More

    ‘ಬಾಬಾ ಜೀ, ಪ್ರಾಂಶುಪಾಲರು ನಮಗೆ ಕಿರುಕುಳ ಕೊಡುತ್ತಾರೆ..’ ಸಿಎಂ ಯೋಗಿಗೆ ರಕ್ತದಲ್ಲಿ ಪತ್ರ ಬರೆದ ಗಾಜಿಯಾಬಾದ್‌ನ ವಿದ್ಯಾರ್ಥಿನಿಯರು

    ಗಾಜಿಯಾಬಾದ್‌: ಪ್ರಾಂಶುಪಾಲರ ವಿರುದ್ಧ ಕಿರುಕುಳದ ದೂರು ಸಲ್ಲಿಸಿದ್ದ ವಿದ್ಯಾರ್ಥಿನಿಯರು, ನ್ಯಾಯಕ್ಕಾಗಿ ಒತ್ತಾಯಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

    ವೇವ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾರ್ಥಿನಿಯರು ಮುಖ್ಯಮಂತ್ರಿಗೆ ಪತ್ರ ಬರೆದು ಆರೋಪಿಗಳ ವಿರುದ್ಧ ನ್ಯಾಯ ಮತ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಾಬಾಜಿ, ‘ನಮಗೆ ನ್ಯಾಯ ಕೊಡಿಸಿ’ ಎಂದು ವಿದ್ಯಾರ್ಥಿನಿಯರು ಪತ್ರದಲ್ಲಿ ಬರೆದಿದ್ದಾರೆ.

    ಆಗಸ್ಟ್ 21 ರಂದು ವಿದ್ಯಾರ್ಥಿನಿಯರು ಶಾಲೆಯ ಪ್ರಾಂಶುಪಾಲರ ವಿರುದ್ಧ ವೇವ್ ಸಿಟಿ ಪೊಲೀಸ್ ಠಾಣೆಯಲ್ಲಿ ಕಿರುಕುಳ ನೀಡುತ್ತಿರುವುದಾಗಿ ದೂರು ಸಲ್ಲಿಸಿದ್ದರು. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದಿದ್ದಾಗ ವಿದ್ಯಾರ್ಥಿನಿಯರ ಸಂಬಂಧಿಕರು ಶಾಲೆಗೆ ಆಗಮಿಸಿದ್ದರು. ಪ್ರಾಂಶುಪಾಲರು ಸಂಬಂಧಿಕರ ವಿರುದ್ಧ ಶಾಲೆಗೆ ನುಗ್ಗಿ ಥಳಿಸಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡೂ ಕಡೆಯಿಂದ ಪ್ರಕರಣ ದಾಖಲಿಸಿಕೊಂಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದಾದ ಬಳಿಕ ವಿದ್ಯಾರ್ಥಿನಿಯರು ಮುಖ್ಯಮಂತ್ರಿಗೆ ರಕ್ತದಲ್ಲಿ ನಾಲ್ಕು ಪುಟಗಳ ಪತ್ರ ಬರೆದಿದ್ದಾರೆ.

    ಪೊಲೀಸರಿಂದ ಬೆದರಿಕೆ
    ಈ ಪ್ರಕರಣವು ಶಾಹಪುರ್ ಬಮ್ಹೇಟಾ ಗ್ರಾಮದ ಕಿಸಾನ್ ಆದರ್ಶ ಹೈಯರ್ ಸೆಕೆಂಡರಿ ಶಾಲೆಗೆ ಸಂಬಂಧಿಸಿದೆ. ಈ ವಿಷಯದಲ್ಲಿ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯರ ಪ್ರಕಾರ, ಪೊಲೀಸರು ಪ್ರತಿದಿನ ನಮ್ಮ ಮನೆಗೆ ಬಂದು ನಮ್ಮ ಪೋಷಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಮನೆಯಿಂದ ಹೊರಗೆ ಬರುವುದೇ ಕಷ್ಟವಾಗಿದ್ದು, ಶಾಲಾ ವ್ಯವಸ್ಥಾಪಕರು ಶಾಲೆಗೆ ಬರದಂತೆ ನಿರ್ಬಂಧ ಹೇರಿದ್ದಾರೆ. ಪ್ರಾಂಶುಪಾಲರು ಸಂಘದ ಪದಾಧಿಕಾರಿಯಾಗಿರುವುದರಿಂದ ಅವರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ, ನಮ್ಮ ಜೀವನ ಸಂಪೂರ್ಣ ಹಾಳಾಗುತ್ತದೆ ಪೋಷಕರು ಹಾಗೂ ಗ್ರಾಮಸ್ಥರು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ವಿದ್ಯಾರ್ಥಿನಿಯರು ಪತ್ರದಲ್ಲಿ ಹೀಗೆ ಬರೆದಿದ್ದಾರೆ…”ನಾವು ನಿಮ್ಮನ್ನು ಭೇಟಿಯಾಗಿ, ನ್ಯಾಯವನ್ನು ಕೇಳಲು ಬಯಸುತ್ತೇವೆ. ದಯವಿಟ್ಟು ತಮ್ಮನ್ನು ಭೇಟಿ ಮಾಡಲು ವ್ಯವಸ್ಥೆ ಮಾಡಿಕೊಡಿ ಎಂದು ವಿನಂತಿಸಲಾಗಿದೆ. ಇದರಿಂದ ನಮ್ಮ ಪೋಷಕರು ಮತ್ತು ವಿದ್ಯಾರ್ಥಿನಿಯರೆಲ್ಲರೂ ಬರಬಹುದು. ಸಂಪೂರ್ಣ ವಿಷಯವನ್ನು ತಿಳಿಸಬಹುದು, ನಿಮ್ಮಿಂದ ನ್ಯಾಯ ಕೇಳಬಹುದು”.

    ಹಿಜಾಬ್ ಸರಿಯಾಗಿ ಧರಿಸದ ಕಾರಣ 14 ವಿದ್ಯಾರ್ಥಿನಿಯರ ತಲೆ ಬೋಳಿಸಿದ ಶಿಕ್ಷಕಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts