More

    ಎಂಟರ ಹರೆಯದ ಬಾಲಕಿ ಕೊಲೆ, ಅತ್ಯಾಚಾರ ಶಂಕೆ

    ಗುರುಪುರ(ದ.ಕ.): ಕಂಕನಾಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಾರಿ ಎಂಬಲ್ಲಿರುವ ಹೆಂಚಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬವೊಂದರ 8 ವರ್ಷದ ಹೆಣ್ಣು ಮಗುವಿನ ಮೃತದೇಹ ಫ್ಯಾಕ್ಟರಿ ಪಕ್ಕದಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಗುರುಪುರ ಸೇತುವೆ ಬಳಿಯ ಪರಾರಿ ಕ್ರಾಸ್‌ನಲ್ಲಿ ಫ್ಯಾಕ್ಟರಿ ಇದ್ದು, ಅಲ್ಲಿ ಅಸ್ಸಾಂ ಸಹಿತ ಉತ್ತರ ಭಾರತದ 14 ಹುಡುಗರು, 4-5 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಅಸ್ಸಾಂ ಕುಟುಂಬದ 8 ವರ್ಷದ ಹೆಣ್ಣು ಮಗು ಭಾನುವಾರ ಬೆಳಗ್ಗೆ ಸುಮಾರು 11 ಗಂಟೆಯಿಂದ ನಾಪತ್ತೆಯಾಗಿತ್ತು. ಕೆಲಸಗಾರರು ಮತ್ತು ಸ್ಥಳೀಯರು ಮಗುವಿನ ಹುಡುಕಾಟ ಆರಂಭಿಸಿದರು. ಸಂಜೆ ಸುಮಾರು 6.30ಕ್ಕೆ ಫ್ಯಾಕ್ಟರಿಯ ಪಕ್ಕದ ಮೋರಿ ಬಳಿ ಮಗುವಿನ ಶವ ಪತ್ತೆಯಾಗಿದೆ.

    ಮಗುವಿನ ಮೈಮೇಲಿನ ಬಟ್ಟೆಬರೆ ಚೆಲ್ಲಾಪಿಲ್ಲಿಯಾಗಿದ್ದು, ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು ಕೊಲೆ ಮಾಡಿರಬೇಕೆಂದು ಅನುಮಾನಿಸಲಾಗಿದೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತೀಯರು ನಡೆಸಿರುವ ಕೃತ್ಯವಿರಬೇಕೆಂದು ಕೆಲವರು ಅನುಮಾನಿಸಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ಮುಂದುವರಿದಿದೆ.
    ಕೊಲೆಯಾಗಿರುವ ಮಗುವಿನ ಮೇಲೆ ಅತ್ಯಾಚಾರದ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದ್ದು, ಪೋಸ್ಟ್‌ಮಾರ್ಟ್‌ಂ ವರದಿ ಆಧರಿಸಿ ತನಿಖೆ ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಕಂಕನಾಡಿ ಗ್ರಾಮಾಂತರ ಪೊಲೀಸ್ ಮೂಲ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts