More

    1200 ಕಿಮೀ ಸೈಕಲ್ ಓಡಿಸಿದ ಜ್ಯೋತಿಗೆ ಟ್ರಯಲ್ಸ್‌ಗೆ ಆಮಂತ್ರಣ

    ನವದೆಹಲಿ: ಲಾಕ್‌ಡೌನ್ ವೇಳೆ ತನ್ನ ಊರಿಗೆ ತೆರಳಲು ಅಪ್ಪನನ್ನು ಹಿಂದೆ ಕೂರಿಸಿಕೊಂಡು 1,200 ಕಿ.ಮೀ. ಸೈಕಲ್ ತುಳಿದ 15 ವರ್ಷದ ಬಾಲಕಿಗೆ ಸೈಕ್ಲಿಂಗ್ ಫೆಡರೇಷನ್ ಸೇರುವ ಅವಕಾಶ ದೊರಕಿದೆ.

    ಬಿಹಾರ್ ಮೂಲದ ಜ್ಯೋತಿ ಮತ್ತು ಅವಳ ತಂದೆ ಗುರುಗ್ರಾಮದಲ್ಲಿ ನೆಲೆಸಿದ್ದರು. ತಂದೆ ಬಾಡಿಗೆ ಆಟೋ ರಿಕ್ಷಾ ಓಡಿಸುತ್ತಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ಕುಟುಂಬ ಊಟಕ್ಕೂ ಪರದಾಡುವಂತಾಗಿತ್ತು. ಬಾಡಿಗೆ ರಿಕ್ಷಾವನ್ನು ಕೂಡ ಅದರ ಮಾಲೀಕ ವಾಪಸ್ ಪಡೆದಿದ್ದ.

    ಇದನ್ನೂ ಓದಿ ಕುಂಬ್ಳೆ 10 ವಿಕೆಟ್ ಕಬಳಿಸಿದ್ದ ಸ್ಟೇಡಿಯಂ ಈಗ ಏನಾಗಿದೆ ಗೊತ್ತೇ?

    ಹೀಗಾಗಿ ತಮ್ಮ ಊರಿಗೆ ಸೈಕಲ್‌ನಲ್ಲಿಯೇ ಹೊರಟ ಅಪ್ಪ- ಮಗಳು 7 ದಿನಗಳಲ್ಲಿ 1,200 ಕಿ.ಮೀ ಪ್ರಯಾಣಿಸಿ ಊರು ಸೇರಿದ್ದರು. ತಂದೆಯನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡ ಜ್ಯೋತಿ ಸೈಕಲ್ ತುಳಿದಿದ್ದಳು. 8ನೇ ತರಗತಿಯ ಈ ವಿದ್ಯಾರ್ಥಿನಿಯ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿ ಸಂಚಲನ ಸೃಷ್ಟಿಸಿತ್ತು.

    ಅದನ್ನು ಗಮನಿಸಿರುವ ಸೈಕ್ಲಿಂಗ್ ಫೆಡರೇಷನ್ ಬಾಲಕಿಯನ್ನು ಸಂಪರ್ಕಿಸಿದೆ. ಲಾಕ್‌ಡೌನ್ ಮುಗಿದ ನಂತರ ಆಕೆಗೆ ಸೈಕ್ಲಿಂಗ್ ಪರೀಕ್ಷೆ ನಡೆಸಲಿದ್ದು ಆಕೆ ತೇರ್ಗಡೆ ಹೊಂದಿದಲ್ಲಿ ಫೆಡರೇಷನ್‌ನಲ್ಲಿ ತರಬೇತಿ ನೀಡುವುದಾಗಿ ತಿಳಿಸಿದೆ.

    ಇದನ್ನೂ ಓದಿ ಐಪಿಎಲ್ ರದ್ದಾದರೆ ಕ್ರಿಕೆಟ್​ಗೆ ಕಷ್ಟ!

    ಸಚಿನ್ ಈಗ ಆಡುತ್ತಿದ್ದರೆ 1.30 ಲಕ್ಷ ರನ್ ಸಿಡಿಸುತ್ತಿದ್ದರಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts