More

    ನಡುನೀರಿನಲ್ಲಿ ಸಿಲುಕಿದ್ದ ಬಾಲಕಿಯರ ರಕ್ಷಣೆ: ಪ್ರಾಣವನ್ನೂ ಲೆಕ್ಕಿಸಿದೇ ಕಾಪಾಡಿದ ಯುವಕರು

    ಕೊರಟಗೆರೆ: ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿಗೆ ನೀರಿಗಿಳಿದ ಇಬ್ಬರು ಬಾಲಕಿಯರು ಪ್ರಾಣಾಪಾಯಕ್ಕೆ ಸಿಲುಕಿರುವುದು ತುಂಬಾಡಿ ಹೊಸಕೆರೆ ಹಳ್ಳದಲ್ಲಿ ಗುರುವಾರ ನಡೆದಿದೆ.

    ಕೆಲದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯ ಕಾರಣಕ್ಕೆ ಹಳ್ಳ, ಕೊಳ್ಳಗಳೆಲ್ಲಾ ತುಂಬಿದ್ದು, ವೇಗವಾಗಿ ಹರಿಯುತ್ತಿದ್ದ ನೀರು ನೋಡಿ ಸೆಲ್ಫಿ ತೆಗೆದುಕೊಳ್ಳಲು ತೆರಳಿದ್ದ ಯುವತಿಯರು ನಡುನೀರಿನಲ್ಲಿ ಸಿಕ್ಕಿ ಬಿದ್ದಿದ್ದರು. ಇವರ ಜತೆಗಿದ್ದ ಒಬ್ಬ ವ್ಯಕ್ತಿ ಕೂಡ ರಕ್ಷಿಸಲು ಪರದಾಡುತ್ತಿದ್ದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ನೀರಿನಿಂದ ಹೊರಬರಲಾಗದೆ ಕಿರುಚಾಡಿದಾಗ ಸ್ಥಳೀಯ ಯುವಕರು ಪ್ರಾಣವನ್ನೂ ಲೆಕ್ಕಿಸಿದೇ ನೀರಿಗಿಳಿದು ಇಬ್ಬರನ್ನೂ ರಕ್ಷಿಸಿದರು. ಸಮೀಪದ ಸೀಗೆಪಾಳ್ಯದ ಇಬ್ಬರು ಯುವತಿಯರು ಆಟೋದಲ್ಲಿ ಕೆರೆ ನೋಡಲು ಬಂದಿದ್ದು ೆಟೋ ತೆಗೆದುಕೊಳ್ಳಲು ಹಳ್ಳದ ನಡುಗಡ್ಡೆಗೆ ತೆರಳಿದ್ದು ಅಪಾಯ ತಂದೊಡ್ಡಿತ್ತು, ಅಲ್ಲಿಂದ ವಾಪಸಾಗುವಾಗ ನೀರಿನ ವೇಗ ಹೆಚ್ಚಾಗಿದ್ದರಿಂದ ಯುವತಿಯರು ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯ ಎದುರಾಗಿತ್ತು.

    ತುಂಬಾಡಿಯ ಸ್ಥಳೀಯ ಯುವಕರಾದ ರಾಜಣ್ಣ, ರಂಗನಾಥ್, ನಟರಾಜು, ಸಂತೋಷ್, ಅರುಣ್, ಅರ್ಜುನ್, ಉದಯ್ ಮತ್ತಿತರರು ಅಪಾಯವನ್ನು ಲೆಕ್ಕಿಸದೇ ನೀರಿಗಿಳಿದು ಯುವತಿಯರನ್ನು ರಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿ ತಿಳಿದು ಊರೊಳಗಿನಿಂದ ಓಡಿ ಬಂದಿದ್ದ ಜನರು ಹಗ್ಗಗಳನ್ನು ತಂದು ನೀರಿಗೆಸೆದಿದ್ದು ಯುವತಿಯರನ್ನು ರಕ್ಷಿಸಲು ಸಾಧ್ಯವಾಯಿತು. ಸ್ಥಳೀಯ ಯುವಕರು ಅಪಾಯದಲ್ಲಿದ್ದ ಯುವತಿಯರನ್ನು ರಕ್ಷಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದ್ದು, ಯುವಕರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    ಕುಟುಂಬ ಸಮೇತ ಬಂದಿದ್ದರು: ನೀಲಗೊಂಡನಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ನಾಗರಾಜು ಪತ್ನಿ ಸೇರಿ 6 ಮಂದಿ ಒಂದೇ ಕುಟುಂಬದ ಸದಸ್ಯರು ಕೆರೆ ನೋಡಲು ಇರಕಸಂದ್ರ ಕಾಲನಿಂದ ತುಂಬಾಡಿ ಗ್ರಾಮಕ್ಕೆ ಬಂದಿದ್ದು ಇಲ್ಲಿಗೆ ಬರುವ ಮೊದಲು ಇರಸಂದ್ರ ಕಾಲನಿ ಕೆರೆಯಲ್ಲಿ ಈಜಾಡಿಕೊಂಡು ಕುಟುಂಬ ತುಂಬಾಡಿ ಕೆರೆಗೆ ಬಂದಿದ್ದಾರೆ. ತುಂಬಾಡಿ ಕೆರೆಯ ಕೋಡಿಯಲ್ಲಿ ಮೊಬೈಲ್‌ನಲ್ಲಿ ೆಟೋ ಶೂಟ್ ಮಾಡುವ ಸಂದರ್ಭದಲ್ಲಿ ಜಾರಿ ಬಿದ್ದಿದ್ದಾರೆ. ನೀರಿನಲ್ಲಿ ಯುವತಿಯರು ಸಿಲುಕಿರುವುದು ಸಾಮಾಜಿ ಜಾಲತಾಣದಲ್ಲಿ ವೈರಲ್ ಆದರೂ ಕೊರಟಗೆರೆ ಪೊಲೀಸರು ಠಾಣೆಯಲ್ಲಿ ದೂರು ದಾಖಲಿಕೊಂಡ್ಲಿ. ಮತ್ತು ಸಾರ್ವಜನರಿಗೆ ನೀರಿನಿಂದ ಆಗುವಂತಹ ಅಪಾಯ ತಿಳಿಸುವಂತಹ ಪ್ರಯತ್ನ ಸಹ ಮಾಡ್ಲಿ ಎನ್ನುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

    ಬಾಲಕಿಯರು ಮತ್ತು ಕುಟುಂಬದವರು ಇರಕಸಂದ್ರ ಕಾಲನಿ ಕೆರೆಯಲ್ಲಿ ಈಜಾಡಿಕೊಂಡು ತುಂಬಾಡಿ ಗ್ರಾಮಕ್ಕೆ ಬಂದಿದ್ದಾರೆ. ಕೆರೆ ನೋಡಿ ಹೋಗಲು ಬಂದಿದ್ದ ಬಾಲಕಿಯರು ೆಟೋ ತೆಗೆದುಕೊಳ್ಳಲು ಹೋಗಿ ಮೊಬೈಲ್ ಕೂಡಾ ನೀರಿನಲ್ಲಿ ಬೀಳಿಸಿಕೊಂಡಿದ್ದಾರೆ. ಪಾಲಕರು ಮಕ್ಕಳನ್ನು ಇಂತಹ ಸ್ಥಳಗಳಿಗೆ ಕರೆದುಕೊಂಡು ಬರುವಾಗ ಎಚ್ಚರಿಕೆಂದ ಇರಬೇಕು. ನನ್ನ ಸ್ನೇಹಿತರ ಸಹಕಾರದಿಂದ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ನೀರಿಗೆ ಇಳಿದು ಬಾಲಕಿಯರ ರಕ್ಷಣೆ ಮಾಡಿದೆವು.
    ಸಂತೋಷ್, ಬಾಲಕಿಯ ರಕ್ಷಣೆ ಮಾಡಿದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts