More

    ‘ಹುಡುಗಿಯರು ಕ್ರಿಕೆಟ್ ಆಡುವ ಅಗತ್ಯವಿಲ್ಲ’ ಎಂದಿದ್ದರು ಗಂಗೂಲಿ! ವಿವಾದವೆಬ್ಬಿಸಿದ ಹಳೆ ವಿಡಿಯೋ

    ನವದೆಹಲಿ: ಮಹಿಳಾ ಐಪಿಎಲ್ ಆರಂಭಿಸುವ ಬಗ್ಗೆ ಬಿಸಿಸಿಐ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎಂಬ ಅಸಮಾಧಾನಗಳ ನಡುವೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಹಿಳಾ ಕ್ರಿಕೆಟ್ ಆಟದ ಬಗ್ಗೆ ಈ ಹಿಂದೊಮ್ಮೆ ನೀಡಿರುವ ಅಗೌರವದ ಹೇಳಿಕೆ ವಿವಾದಕ್ಕೀಡಾಗಿದೆ. ‘ಹುಡುಗಿಯರು ಕ್ರಿಕೆಟ್ ಆಡುವ ಅಗತ್ಯವಿಲ್ಲ’ ಎಂದು ಗಂಗೂಲಿ ಮಾತೃಭಾಷೆ ಬಂಗಾಳಿಯಲ್ಲಿ ಹೇಳಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಸುದ್ದಿಯಲ್ಲಿರುವ ವೇಳೆ ಗಂಗೂಲಿಗೆ ಇದು ಹೊಸ ತಲೆನೋವು ತಂದಿದೆ.

    ಬಂಗಾಳಿ ನ್ಯೂಸ್ ಚಾನಲ್ ‘ಎಬಿಪಿ ಆನಂದ’ಗೆ ಕೆಲ ವರ್ಷಗಳ ಹಿಂದೆ ಸಂದರ್ಶನ ನೀಡಿದ್ದ ಗಂಗೂಲಿಗೆ, ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ಕ್ರಿಕೆಟ್ ಆಡುತ್ತಿದ್ದಾರೆ. ನಿಮ್ಮ ಮಗಳು ಸನಾ ಕೂಡ ಕ್ರಿಕೆಟ್ ಆಡಲು ಬಯಸಿದರೆ ನಿಮ್ಮ ನಿಲುವು ಏನು ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಪ್ರತಿಯಾಗಿ ಗಂಗೂಲಿ, ‘ಅಮಿ ಸನಾ ಕೆ ಬಾರೋನ್ ಕೊರ್ಬೊ, ಮೆಯೆಡರ್ ಕ್ರಿಕೆಟ್ ಖೇಲಾರ್ ದೊರ್ಖಾರ್ ನೀ’ (ನಾನು ಸನಾಗೆ ಆಡಬೇಡ ಎನ್ನುತ್ತೇನೆ. ಯಾಕೆಂದರೆ ಹುಡುಗಿಯರು ಕ್ರಿಕೆಟ್ ಆಡುವ ಅಗತ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು.

    ಭಾರತದಲ್ಲಿ ಸ್ಮತಿ ಮಂದನಾ, ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮಾನ್‌ಪ್ರೀತ್ ಕೌರ್ ಅವರಂಥ ಮಹಿಳಾ ಕ್ರಿಕೆಟಿಗರು ಸಾಕಷ್ಟು ಸುದ್ದಿ ಮಾಡುತ್ತಿರುವ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡ ಗಮನಾರ್ಹ ನಿರ್ವಹಣೆಯನ್ನೇ ತೋರುತ್ತಿರುವ ವೇಳೆ ಗಂಗೂಲಿ ಅವರ ಈ ಹಳೆಯ ವಿಡಿಯೋಗೆ ಭಾರಿ ಆಕ್ರೋಶವೂ ವ್ಯಕ್ತವಾಗಿದೆ. ಈ ರೀತಿಯ ಮನಸ್ಥಿತಿ ಹೊಂದಿರುವವರು ಬಿಸಿಸಿಐ ಅಧ್ಯಕ್ಷರಾಗಿರುವುದು ಎಷ್ಟು ಸರಿ ಎಂದೂ ಟೀಕಿಸಲಾಗಿದೆ. ಕೊಹ್ಲಿ ಅಭಿಮಾನಿಗಳೂ ಗಂಗೂಲಿಗೆ ಚಾಟಿ ಬೀಸಿದ್ದಾರೆ.

    ಲಬುಶೇನ್‌ಗೆ ಜೀವದಾನಗಳ ಭರ್ಜರಿ ಲಾಭ, ಆಸೀಸ್ ಹಿಡಿತದಲ್ಲಿ ಇಂಗ್ಲೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts