More

    ಕರ್ನಾಟಕ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಬೇಕೆ

    ಸಂಡೂರು: ತಾಯ್ತನ ಸುಖಕರವಾಗಿರಬೇಕೆ ಹೊರತು ಪ್ರಯಾಸಕರವಾಗಿರಬಾರದು ಎಂದು ಸ್ತ್ರೀರೋಗ ತಜ್ಞೆ ರಜಿಯಾ ಬೇಗಂ ಹೇಳಿದರು.

    ತಾಲೂಕಿನ ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನಾಚರಣೆ ಅಂಗವಾಗಿ ಜಾಗೃತಿ ಮತ್ತು ಗಂಡಾಂತರ ಗರ್ಭಿಣಿಯರ ಆರೋಗ್ಯ ತಪಾಸಣೆ ಕುರಿತು ಸೋಮವಾರ ಮಾತನಾಡಿದರು.

    ಇಲಾಖೆಯ ಉಚಿತ ಗರ್ಭಿಣಿ ತಪಾಸಣೆ, ಸ್ಕ್ಯಾನಿಂಗ್, ಸಾಂಸ್ಥಿಕ ಹೆರಿಗೆ, 108 ಆಂಬ್ಯುಲೆನ್ಸ್ ಸೇವೆ ಮತ್ತು ಪಿಎಮ್‌ಎಸ್‌ಎಮ್‌ಎ ಮತ್ತು ಜೆಎಸ್‌ವೈ, ಜೆಎಸ್‌ಎಸ್‌ಕೆ ಹಾಗೂ ನಗುಮಗು ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

    ಹಣ್ಣು-ಹಂಪಲಗಳನ್ನು ಸೇವಿಸಿ

    ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಗರ್ಭಿಣಿ ಅವಧಿಯ 280 ದಿನಗಳೂ ಆಹ್ಲಾದಕರ ವಾತಾವರಣ ಇರುವಂತೆ ನೋಡಿಕೊಳ್ಳುವುದು ಕುಟುಂಬದ ಎಲ್ಲ ಸದಸ್ಯರ ಆದ್ಯ ಕರ್ತವ್ಯವಾಗಿರುತ್ತದೆ. ಇಷ್ಟವಾಗುವ ಅಡುಗೆ, ತಿನಿಸುಗಳನ್ನು ಮಾಡಿಕೊಡುವುದು, ಸ್ಥಳೀಯವಾಗಿ ದೊರೆಯುವ ಹಣ್ಣು-ಹಂಪಲಗಳನ್ನು ಸೇವಿಸುವುದು.

    ಇದನ್ನೂ ಓದಿ: ಆರೋಗ್ಯನಟಿ ‘ಖುಷ್ಬೂ’ ಆರೋಗ್ಯದಲ್ಲಿ ಏರುಪೇರು..ಆಸ್ಪತ್ರೆಗೆ ದಾಖಲು

    ಮಧ್ಯಾಹ್ನದ ವಿಶ್ರಾಂತಿ, ಬೆಳಗಿನ ಮತ್ತು ಸಂಜೆ ವಾಕಿಂಗ್, ಸುಶ್ರಾವ್ಯ ಸಂಗೀತ ಆಲಿಸುವುದು, ಧ್ಯಾನ, ಕುಟುಂಬದ ಸದಸ್ಯರೊಂದಿಗೆ ಲವಲವಿಕೆಯಿಂದ ಇರುವುದು. ಹಾಗೇ ಸುರಕ್ಷಿತ ಹೆರಿಗೆಗಾಗಿ ತಪಾಸಣೆ, ಚಿಕಿತ್ಸೆಯನ್ನು ಮುಂದುವರಿಸಿದಾಗ ಮಾತ್ರ ಸುಖಕರ ತಾಯ್ತನವಾಗಲು ಸಾಧ್ಯ ಎಂದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts