋಜನೆಗೂ ಹಾನಿಯಾಗಿದೆ.

    ನೂರಾರು ಇಂಡೋ-ಟಿಬೆಟನ್​ ಬಾರ್ಡರ್​ ಪೊಲೀಸ್​ (ಐಟಿಬಿಪಿ) ಘಟನಾ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಅಲಕಾನಂದ ನದಿ ಪಾತ್ರದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸ ನಡೆಯುತ್ತಿದೆ. ಅನೇಕ ಮುನ್ನೆಚ್ಛರಿಕಾ ಕ್ರಮವಾಗಿ ಭಾಗಿರಥಿ ನದಿಯ ಹರಿವನ್ನು ನಿಲ್ಲಿಸಲಾಗಿದೆ.

    ಅಲಕಾನಂದ ನೀರಿನ ಹರಿವನ್ನು ತಡೆಗಟ್ಟಲು ಶ್ರೀನಗರ ಅಣೆಕಟ್ಟು ಮತ್ತು ರಿಷಿಕೇಶ ಅಣೆಕಟ್ಟು ಖಾಲಿ ಮಾಡಲಾಗಿದೆ. ಎಸ್​ಡಿಆರ್​ಎಫ್​ ತಂಡ ತುಂಬಾ ಎಚ್ಚರವಹಿಸಿದ್ದು, ನಾನು ಘಟನಾ ಸ್ಥಳಕ್ಕೆ ತೆರಳುತ್ತೇನೆಂದು ಉತ್ತರಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ರಾವತ್​ ತಿಳಿಸಿದ್ದಾರೆ.

    ಸುಮಾರು 200 ಎಸ್​ಡಿಆರ್​ಎಫ್​ ಸ್ಥಳದಲ್ಲಿ ನಿಯೋಜಿಸಲಾಗಿದೆ. ರಿಷಿಗಂಗಾ ವಿದ್ಯುತ್​ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 150ಕ್ಕೂ ಹೆಚ್ಚು ಮಂದಿ ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋಗಿದ್ದು, ಅವರ ಸುಳಿವು ಇನ್ನು ಪತ್ತೆಯಾಗಿಲ್ಲ ಎಂದು ಎಸ್​ಡಿಆರ್​ಎಫ್​ ಡಿಐಜಿ ರಿಧಿಮ್​ ಅಗರವಾಲ್​ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

    ಕಳೆ ಹಂತದ ಜಿಲ್ಲೆಗಳಲ್ಲಿ ಭಯದ ವಾತಾವರಣ ಮೂಡಿದೆ. ವಿಷ್ಣುಪ್ರಯಾಗ್​, ಜೋಶಿಮಠ, ಕರ್ಣಪ್ರಯಾಗ್​, ರುದ್ರಪ್ರಯಾಗ್​, ರಿಷಿಕೇಶ ಮತ್ತು ಹರಿದ್ವಾರದ ಜನರಿಗೆ ನದಿ ಪಾತ್ರಕ್ಕೆ ತೆರಳದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲದೆ, ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದರೆ ಮತ್ತು ನಿಮಗೆ ಯಾವುದೇ ಸಹಾಯ ಬೇಕಾದರೆ, ದಯವಿಟ್ಟು ವಿಪತ್ತು ಕಾರ್ಯಾಚರಣೆ ಕೇಂದ್ರ ಸಂಖ್ಯೆ 1070 ಅಥವಾ 9557444486 ಅನ್ನು ಸಂಪರ್ಕಿಸಿ ಎಂದು ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಷಾ ಅವರು ದೂರವಾಣಿ ಕರೆ ಮೂಲಕ ಪ್ರವಾಹ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದು, ಅಗತ್ಯ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆಂದು ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts