More

    ಅಂಕೋಲಾ ಕರಿ‌ ಈಶಾಡು ಮಾವಿಗೆ ಸಿಕ್ಕಿತು ಜಿಐ ಸರ್ಟಿಫಿಕೇಶನ್

    ಕಾರವಾರ: ಅಂಕೋಲಾದ ಪ್ರಸಿದ್ಧ ಕರೀ ಈಶಾಡು ಮಾವಿಗೆ ಜಿಐ ಟ್ಯಾಗ್ (ಭೌಗೋಳಿಕ ಗುರುತು) ಲಭ್ಯವಾಗಿದೆ. ಅಂಕೋಲಾದ ಮಾತಾ ತೋಟಗಾರ್ಸ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್ಸ್, ಡಿಸೈನ್ಸ್ ಮತ್ತು ಡ್ರೇಡ್ ಮಾರ್ಕ್ಸ್ ಇಲಾಖೆಯು ಜಿಯಾಗ್ರಫಿಕಲ್ ಐಡೆಂಟಿಟಿ (ಜಿಐ) ಪ್ರಮಾಣಪತ್ರ ನೀಡಿದ್ದು, ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದನ್ನು ಪ್ರಕಟಿಸಿದೆ. ಬೈಫ್ ಸಂಸ್ಥೆ , ತೋಟಗಾರಿಕೆ ಬೆಳೆ ವಿಸ್ತೀರ್ಣ ಹಾಗೂ ಇತರ ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಒದಗಿಸಿದ್ದವು. ನಬಾರ್ಡ್ ಈ ಎಲ್ಲ ಪ್ರಕ್ರಿಯೆಗಳಿಗೆ ಆರ್ಥಿಕ ಸಹಕಾರ ನೀಡಿತ್ತು. ಇವೆಲ್ಲವನ್ನೂ ಪಡೆದು 2022 ರ ಮಾರ್ಚ್ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.

    ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ 2 ದಿನ ಗುಡುಗು ಸಹಿತ ಧಾರಾಕಾರ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

    ಅರ್ಜಿಯನ್ನು ಪರಿಗಣಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿ, ಜಿಐ ಜರ್ನಲ್‌ನಲ್ಲಿ ಇದನ್ನು ಪ್ರಕಟಿಸಿ ನಂತರ ಇದೇ ಮಾರ್ಚ್ 31 ರಂದು ಮುಂದಿನ 10 ವರ್ಷಗಳಿಗೆ ಎಂದರೆ 2032 ರವರೆಗೆ ಜಿಯಾಗ್ರಫಿಕಲ್ ಸರ್ಟಿಫಿಕೇಶನ್ ನೀಡಿ ಆದೇಶ ಹೊರಡಿಸಲಾಗಿದೆ.

    ಏನಿದು ಜಿಯೋ ಟ್ಯಾಗ್

    ದೇಶದ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ನೀಡಿ, ಅದರ ಮೌಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಒಂದು ಭಾಗ ಈ ಪ್ರಮಾಣಪತ್ರವನ್ನು ನೀಡುತ್ತದೆ. ಪ್ರಮಾಣಪತ್ರ ನೀಡುವುದಕ್ಕೂ ಪೂರ್ವದಲ್ಲಿ ಸಾಕಷ್ಟು ಹಿನ್ನೆಲೆಗಳನ್ನು ಅಧ್ಯಯನ ಮಾಡಲಾಗುತ್ತದೆ. ಇದುವರೆಗೆ ಕರ್ನಾಟಕದ ಕೆಲವೇ ಉತ್ಪನ್ನಗಳಿಗೆ ಈ ಮಾನ್ಯತೆ ಲಭಿಸಿದೆ. ಶಿರಸಿಯ ಅಡಕೆಗೆ, ಸಾಗರದಲ್ಲಿ ಅಪ್ಪೆಮಿಡಿಗೆ ಜಿಯೋ ಟ್ಯಾಗಿಂಗ್ ಲಭ್ಯವಾಗಿದೆ.

    ಇದನ್ನೂ ಓದಿ: ಬಿಜೆಪಿ ಟಿಕೆಟ್‌ಗಾಗಿ CPI ಹುದ್ದೆಗೆ ರಾಜೀನಾಮೆ; ನಾಗಠಾಣ ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ

    ಕರಿ ಈಶಾಡಿನ ವಿಶೇಷ

    ಅಂಕೋಲಾದಲ್ಲಿ ಮಾತ್ರ ಸುಮಾರು 60 ರಿಂದ 70 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಕರಿ ಈಶಾಡ ಮಾವಿವು ವಿಶೇಷ ರುಚಿಯನ್ನು ಹೊಂದಿದೆ. ಸಮೀಪದ ಹಾಲಕ್ಕಿ ಒಕ್ಕಲಿಗರು ಇದರ ಹೆಚ್ಚಿನ ಬೆಳೆಗಾರರು. ಬೇಸಿಗೆ ಬಂದ ಕೂಡಲೇ ಅಂಕೋಲಾದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಾಲಕ್ಕಿ ಮಹಿಳೆಯರು ಇದನ್ನು ಮಾರಾಟ ಮಾಡುತ್ತಾರೆ. ಶತಮಾನಗಳ ಹಿಂದೆಯೇ ಇದರ ಮೌಲ್ಯವರ್ಧಿತ ಉತ್ಪನ್ನಗಳನ್ನು ವಿದೇಶಕ್ಕೆ ಮಾರಾಟ ಮಾಡಲಾಗುತ್ತಿತ್ತು.

    ಅಮೇರಿಕಾ, ಆಸ್ಟ್ರೇಲಿಯಾ, ಬ್ರಿಟನ್ ಕೊಂಡೊಯ್ದ ದಾಖಲೆಗಳಿವೆ. 1908 ರಲ್ಲಿ ಕರಿ ಈಶಾಡಿನ ಮೌಲ್ಯವರ್ಧನೆಗೆ ಕೆನರೀಸ್ ಇಂಡಸ್ಟ್ರೀಸ್ ಆರಂಭವಾಗಿತ್ತು. ಅಮೇರಿಕದ ಊಟದ ತಟ್ಟೆಯಲ್ಲಿ, ಆಸ್ಟ್ರೇಲಿಯಾದ ಐಸ್‌ಕ್ರೀನ್‌ನಲ್ಲಿ ಇದನ್ನು ಬಳಸಲಾಯಿತು. ಈಶಾಡು ಮಾವಿನ ಹಣ್ಣಿನ ತಿರುಳನ್ನು ತೆಗೆದು ಟಿನ್ ನನ್ ನಲ್ಲಿ ತುಂಬಿ ಹಡಗಿನಲ್ಲಿ ಕೊಂಡೊಯ್ಯಲಾಗುತ್ತಿತ್ತು‌ ಅದರಿಂದ ಜೂಸ್, ಸಿರಫ್, ಪಲ್ಪ್ ಸೇರಿ 48 ಉತ್ಪನ್ನಗಳನ್ನು ಮಾಡಲಾಗುತ್ತಿತ್ತು ಎಂಬ ಹಲವು ಅಪರೂಪದ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಒದಗಿಸಲಾಗಿದೆ ಎಂದು ಪರಿಸರ ತಜ್ಞ ಶಿವಾನಂದ ಕಳವೆ “ವಿಜಯವಾಣಿ” ಗೆ ಮಾಹಿತಿ ನೀಡಿದರು.

    ಇದನ್ನೂ ಓದಿ: ನಿದ್ರೆಗೆ ಜಾರಿದ ಸಿದ್ದರಾಮಯ್ಯ; ತಟ್ಟಿ ಎಬ್ಬಿಸಿದ ಡಿಕೆಶಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts