More

    ಜರ್ಮನಿಯಲ್ಲಿ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ, ಯಾಕೆ ಈ ಪ್ರಯೋಗ?

    ಬರ್ಲಿನ್(ಜರ್ಮನಿ): ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಎಂಬ 6 ತಿಂಗಳ ಪ್ರಯೋಗವನ್ನು ಜರ್ಮನಿ ಇದೇ ಫೆಬ್ರವರಿ 1ರಿಂದ ಪ್ರಾರಂಭಿಸುತ್ತಿದೆ. 45 ಕಂಪನಿಗಳು ಇದರಲ್ಲಿ ಸೇರಿವೆ. ಇದು ಉದ್ಯೋಗಿಗಳ ಯೋಗಕ್ಷೇಮ, ಉತ್ಪಾದಕತೆ ಮತ್ತು ಆರ್ಥಿಕ ಸವಾಲುಗಳನ್ನು ಸುಧಾರಿಸುವ ಗುರಿ ಹೊಂದಿದೆ.

    ಇದನ್ನೂ ಓದಿ: ಮಗ ಟೀಂ ಇಂಡಿಯಾ ಆಟಗಾರ, ಅಪ್ಪ ಈಗಲೂ ಸಿಲಿಂಡರ್ ವಿತರಕ: ವಿಡಿಯೋ ವೈರಲ್..

    ತನ್ನ ಜಡ ಆರ್ಥಿಕತೆಯನ್ನು ಪುನರುಜ್ಜೀವಗೊಳಿಸಲು ಜರ್ಮನಿ ಇಂತಹ ಪ್ರಾಯೋಗವನ್ನು ಮಾಡಿದೆ. ಇದರ ಯಶಸ್ಸು ನೋಡಿ ಮುಂದೆ ಇದನ್ನೇ ವಿಸ್ತರಿಸಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಲಿದೆ. ಕಂಪೆನಿಗಳು ಕಡಿಮೆ ಕೆಲಸ ಮಾಡುವುದರಿಂದ ಉದ್ಯೋಗಿಗಳ ಕಾರ್ಕ್ಷಮತೆ ಮತ್ತು ಉತ್ಪಾದಕತೆ ಹೆಚ್ಚುತ್ತದೆಯೇ ಎಂದು ಈ ಮೂಲಕ ಪರೀಕ್ಷಿಸುತ್ತಿವೆ.

    ಫೆಬ್ರವರಿ 1 ರಿಂದ ಪ್ರಾರಂಭವಾಗುವ ಆರು ತಿಂಗಳ ಕಾರ್ಯಕ್ರಮವು ನೂರಾರು ಉದ್ಯೋಗಿಗಳಿಗೆ ಪ್ರತಿ ವಾರ ಒಂದು ದಿನ ಹೆಚ್ಚುವರಿ ರಜೆ ನೀಡುತ್ತದೆ. ಆದರೆ ಇದರಲ್ಲಿ ವೇತನ ಕಡಿತವಿರುವುದಿಲ್ಲ. ಇದರಿಂದ ಸಿಬ್ಬಂದಿ ಆರೋಗ್ಯ ಮತ್ತು ಸಂತೋಷ ಹೊಂದುತ್ತಾರೆ. ಅದರಿಂದ ಉತ್ಪಾದಕತೆ ಹೆಚ್ಚುತ್ತದೆಯೇ ಎಂಬುದನ್ನು ನೋಡುತ್ತಿದೆ.

    ‘ಹೊಸ ನಿರ್ಧಾರ ಹೂಡಿಕೆ ಮತ್ತು ಉತ್ಪಾದನೆ ಹೆಚ್ಚುತ್ತದೆ ಎಂದು ನನಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ. ಏಕೆಂದರೆ ಉದ್ಯೋಗಿಗಳು ತಮ್ಮ ಯೋಗಕ್ಷೇಮ ಬಯಸುತ್ತಾರೆ. ಅವರು ಸಂತೃಷ್ಟರಾದರೆ ಪ್ರೇರಣೆ ಹೆಚ್ಚಿಸುತ್ತವೆ, ಬಳಿಕ ದಕ್ಷತೆಯೂ ಹೆಚ್ಚಿಸುತ್ತವೆ’ ಎಂದು ಪೈಲಟ್‌ ಪ್ರಾಜೆಕ್ಟ್‌ನಲ್ಲಿ ಭಾಗವಹಿಸುವ 45 ಕಂಪನಿಗಳಲ್ಲಿ ಒಂದಾದ ಈವೆಂಟ್ ಪ್ಲಾನರ್ ಸಾಲಿಡ್‌ಸೆನ್ಸ್‌ನ ಸಹ-ಸಂಸ್ಥಾಪಕ ಸೊರೆನ್ ಫ್ರಿಕ್ ಹೇಳಿದ್ದಾರೆ.

    ಈ ಯೋಜನೆಯು ಜರ್ಮನ್ ಕಾರ್ಮಿಕ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಪ್ರಮುಖ ಬದಲಾವಣೆಯನ್ನು ಒತ್ತಿ ಹೇಳುತ್ತದೆ. ಅಲ್ಲಿ ನುರಿತ ಕೆಲಸಗಾರರ ಕೊರತೆಯು ಕಂಪನಿಗಳ ಮೇಲೆ ಒತ್ತಡ ಹೇರುತ್ತಿದೆ. ಆದರೆ, ಕೆಲವು ಅರ್ಥಶಾಸ್ತ್ರಜ್ಞರು ಈ ಕ್ರಮವು ಹಣದುಬ್ಬರವನ್ನು ಪ್ರಚೋದಿಸಬಹುದು ಎಂದು ಎಚ್ಚರಿಸಿದ್ದಾರೆ.

    ಈ ಪ್ರಾಯೋಗಿಕ ಪ್ರಾಜೆಕ್ಟ್ ಮುಂದುವರಿಯಬೇಕೆಂದರೆ, ಉದ್ಯೋಗಿಗಳು ಕಡಿಮೆ ದಿನಗಳಲ್ಲಿಯೇ ಹೆಚ್ಚು ಉತ್ಪಾದಕತೆ ಸಾಧ್ಯ ಎಂಬುದನ್ನು ಸಾಬೀತು ಪಡಿಸಬೇಕು. ಅಲ್ಲದೆ, ಇದರಿಂದ ಉದ್ಯೋಗಿಗಳು ರಜೆ ತೆಗೆದುಕೊಳ್ಳುವುದು ಕೂಡಾ ಕಡಿಮೆಯಾಗಲಿದೆ ಎಂದು ಭಾವಿಸಲಾಗಿದೆ.

    ಉದ್ಯೋಗದಾತರು ಜರ್ಮನಿಯಲ್ಲಿ ಭಾನುವಾರ ಅಥವಾ ಸಾರ್ವಜನಿಕ ರಜಾದಿನಗಳಲ್ಲಿ ಕೆಲಸ ಮಾಡಲು ಒತ್ತಾಯಿಸುವುದು ಕಾನೂನುಬಾಹಿರವಾಗಿದೆ. ಈ ಎರಡೂ ಸಂದರ್ಭಗಳಲ್ಲಿ ಕೆಲಸಗಾರನು ಕೆಲಸ ಮಾಡಬೇಕಾದರೆ, ಉದ್ಯೋಗದಾತನು ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಬದಲಿ ದಿನವನ್ನು ಒದಗಿಸಲು ಕಾನೂನುಬದ್ಧವಾಗಿ ಜವಾಬ್ದಾರಿ ಹೊಂದಿರುತ್ತಾನೆ.

    ಮಾಲ್ಡೀವ್ಸ್ ಸರ್ಕಾರದ ವಿರುದ್ಧ ವಿಪಕ್ಷ ಪ್ರತಿಭಟನೆ: ಸಂಸತ್​ನಲ್ಲೇ ಮಾರಾಮಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts