More

    ಸೈಬರ್ ಅಟ್ಯಾಕ್​ಗೆ ನಲುಗಿತು ಪ್ರಾದೇಶಿಕ ಪತ್ರಿಕೆ: ಬುಧವಾರದ ಸಂಚಿಕೆಯೇ ಪ್ರಕಟವಾಗಲಿಲ್ಲ!

    ಬರ್ಲಿನ್​: ಜರ್ಮನಿಯ ಪ್ರಾದೇಶಿಕ ಪತ್ರಿಕಾ ಸಮೂಹ ಸೈಬರ್​ ಅಟ್ಯಾಕ್​ಗೆ ಗುರಿಯಾಗಿ, ಸಂಕಷ್ಟಕ್ಕೀಡಾದ ಘಟನೆ ಮಂಗಳವಾರ ನಡೆದಿದ್ದು, ಬುಧವಾರದ ಸಂಚಿಕೆ ಪ್ರಕಟಿಸಲಾಗದೆ ನಲುಗಿದ್ದಾಗಿ ವರದಿಯಾಗಿದೆ.

    ದ ಫನ್ಕೆ ಮೀಡಿಯಾ ಗ್ರೂಪ್​ ಸೈಬರ್ ಅಟ್ಯಾಕ್​ಗೆ ಗುರಿಯಾದ ಪತ್ರಿಕಾ ಸಮೂಹ ಕಂಪನಿ. ಸೈಬರ್ ದಾಳಿಯ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ದ ಫನ್ಕೆ ಮೀಡಿಯಾ ಗ್ರೂಪ್, ಜರ್ಮನಿಯುದ್ದಕ್ಕೂ ಇರುವ ಕಂಪನಿಯ ಸಂಪಾದಕೀಯ ಕಚೇರಿ, ಪ್ರಿಂಟಿಂಗ್ ಪ್ರೆಸ್​ಗಳಲ್ಲಿರುವ ಕಂಪ್ಯೂಟರ್​ಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಕೆಲಸ ಮಾಡುವುದು ಅಸಾಧ್ಯವಾಯಿತು. ಮಂಗಳವಾರ ಬೆಳಗ್ಗೆಯಿಂದ ದಾಳಿ ಶುರುವಾಗಿದ್ದು ಒಂದೊಂದೇ ಕಂಪ್ಯೂಟರ್​ ಜಾಲ ಸ್ತಬ್ಧವಾಗುತ್ತ ಹೋಗಿದೆ. ಸೈಬರ್ ದಾಳಿಯ ಕಾರಣ ದೇಶಾದ್ಯಂತ 33 ಲಕ್ಷ ಓದುಗರನ್ನು ಹೊಂದಿರುವ ಬರ್ಲಿನ್​ನ ಮಾರ್ಗೆನ್​​ಪೋಸ್ಟ್​ ಡೇಲಿಯ ಬುಧವಾರದ ಸಂಚಿಕೆ ಪ್ರಕಟವಾಗಿಲ್ಲ. ಆದ್ದರಿಂದ ಓದುಗರು ಆನ್​ಲೈನ್​ನಲ್ಲಿ ಎಲ್ಲ ಸುದ್ದಿಗಳನ್ನು ಉಚಿತವಾಗಿ ಓದಬಹುದಾಗಿದೆ ಎಂದು ಕಂಪನಿ ತಿಳಿಸಿತ್ತು.

    ಇದನ್ನೂ ಓದಿ: ಬಿಕಿನಿ ತೊಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಕಂಗನಾ; ತಾಯಿ ಭೈರವಿ ನಗ್ನಳಾಗಿ ಬಂದರೆ ಏನು ಮಾಡುತ್ತೀರಿ ಎಂದು ಪ್ರಶ್ನೆ

    ಕಳೆದ ತಿಂಗಳು ಡೆನ್ಮಾರ್ಕ್​ನ ಅತಿದೊಡ್ಡ ಸುದ್ದಿ ಸಂಸ್ಥೆ ರಿಟ್​ಝಾವು ಕೆಲವು ದಿನಗಳ ಕಾಲ ಸ್ಥಗಿತಗೊಂಡಿತ್ತು. ಸೈಬರ್ ದಾಳಿಕೋರರು ಈ ಸಂಸ್ಥೆಯ ಕಂಪ್ಯೂಟರ್​ಗಳನ್ನು ಹ್ಯಾಕ್ ಮಾಡಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಒಡ್ಡಿದ್ದರು. ಆದರೆ, ಮೊತ್ತ ಎಷ್ಟು ಎಂಬುದನ್ನು ಸಂಸ್ಥೆ ಬಹಿರಂಗಪಡಿಸಿಲ್ಲ. ವೃತ್ತಿಪರರೇ ಮಾಡಿದ ದಾಳಿ ಇದಾಗಿತ್ತು ಎಂದು ಸಂಸ್ಥೆ ನಂತರ ಹೇಳಿತ್ತು. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಮೀಟರ್ ಬಡ್ಡಿ ಸಾಲಕ್ಕೆ ಡಿಜಿಟಲ್ ಸ್ಪರ್ಶ! – ವಂಚಕರ ಜಾಲಕ್ಕೆ ಬೀಳುವ ಮುನ್ನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts