More

    ಹೆಣ್ಣು ಮಕ್ಕಳ ಕೈಗೆ ಮೊಬೈಲ್​ ಕೊಡುತ್ತಿರುವುದರಿಂದಲೇ ರೇಪ್​ ಆಗುತ್ತಿದೆ ಎಂದ ಮಹಿಳಾ ಆಯೋಗದ ಸದಸ್ಯೆ!

    ಲಖನೌ: ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯದ ಪ್ರಕರಣಗಳು ದಿನನಿತ್ಯ ಹೆಚ್ಚುತ್ತಲೇ ಹೋಗುತ್ತಿವೆ. ಆದರೆ ಇದಕ್ಕೆ ಹೆಣ್ಣು ಮಕ್ಕಳೂ ಕಾರಣ ಎಂದು ಉತ್ತರ ಪ್ರದೇಶದ ಮಹಿಳಾ ಆಯೋಗದ ಸದಸ್ಯೆಯೊಬ್ಬರು ಹೇಳಿದ್ದಾರೆ. ಹೆಣ್ಣು ಮಕ್ಕಳಿಗೆ ಮೊಬೈಲ್​ ಕೊಡಿಸುವುದೇ ಒಂದು ಅಪರಾಧ ಎಂದು ಆಕೆ ಹೇಳಿದ್ದಾರೆ ಎನ್ನಲಾಗಿದೆ.

    ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ ಇಂತದ್ದೊಂದು ಹೇಳಿಕೆ ನೀಡಿದ್ದಾರೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎನ್ನುತ್ತಾರೆ. ಈಗಿನ್ನೂ ಹದಿಹರೆಯಕ್ಕೆ ಬರುತ್ತಿರುವ ಹೆಣ್ಣು ಮಕ್ಕಳು ಏನು ಮಾಡುತ್ತಾರೆ ಎನ್ನುವುದನ್ನು ಅವರ ತಂದೆ ತಾಯಿ ಹೊರಬಂದು ನೋಡಬೇಕು. ಹೆಣ್ಣು ಮಕ್ಕಳ ಕೈಗೆ ಮೊಬೈಲ್​ ಕೊಡುವುದೇ ಅಪರಾಧ. ಅದರಿಂದ ಮುಂದೆ ರೇಪ್​ ಆಗುವ ಸಂಭವವೂ ಇರುತ್ತದೆ. ಹಾಗೆಯೇ ಅವರ ಮೊಬೈಲ್​ನ್ನು ತಂದೆ ತಾಯಿ ಚೆಕ್​ ಮಾಡುತ್ತಿರಬೇಕು. ಹೆಣ್ಣು ಮಕ್ಕಳು ಹೊರ ಬಂದು, ಯಾರ್ಯಾರದ್ದೋ ಜತೆ ಸಂಪರ್ಕ ಬೆಳೆಸಿ ಕಷ್ಟಕ್ಕೆ ಸಿಲುಕುತ್ತಾರೆ. ಇದನ್ನೆಲ್ಲ ತಾಯಿ ಆದವರು ಗಮನಿಸುತ್ತಿರಬೇಕು ಎಂದು ಮೀನಾ ಕುಮಾರಿ ಹೇಳಿದ್ದಾರೆ.

    ಈ ವಿಚಾರ ರಾಜ್ಯದಲ್ಲಿ ವಿರೋಧ ಪಕ್ಷಗಳ ಆಕ್ರೋಶಕ್ಕೂ ಕಾರಣವಾಗಿದೆ. ಆದರೆ ಹೇಳಿಕೆಯನ್ನು ಹಿಂಪಡೆಯದ ಮೀರಾ ಕುಮಾರಿ, ನಾನು ಹೇಳಿರುವುದರಲ್ಲಿ ಏನೂ ತಪ್ಪಿಲ್ಲ. ಹೆಣ್ಣಾಗಲೀ ಗಂಡಾಗಲೀ.. ಇನ್ನೂ ಜವಾಬ್ದಾರಿ ಬಾರದ ವಯಸ್ಸಿನಲ್ಲಿ ಮೊಬೈಲ್​ ಬಳಕೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ಇಂತಹ ಅನೇಕ ಸಮಸ್ಯೆಗಳು ಆಗುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಶಿಕ್ಷಕನೊಂದಿಗೆ ಲವ್​ನಲ್ಲಿ ಬಿದ್ದ ಯುವತಿ; ಮೃತಪಟ್ಟಿದ್ದ ಹೆಂಡತಿಯ ಇನ್​ಸ್ಟಾಗ್ರಾಂನಿಂದ ಸಿಗ್ತು ಲವ್​ ಸ್ಟೋರಿಗೆ ಟ್ವಿಸ್ಟ್​!

    ಐದು ಹೆಣ್ಣು ಮಕ್ಕಳೊಂದಿಗೆ ರೈಲಿಗೆ ತಲೆ ಕೊಟ್ಟ ಮಹಿಳೆ! ಕಂಠ ಪೂರ್ತಿ ಕುಡಿದು ಬರುತ್ತಿದ್ದವ ಈಗ ಒಬ್ಬಂಟಿ

    ಬಟ್ಟೆಯೇ ಹಾಕದೆ, ಕೇವಲ ಆಭರಣ ತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡ ಮಿಯಾ ಖಲೀಫಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts