More

    ಟಿಕ್​ಟಾಕ್​ನಲ್ಲಿ ಹೊಸ ಚಾಲೆಂಜ್​ ಸ್ವೀಕರಿಸಿ ದುರಂತ ಅಂತ್ಯ ಕಂಡ ಅಪ್ರಾಪ್ತೆ: ನಿಜಕ್ಕೂ ಅಪಾಯಕಾರಿ ಸವಾಲಿದು!

    ನ್ಯೂಯಾರ್ಕ್​: ಟಿಕ್​ಟಾಕ್​ನಲ್ಲಿ ಹೊಸ ಚಾಲೆಂಜ್​ ಸ್ವೀಕರಿಸಿದ ಹದಿನೈದು ವರ್ಷದ ಹುಡುಗಿಯೊಬ್ಬಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಅಮೆರಿಕದ ಒಕ್ಲಾಹೋಮದಲ್ಲಿ ನಡೆದಿದೆ.

    ಚ್ಲೋ ಫಿಲಿಪ್ಸ್​ (15) ಮೃತ ಹುಡುಗಿ. ಆಗಸ್ಟ್​ 21ರಂದು ಸಾವಿಗೀಡಾಗಿದ್ದು, ಇಂಥದ್ದೇ ಮತ್ತೊಂದು ದುರ್ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಹುಡುಗಿಯ ಪಾಲಕರು ತಮ್ಮ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

    ಬೆನಡ್ರಿಲ್​ (Benadryl Challenge) ​ ಹೆಸರಿನ ಹೊಸ ಚಾಲೆಂಜ್ ಅನ್ನು ಹುಡುಗಿ​ ಸ್ವೀಕರಿಸಿದ್ದಳು. ಇದರಲ್ಲಿ ಭಾಗವಹಿಸುವ ಸ್ಪರ್ಧಾಳುಗಳನ್ನು ಅತಿಯಾಗಿ ಅಲರ್ಜಿ ಔಷಧವನ್ನು ಸೇವಿಸುವಂತೆ ಪ್ರೇರಿಪಿಸಲಾಗುತ್ತದೆ. ಅದರಂತೆ ಮಿತಿಮೀರಿದ ಔಷಧ ಸೇವಿಸಿದ ಹುಡುಗಿ ಕೊನೆಗೆ ಸಾವಿಗೀಡಾಗಿದ್ದಾಳೆ. ಇದರ ಬೆನ್ನಲ್ಲೇ ಹುಡುಗಿಯ ಕುಟುಂಬದವರು ನೋವಿನಲ್ಲೇ ತಮ್ಮ ಸಂಬಂಧಿಗಳಿಗೆ ಮಕ್ಕಳ ಮೇಲೆ ಎಚ್ಚರವಿರಲಿ ಎಂದಿದ್ದಾರೆ.

    ಇದನ್ನೂ ಓದಿ: ವೆಡ್ಡಿಂಗ್​ ಫೋಟೋಶೂಟ್ ವೇಳೆ ವರನ ಕೈಯಿಂದ ಜಾರಿದ ವಧು: ಇಲ್ಲಿದೆ ನೀವ್ಯಾರು ಊಹಿಸದ ರೋಚಕ ಟ್ವಿಸ್ಟ್​!​

    ಘಟನೆ ಸುದ್ದಿಯಾಗುತ್ತಿದ್ದಂತೆ ಮಕ್ಕಳಿಗೆ ಎಚ್ಚರಿಕೆ ನೀಡಿರುವ ಒಕ್ಲೊಹೋಮದ ವಿಷ ಮತ್ತು ಔಷಧ ಮಾಹಿತಿ ಕೇಂದ್ರದ ನಿರ್ದೇಶಕರಾದ ಸ್ಕಾಟ್​ ಶಾಪರ್​ ಇಂತಹ ಅಪಾಯಕಾರಿ ಚಾಲೆಂಜ್​ಗಳನ್ನು ಸ್ವೀಕರಿಸಬೇಡಿ ಎಂದಿದ್ದಾರೆ.

    ಇನ್ನು ಹೆಚ್ಚು ಪ್ರಮಾಣ ಬೆನಡ್ರಿಲ್​ ಔಷಧ ಸೇವನೆ​ ಅನೇಕ ರೋಗಳಿಗೆ ಕಾರಣವಾಗಬಹುದು ಅದರಲ್ಲೂ ಹೃದಯಕ್ಕೆ ಹೆಚ್ಚು ತೊಂದರೆಯಾಗಲಿದೆ. ಹೆಚ್ಚು ಸೇವನೆಯಿಂದ ಹೃದಯವು ತನ್ನ ಲಯದಿಂದ ಹೊರಬರಲು ಒಲವು ತೋರುತ್ತದೆ. ಅಲ್ಲದೆ, ಪರಿಣಾಮಕಾರಿಯಾಗಿ ರಕ್ತವನ್ನು ಪಂಪ್​ ಮಾಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

    ‘ಗರ್ಭಿಣಿಯಾದ ನಾನು ಮಾನಸಿಕ ತೊಳಲಾಟದಲ್ಲಿದ್ದೇನೆ..ಇಂದ್ರಜಿತ್​ ಸಭ್ಯತೆ ತೋರಲಿ..’: ಮೇಘನಾ ರಾಜ್​ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts