More

    ಆಪರೇಷನ್​ ವೇಳೆ ಸಾವಿಗೀಡಾದ ಬಾಲಕಿ; ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಕುಟುಂಬಸ್ಥರ ಆಕ್ರೋಶ..

    ರಾಯಚೂರು: ಧ್ವನಿಪೆಟ್ಟಿಗೆಯ ಶಸ್ತ್ರಚಿಕಿತ್ಸೆ ವೇಳೆ ಬಾಲಕಿಯೊಬ್ಬಳು ಸಾವಿಗೀಡಾಗಿದ್ದು, ಅದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ. ರಾಯಚೂರು ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

    ರಾಯಚೂರು ನಗರದ ಡಾ.ಪಠಾಣ್ ಇಎನ್​ಟಿ ನರ್ಸಿಂಗ್ ಹೋಮ್​ನಲ್ಲಿ ಈ ಘಟನೆ ನಡೆದಿದ್ದು, ಸಾಯಿಕೀರ್ತನಾ (6) ಎಂಬ ಬಾಲಕಿ ಸಾವಿಗೀಡಾಗಿದ್ದಾಳೆ. ಈಕೆ ರಾಯಚೂರು ತಾಲೂಕಿನ ಕೊಸಗಿ ಗ್ರಾಮದ ಅಂಜಿ-ಜ್ಯೋತಿ ದಂಪತಿಯ ಪುತ್ರಿ. ಈ ದಂಪತಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.

    ಮಾತು ಬಾರದ ಈಕೆಗೆ ಕಳೆದ ವರ್ಷ ಇದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಪುನಃ ಧ್ವನಿ ಹೋಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡುವ ವೇಳೆ ಬಾಲಕಿ ಸಾವಿಗೀಡಾಗಿದ್ದಾಳೆ. ಉಸಿರಾಟದ ತೊಂದರೆಯಿಂದ ಬಳಲಿದ ಬಾಲಕಿ ಸಾವಿಗೀಡಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಕುಟುಂಬಸ್ಥರು ಆಸ್ಪತ್ರೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆಸ್ಪತ್ರೆ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

    21 ವಿಶ್ವವಿದ್ಯಾಲಯಗಳೇ ನಕಲಿ, ಆ ಪೈಕಿ ರಾಜಧಾನಿಯಲ್ಲೇ ಅಧಿಕ: ಯುಜಿಸಿ ಘೋಷಣೆ..

    ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ಬೆಳಗ್ಗೆ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts