More

    ಕೃಷ್ಣಾರ್ಜುನರ ನಡುವಿನ ಸಂವಾದವೇ ಭಗವದ್ಗೀತೆ: ಗೀತಾ ಪರಿವಾರದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಸಂಜಯ್ ಮಾಲ್ಪಾನಿ

    ಬೆಂಗಳೂರು: ಮಹಾಭಾರತದಲ್ಲಿ ನಡೆಯುವ ಪಾಂಡವ ಮತ್ತು ಕೌರವರ ನಡುವಿನ ಯುದ್ಧದ ಸಂದರ್ಭದಲ್ಲಿ ಧರ್ಮ, ಕರ್ಮ ಮತ್ತು ಮೋಕ್ಷ ಕುರಿತು ಕೃಷ್ಣ ಮತ್ತು ಅರ್ಜುನರ ನಡುವಿನ ಸಂವಾದವೇ ಭಗವದ್ಗೀತೆ. ಇದರ ಮೊದಲ ಅಧ್ಯಾಯದಲ್ಲಿ ಕೃಷ್ಣ ಏನೊಂದು ಮಾತನಾಡದೇ ಸಂವಾದ ಅರ್ಥವನ್ನು ತಿಳಿಸಿಕೊಟ್ಟಿದ್ದಾನೆ ಎಂದು ಗೀತಾ ಪರಿವಾರದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಸಂಜಯ್ ಮಾಲ್ಪಾನಿ ವಿವರಿಸಿದರು.

    ಗೀತಾ ಪರಿವಾರವು ನಗರದ ಓಕಳಿಪುರದ ಮಹೇಶ್ವರಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಗೀತಾ ಮೈತ್ರಿ ಮಿಲನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗೀತೆಯನ್ನು ಏಕೆ ಓದಬೇಕು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಿಳಿಸಿಕೊಡುವ ಮೂಲಕ ಸ್ವಾಮಿ ಶ್ರೀ ಗೋವಿಂದಗಿರಿಜೀ ಮಹಾರಾಜ್ ಅವರು ನಮ್ಮೆಲ್ಲರ ಜೀವನವನ್ನು ಹಸನುಗೊಳಿಸಿದ್ದಾರೆ. ಯಾರು ಯಾರು ಗೀತಾ ಪರಿವಾರದಲ್ಲಿ ಸೇರಿ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಭಗವದ್ಗೀತೆಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೋ ಅವರಿಗೆಲ್ಲ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

    ಇದೇ ವೇಳೆ ಸ್ವಾಮೀಜಿ ಅವರೊಂದಿಗೆ ಬಾಲ್ಯದಿಂದಲೂ ತಮಗಿರುವ ಒಡನಾಟವನ್ನು ಸ್ಮರಿಸುತ್ತ ಅವರ ಪುಸ್ತಕ ಪ್ರೇಮ, ಜ್ಞಾನ ಪ್ರಸಾರ ಕಾರ್ಯಗಳನ್ನು ವಿವರಿಸಿದರು. ಗೋವಿಂದಗಿರಿಜೀ ಮಹಾರಾಜರು ಜ್ಞಾನಿ ಮಾತ್ರವಲ್ಲ ಅವರೊಬ್ಬ ಯೋಗಿ. ತಮ್ಮಲ್ಲಿರುವ ಜ್ಞಾನವನ್ನು ಇತರರಿಗೂ ನೀಡುತ್ತ ಭಗವಂತನ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು.

    ಆನ್‌ಲೈನ್ ತಾತ್ಕಾಲಿಕ ಔಷಧ: ಕೋವಿಡ್ ಸಂಕ್ರಾಮಿಕ ಸಂದರ್ಭದಿಂದಾಗಿ ಭಗವದ್ಗೀತೆಯನ್ನು ಆನ್‌ಲೈನ್ ಮೂಲಕ ಕಲಿಸುವ ಅನಿವಾರ್ಯತೆ ಎದುರಾಯಿತು. ಆನ್‌ಲೈನ್ ಮೂಲಕ ಕಲಿಕೆ ರೋಗಕ್ಕೆ ಔಷಧ ನೀಡಿದಂತೆ. ಆದರೆ ಪರಸ್ಪರ ಕೂತು ಕಲಿಯುವುದು ಬಹಳ ಉತ್ತಮವಾದದ್ದು. ಇದು ಪರಿಸ್ಪರ ಚರ್ಚೆ, ಸಂವಾದಕ್ಕೆ ದಾರಿ ಮಾಡಿಕೊಡುತ್ತದೆ. ಮಾತ್ರವಲ್ಲ ಉತ್ತಮ ಬಾಂಧವ್ಯಕ್ಕೆ ಕಾರಣವಾಗುತ್ತದೆ. ಹಾಗೆ ನೋಡಿದರೆ ಭಗವದ್ಗೀತೆಯ ಮೊದಲ ಅಧ್ಯಾಯದಲ್ಲಿ ಅರ್ಜುನ ಹೇಳಿರುವಂತೆ ಭಾಸವಾದರೂ ಅಲ್ಲಿ ಸಂವಾದ ನಡೆಯುತ್ತದೆ. ಅಂದರೆ ಅರ್ಜುನ ಹೇಳಿದ್ದನ್ನು ಕೃಷ್ಣ ಕೇಳುತ್ತಿರುತ್ತಾನೆ. ಹಾಗಾಗಿ ಅದೊಂದು ಸಂವಾದ ಎಂದು ವಿವರಿಸುತ್ತ ಭಗವದ್ಗೀತೆಯ ಮಹತ್ವ ಹಾಗೂ ಅದನ್ನು ವಿಶ್ವದಾದ್ಯಂತ ಪ್ರಚಾರ ಮಾಡುವ ಮೂಲಕ ಕೃಷ್ಣನ ಸಂದೇಶವನ್ನು ಎಲ್ಲೆಡೆ ಸಾರಬೇಕು ಎಂದು ಹೇಳಿದರು.

    ಗೀತಾ ಪರಿವಾರದ ಉಪಾಧ್ಯಕ್ಷ ಹರಿನಾರಾಯಣ್ ವ್ಯಾಸ್ ಮಾತನಾಡಿ, ಕರ್ನಾಟಕದ ಗೀತ ಪರಿವಾರವು ಇಂದು ಸದೃಢವಾಗಿ ಬೆಳೆದು ನಿಂತಿರುವುದನ್ನು ನೋಡಿದಾಗ ಗೀತಾಪರಿವಾರದ ದಕ್ಷಿಣ ಭಾಗದ ಮುಖ್ಯಸ್ಥನಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹರ್ಷವಾಗುತ್ತಿದೆ. ಇಂದು ದಕ್ಷಿಣದಲ್ಲಿ ಗೀತಪರಿವಾರ ತನ್ನ ಪಥಾಕೆ ಹಾರಿಸಿ ಮುನ್ನಡಿ ಇರಿಸಿರುವುದಕ್ಕೆ ಇಂದು ಸೇರಿರುವ ಈ ಜನರೇ ಸಾಕ್ಷಿ. ಸ್ವಾಮೀಜಿ ಗೋವಿಂದಗಿರಿಜೀ ಅವರ ಸಂಕಲ್ಪದಿಂದಾಗಿ ಅನ್‌ಲೈನ್ ಮೂಲಕ ಗೀತಾ ಪರಿವಾರ ಜಗತ್ತಿನಾದ್ಯಂತ ಮನೆ ಮನೆಗೆ ಭಗವದ್ಗೀತೆ ತಲುಪಿಸುವ ಕಾರ್ಯ ಮಾಡುತ್ತಿದೆ. ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗೀತ ಪರಿವಾರದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು.

    ಇಂದು 5 ಲಕ್ಷ ಸಾಧಕರು ಗೀತೆಯನ್ನು ಪಠಣ ಮಾಡುತ್ತಿದ್ದಾರೆ. ಆನ್‌ಲೈನ್ ಮಾತ್ರವಲ್ಲದೆ ಆ್ಲೈನ್ ನಲ್ಲಿ ಗೀತೆಯ ಪ್ರಚಾರ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ಪ್ರತಿಯೊಬ್ಬ ಕಾರ್ಯಕರ್ತನೂ ಒಂದೊಂದು ಸಾವಿರ ಮಕ್ಕಳಿಗೆ ಗೀತೆ ಕಲಿಸುವ ಕಾರ್ಯ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಮಾಡಿರುವ ಗೀತಾವ್ರತಿಯರನ್ನು ಸನ್ಮಾನಿಸಲಾಯಿತು. ಗೀತಾ ಪರಿವಾರದ ಅಂಜಲಿ ತಪಾಡಿಯಾ, ಬೆಂಗಳೂರು ಮುಖ್ಯಸ್ಥ ಸುರೇಶ್ ಕುಂಬಾರ್ ಮೊದಲಾದವರು ಉಪಸ್ಥಿತರಿದ್ದರು.

    ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

    ಶ್ರೀಶೈಲದ ಸೂರ್ಯ ‘ಶಿಖರ ‘ ದರ್ಶನ; ಡಾ. ಚನ್ನಸಿದ್ಧರಾಮ ಜಗದ್ಗುರುಗಳ ದ್ವಾದಶ ಪೀಠಾರೋಹಣ

    ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts