More

    ಮ್ಯಾಟ್ರಿಮೋನಿಯಲ್ಲಿ ಯುವತಿಯನ್ನು ಪುಸಲಾಯಿಸಿ 4 ಲಕ್ಷ ಹಣ ಪೀಕಿದ

    ಬೆಂಗಳೂರು: ಮದುವೆ ಹೆಸರಲ್ಲಿ ದುಷ್ಕರ್ಮಿಯೊಬ್ಬ ಬೀಸಿದ ವಂಚನೆಯ ಬಲೆಗೆ ಸಿಲುಕಿದ ಯುವತಿ 4 ಲಕ್ಷ ರೂ. ಕಳೆದುಕೊಂಡಿದ್ದಾಳೆ.

    ಮ್ಯಾಟ್ರಿಮೋನಿ​ ಜಾಲತಾಣದಲ್ಲಿ ಯುವತಿಗೆ ಪರಿಚಯವಾಗಿದ ವ್ಯಕ್ತಿ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಾನೆ. ಜೆ.ಪಿ.ನಗರದ ನಟರಾಜ್​ ಲೇಔಟ್​ ನಿವಾಸಿ 27 ವರ್ಷದ ಯುವತಿ ವಂಚನೆಗೊಳಗಾದವರು. ಈಕೆ ಕೊಟ್ಟ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ದಕ್ಷಿಣ ವಿಭಾಗ ಸಿಇಎನ್​ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಇದನ್ನೂ ಓದಿರಿ ಶಾಸಕ ಶರತ್ ಬಚ್ಚೇಗೌಡ ದಂಪತಿಗೆ ಕರೊನಾ ಸೋಂಕು

    ಯುವತಿ ಕಳೆದ ತಿಂಗಳು ಜಾಲತಾಣದಲ್ಲಿ ಸ್ವವಿವರ ಅಪ್ಲೋಡ್​ ಮಾಡಿದ್ದಳು. ಈ ವೇಳೆ ಪರಿಚಯವಾಗಿದ್ದ ವ್ಯಕ್ತಿಯೊಬ್ಬ, ‘ನಾನು ಇಂಗ್ಲೆಂಡ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಪೊಫೈಲ್​ ಇಷ್ಟವಾಗಿದ್ದು ಮದುವೆ ಆಗುವೆ’ ಎಂದು ಹೇಳಿದ್ದ.

    ಬಳಿಕ ಇಬ್ಬರು ಪರಸ್ಪರ ಫೋನ್​ ನಂಬರ್​ ವಿನಿಮಯ ಮಾಡಿಕೊಂಡಿದ್ದು, ಪ್ರತಿನಿತ್ಯ ವ್ಯಾಟ್ಸ್ಆ್ಯಪ್​ನಲ್ಲಿ ಚಾಟಿಂಗ್​ ಮಾಡುತ್ತಿದ್ದರು. ಜೂ.15ರಂದು ಮೆಸೇಜ್​ ಮಾಡಿದ್ದ ವೇಳೆ ಶೀಘ್ರವೇ ಇಂಗ್ಲೆಂಡ್​ನಿಂದ ಭಾರತಕ್ಕೆ ಬರುತ್ತಿದ್ದು, ಮೊದಲಿಗೆ ಲಗೇಜ್​ ಕಳುಹಿಸುತ್ತಿದ್ದೇನೆ ಎಂದಿದ್ದ. ಲಗೇಜ್​ ಸ್ವೀಕರಿಸಿಟ್ಟುಕೊಳ್ಳುವಂತೆ ಯುವತಿಗೆ ಹೇಳಿದ್ದ.

    ಜೂ.22ರಂದು ಯುವತಿಗೆ ಕರೆ ಮಾಡಿದ್ದ ಅಪರಿಚಿತರು, ‘ಫಾಸ್ಟ್​ ಲಿಂಕ್​ ಕೋರಿಯರ್​ ಸರ್ವೀಸ್’ನಿಂದ ಮಾತನಾಡುತ್ತಿರುವುದಾಗಿ ಹೇಳಿದ್ದರು. ‘ನಿಮ್ಮ ಹೆಸರಿಗೆ ಇಂಗ್ಲೆಂಡ್​ನಿಂದ ಕೋರಿಯರ್​ ಬಂದಿದೆ. ತೆರಿಗೆ ಕಟ್ಟಿ ಸ್ವೀಕರಿಸಿ’ ಎಂದಿದ್ದರು. ಅವರ ಮಾತನ್ನು ನಂಬಿದ ಯುವತಿ ಹಂತಹಂತವಾಗಿ 4 ಲಕ್ಷ ರೂ. ಸಂದಾಯ ಮಾಡಿದ್ದಾಳೆ. ಈವರೆಗೂ ಕೋರಿಯರ್​ ಪಾರ್ಸಲ್​ ನೀಡಿಲ್ಲ. ಇನ್ನಷ್ಟು ಹಣ ಹಾಕುವಂತೆ ಬೇಡಿಕೆ ಇಟ್ಟಿದ್ದು, ಸೈಬರ್​ ಕಳ್ಳರು ವಂಚಿಸುತ್ತಿರುವುದು ಗೊತ್ತಾಗಿ ಠಾಣೆಗೆ ಯುವತಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪೊಲೀಸ್​ ಠಾಣೆಯಲ್ಲಿ ಕಷಾಯ ತಯಾರಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts