More

    ಜಿಂಕೆ ಮತ್ತು ನಾಯಿಯ ಕುಚ್ಚಿಕ್ಕು ಕುಚ್ಚಿಕ್ಕು… ಕಾಡು ಪ್ರಾಣಿಗಳ ರಕ್ಚಣೆಗೆ ನಿಂತ ನಾಯಿ

    ಬೆಂಗಳೂರು: ನಾಯಿಯನ್ನು ನಿಯತ್ತಿನ ಪ್ರಾಣಿ ಎಂದು ಕರೆಯುತ್ತಾರೆ. ಸಾಕಿದ ಮಾಲೀಕನೊಂದಿಗೆ ನಿಕಟ ಸಂಬಂಧ ಬೆಳೆಸಿಕೊಳ್ಳುವ ನಾಯಿ ಯಾವುದೇ ಪರಿಸ್ಥಿತಿಯಲ್ಲೂ ತನ್ನ ಯಜಮಾನನಿಗೆ ತೊಂದರೆಯಾಗುವುದಕ್ಕೆ ಬಿಡುವುದಿಲ್ಲ. ಹಾಗೆಯೇ ಬೇರೆ ಪ್ರಾಣಿಗಳೊಂದಿಗೂ ಸಹ ಅಷ್ಟೇ ಪ್ರೀತಿಯನ್ನು ಬೆಳೆಸಿಕೊಳ್ಳುತ್ತದೆ.

    ತಾನಿರುವ ಪ್ರದೇಶದಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆಂದು ನಾಯಿಯೊಂದು ನಿಂತಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಅಮೆರಿಕದ ಓಹಿಯೋದಲ್ಲಿರುವ ಸಾರ್ಜ್​ ಹೆಸರಿನ ನಾಯಿಯು ತನ್ನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಯಾವುದೇ ಪ್ರಾಣಿ ಸಮಸ್ಯೆಯಲ್ಲಿದ್ದರೂ ಹೋಗಿ ರಕ್ಷಣೆ ಮಾಡುತ್ತದೆಯಂತೆ. ತಾನು ರಕ್ಷಣೆ ಮಾಡಿದ ಪ್ರಾಣಿಗಳೊಂದಿಗೆ ಸ್ನೇಹ ಬೆಳೆಸುತ್ತದೆಯಂತೆ.

    ಸಾರ್ಜ್​ಗೆ ಜಿಂಕೆಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಜಿಂಕೆ ಜತೆಗೆ ಊಟ ಮಾಡುವುದು, ತನ್ನ ಊಟವನ್ನು ಜಿಂಕೆಗೆ ಕೊಡುವುದು, ಅವುಗಳನ್ನು ಮುದ್ದಾಡುವ ಕೆಲಸವನ್ನು ಸಾರ್ಜ್​ ಮಾಡುತ್ತಾನಂತೆ. ವಿ ರೇಟ್​ ಡಾಗ್ಸ್​ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ನಾಯಿ ಮತ್ತು ಜಿಂಕೆಗಳ ಸ್ನೇಹವನ್ನು ತೋರಿಸುವಂತಹ ಫೋಟೋ ಹಾಕಲಾಗಿದ್ದು ಅದೀಗ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸ್ವಾರ್ಥ ತುಂಬಿದ ಬದುಕನ್ನು ಮನುಷ್ಯ ಬದುಕುತ್ತಿರುವಾಗ ಪ್ರಾಣಿಗಳು ಈ ರೀತಿಯಲ್ಲಿ ಸ್ನೇಹ ಹಂಚುತ್ತಿರುವು ಫೋಟೋಗಳನ್ನು ಅನೇಕರು ಶೇರ್​ ಮಾಡಿದ್ದಾರೆ. (ಏಜೆನ್ಸೀಸ್​)

    ಅಭಿಷೇಕ್​ ಬಚ್ಚನನ್ನೇ ಯಾಮಾರಿಸಬಲ್ಲಳು ಈ ಐಶ್ವರ್ಯಾ ರೈ: ಈಕೆ ಅಂದಕ್ಕೆ ನಿದ್ದೆಗೆಡುತ್ತಿದ್ದಾರೆ ಪಡ್ಡೆಹುಡುಗ್ರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts