More

    ಅಡ್ಡಾದಿಡ್ಡಿ ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ ಇನ್‌ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿಸಲು ಯತ್ನಿಸಿ ಯುವತಿಯರಿಬ್ಬರು ಪರಾರಿ

    ಬೆಂಗಳೂರು: ಬಳ್ಳಾರಿ ರಸ್ತೆಯಲ್ಲಿ ಅಪಾಯಕಾರಿ ಚಾಲನೆ ಮಾಡಿಕೊಂಡು ಬಂದಿದ್ದನ್ನು ಪ್ರಶ್ನಿಸಿದ್ದ ಇನ್‌ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿಸಲು ಯತ್ನಿಸಿ ಯುವತಿಯರು ಪರಾರಿಯಾಗಿದ್ದಾರೆ.

    ಲೀಲಾ ಪ್ಯಾಲೇಸ್ ಬಳಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಭಾನುವಾರ (ಏ.19) ಬೆಳಗ್ಗೆ ಯುವತಿಯರಿಬ್ಬರು ಕಾರಿನಲ್ಲಿ ಬಂದಿದ್ದರು. ಕಾರನ್ನು ಅಪಾಯಕಾರಿಯಾಗಿ ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದರು. ದೂರದಿಂದಲೇ ಕಾರು ನೋಡಿದ್ದ ಪೊಲೀಸರು, ಕಾರನ್ನು ತಡೆದಿದ್ದರು.

    ಪೊಲೀಸರ ಜೊತೆಯೇ ವಾಗ್ವಾದ ನಡೆಸಿದ್ದ ಯುವತಿ, ನಾವು ಯಾರು ಗೊತ್ತಾ? ಅಂತಾ ಬೆದರಿಕೆ ಹಾಕಿದ್ದರು. ಹೊಯ್ಸಳ ವಾಹನವನ್ನು ಸ್ಥಳಕ್ಕೆ ಕರೆಸಿದ್ದ ಪೊಲೀಸರು, ಯುವತಿಯರನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು.

    ಕಾರಿನಲ್ಲಿ ಠಾಣೆಗೆ ಬರುವುದಾಗಿ ಹೇಳಿ ಕಾರು ಹತ್ತಿದ್ದ ಯುವತಿಯರು, ಎದುರು ನಿಂತಿದ್ದ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಮೇಲೆಯೇ ಕಾರು ಹತ್ತಿಸಲು ಯತ್ನಿಸಿ ಪರಾರಿಯಾಗಿದ್ದಾರೆ. ಬೆನ್ನಟ್ಟಿದರೂ ಅವರ ಸುಳಿವು ಸಿಕ್ಕಿಲ್ಲ.

    ಯುವತಿಯರು ಮದ್ಯದ ಅಮಲಿನಲ್ಲಿದ್ದ ಬಗ್ಗೆ ಅನುಮಾನವಿತ್ತು. ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವ ಮುನ್ನವೇ ಅವರು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

    ಲಾಕ್​ಡೌನ್​ ಸಡಿಲಿಕೆ: ನಾಳೆಯಿಂದ ಯಾವೆಲ್ಲಾ ಚಟುವಟಿಕೆ ಪುನಾರಂಭವಾಗಲಿದೆ?

    ವಲಸೆ, ದಿನಗೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಸಿಕ್ತು ರಿಲೀಫ್​, ಅಂತರ ಜಿಲ್ಲೆ ಸಂಚಾರಕ್ಕೂ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts