More

    ಪರಿಣಾಮಕಾರಿ ಫಲಿತಾಂಶದ ಶುಂಠಿ ಚಹಾ

    ಪರಿಣಾಮಕಾರಿ ಫಲಿತಾಂಶದ ಶುಂಠಿ ಚಹಾಮನೆಯಲ್ಲಿಯೇ ಸುಲಭವಾಗಿ ಮಾಡಿ ಪರಿಣಾಮಕಾರಿ ಫಲಿತಾಂಶವನ್ನು ನೀಡುವಂತಹ ಆರೋಗ್ಯದಾಯಿನಿ ಶುಂಠಿ ಚಹಾ. ಪ್ರಯಾಣ ಮಾಡುವಾಗ ತೊಂದರೆಯಾಗುವುದು, ವಾಂತಿ ಬಂದಂತಾಗುವುದು ಅಥವಾ ಬರುವುದನ್ನು ಕಡಿಮೆ ಮಾಡಲು ಶುಂಠಿ ಚಹಾ ಸಹಕಾರಿ. ಇದರಲ್ಲಿರುವ ಜಿಂಝುರಾಲ್ ಎನ್ನುವ ಫಿನಾಲ್ ಸಂಯುಕ್ತವು ವಾಕರಿಕೆ ಬಂದಂತಾಗುವುದನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅಧ್ಯಯನಗಳು ತಿಳಿಸುವಂತೆ ಶುಂಠಿಯು ಇತರ ಎಲ್ಲ ಸಾಂಪ್ರದಾಯಿಕ ಆಂಟಿ-ನಾಸಿಯಾ ಗುಣಧರ್ಮ ಹೊಂದಿರುವ ಪದಾರ್ಥಗಳಿಗಿಂತ ಉತ್ತಮವಾದುದು. ಅನೇಕ ಹೃದಯಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಶುಂಠಿ ಟೀ ಸಹಕಾರಿ. ಮುಖ್ಯವಾಗಿ ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ, ಹೃದಯಾಘಾತದ ಸಂಭವವನ್ನು ಕಡಿಮೆ ಮಾಡುವಲ್ಲಿ, ರಕ್ತವು ಹೆಪ್ಪುಗಟ್ಟದಂತೆ ನೋಡಿಕೊಳ್ಳುವಲ್ಲಿ, ಎದೆಯುರಿಯನ್ನು ಕಡಿಮೆ ಮಾಡುವಲ್ಲಿ, ರಕ್ತಸಂಚಾರವನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಬಲ್ಲದು.

    ಇದನ್ನೂ ಓದಿ: ಮನೆಯಲ್ಲೇ ಚ್ಯವನಪ್ರಾಶ್ ತಯಾರಿಸಿಕೊಳ್ಳಿ

    ತೂಕವನ್ನು ಕಡಿಮೆ ಮಾಡುವಲ್ಲಿ ಪ್ರತಿನಿತ್ಯದ ಶುಂಠಿ ಟೀ ಸೇವನೆ ಸಹಕಾರಿ. 2012ರ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧನೆಯ ವರದಿಯ ಪ್ರಕಾರ, ಬೆಳಗ್ಗೆ ಎದ್ದ ಕೂಡಲೇ ಬಿಸಿಬಿಸಿಯಾದ ಶುಂಠಿ ಟೀ ಕುಡಿಯುವುದರಿಂದ ತೂಕ ಕಡಿಮೆಯಾಗಲು ಸಹಾಯವಾಗುತ್ತದೆ. ಮಧುಮೇಹವುಳ್ಳವರು ಶುಂಠಿ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡಲ್ಲಿ ಅವರ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯ.

    ಶುಂಠಿಯು ನೋವುನಿವಾರಕ ಗುಣವನ್ನು ಹೊಂದಿರುವಂತಹ ಪದಾರ್ಥ. ಉರಿಯೂತವನ್ನು ಕಡಿಮೆ ಮಾಡುವಲ್ಲಿ ಇದನ್ನು ಅನೇಕ ವರ್ಷಗಳಿಂದ ಉಪಯೋಗಿಸಲಾಗುತ್ತಿದೆ. ಶುಂಠಿ ಚಹಾವನ್ನು ಕುಡಿಯುವುದರಿಂದ ತಲೆನೋವು, ಮುಟ್ಟಾದ ಸಂದರ್ಭದಲ್ಲಿ ಕಾಡುವ ಹೊಟ್ಟೆನೋವು, ಕಾಲುನೋವು, ಮಾಂಸಖಂಡಗಳು ಹಿಡಿದುಕೊಂಡಿರುವುದು ಮತ್ತು ಇನ್ನಿತರ ನೋವುಗಳು ಕಡಿಮೆಯಾಗಲು ಸಹಾಯವಾಗುತ್ತದೆ. ಕ್ಯಾನ್ಸರ್​ನಿಂದ ರಕ್ಷಿಸಲು ಶುಂಠಿ ಚಹಾಸೇವನೆ ಸಹಕಾರಿ. ರೋಗನಿರೋಧಕ ಶಕ್ತಿ ಹೆಚ್ಚಿಸಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಶುಂಠಿ ಚಹಾಸೇವನೆ ಸಹಕಾರಿ. ಸಾಮಾನ್ಯ ಶೀತ, ಬೇರೆ ಬೇರೆ ರೀತಿಯ ಅಲರ್ಜಿಗಳು, ಬೇರೆ ಬೇರೆ ರೀತಿಯ ವೈರಾಣುಗಳ ಸೋಂಕನ್ನು ಕಡಿಮೆ ಮಾಡುವಲ್ಲೂ ಇದು ಪರಿಣಾಮಕಾರಿ.

    ಇದನ್ನೂ ಓದಿ: ನೆನಪಿನ ಶಕ್ತಿ, ಜೀರ್ಣಶಕ್ತಿ, ಲೈಂಗಿಕ ಶಕ್ತಿ ಹೆಚ್ಚಿಸುವ ಅಮೃತಸಮಾನ ಪದಾರ್ಥ ತುಪ್ಪ

    4ರಿಂದ 6 ಶುಂಠಿಯ ಚೂರುಗಳನ್ನು ತೆಗೆದುಕೊಂಡು ಅದಕ್ಕೆ ಎರಡು ಲೋಟ ನೀರು ಹಾಕಿ ಇದನ್ನು ಸುಮಾರು 10ರಿಂದ 15 ನಿಮಿಷ ಮಧ್ಯಮ ಗಾತ್ರದ ಉರಿಯಲ್ಲಿ ಕುದಿಸಬೇಕು. ಒಲೆಯಿಂದ ಇಳಿಸಿದ ನಂತರದಲ್ಲಿ ಅದಕ್ಕೆ ಅರ್ಧ ಲಿಂಬುವನ್ನು, ಬೇಕಾದಲ್ಲಿ ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು. ಪ್ರಸ್ತುತ ಸಮಯದಲ್ಲಿ ಪ್ರತಿನಿತ್ಯ ಶುಂಠಿ, ಲವಂಗ, ತುಳಸಿ, ದಾಲ್ಚಿನ್ನಿ(ಚಕ್ಕೆ), ಕೊತ್ತಂಬರಿ ಹಾಗೂ ಜೀರಿಗೆ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಲು ಸಹಾಯವಾಗುತ್ತದೆ.

    ಕೆಲವರಲ್ಲಿ ಶುಂಠಿ ಚಹಾದ ಅತಿ ಸೇವನೆಯಿಂದ ಎದೆ ಉರಿಯಾಗುವುದು, ದೇಹದ ಉಷ್ಣತೆ ಹೆಚ್ಚಾಗುವುದು ಕಂಡುಬರಬಹುದು. ಆದ್ದರಿಂದ ಅವರವರ ದೇಹಪ್ರಕೃತಿಯನ್ನು ಗಮನಿಸಿ ಬಳಸುವುದು ಒಳಿತು.

    ಧನ್ವಂತರಿ: ಮಿದುಳಿಗೆ ಶಕ್ತಿ ನೀಡುವ ಕೊಬ್ಬರಿ ಎಣ್ಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts