More

  ಆರೋಗ್ಯ ಸೌಲಭ್ಯ ಪಡೆಯಿರಿ

  ಸಿರಿಗೆರೆ: ಉಚಿತ ಚಿಕಿತ್ಸೆ ಸೌಲಭ್ಯ ಪಡೆಯಲು ಎಪಿಎಲ್, ಬಿಪಿಎಲ್ ಕಾರ್ಡ್‌ದಾರರು ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಮಿತ್ರ ಶಿವರಾಜ್ ಹೇಳಿದರು.

  ಹಿರೇಗುಂಟನೂರು ದ್ಯಾಮಲಾಂಬ ದೇವಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

  ಬಹಳಷ್ಟು ಸಂದರ್ಭ ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಾಗದೆ ಸಾವುಗಳು ಆಗಿವೆ. ಜತೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಡತನಲ್ಲಿ ಜೀವನ ನಡೆಸುವುದು ಕಂಡಿದ್ದೇವೆ. ಈ ಕಾರಣಕ್ಕೆ ಬಡ, ಮಧ್ಯಮ ವರ್ಗದ ಜನರ ಅನೂಕೂಲಕ್ಕಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂದರು.

  ಗ್ರಾಮ ಲೆಕ್ಕಾಧಿಕಾರಿ ಕಾಶಿನಾಥ್, ಪ್ರಾಥಮಿಕ ಆರೋಗ್ಯ ಕೇಂದ್ರ ಡಾ.ಅಭಿಷೇಕ್ ಹಿರೇಮಠ್, ಮುಖ್ಯಶಿಕ್ಷಕ ಧನಂಜಯ್, ಆರ್‌ಕೆ ಎಸ್‌ಕೆ ಯೋಜನಾ ಅಧಿಕಾರಿ ಸಿ.ಕಾವ್ಯಾ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts