More

    ನಾಳೆ‌ ಗೀತಾ ಶಿವರಾಜ್​ಕುಮಾರ್ ಕಾಂಗ್ರೆಸ್​ ಸೇರ್ಪಡೆ

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಲ್ಲಿ ರಾಜ್ಯದಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದೆ. ಪ್ರತಿನಿತ್ಯ ಸಾಕಷ್ಟು ನಾಯಕರು ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿರುವುದು ಸಾಮಾನ್ಯವಾಗಿದ್ದು, ಇದೀಗ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​ ಅವರ ಧರ್ಮಪತ್ನಿ ಗೀತಾ ಶಿವರಾಜ್​ಕುಮಾರ್​ ಅವರು ಕಾಂಗ್ರೆಸ್​ ಸೇರ್ಪಡೆಗೆ ಮುಂದಾಗಿದ್ದಾರೆ.

    ಜೆಡಿಎಸ್​ ಪಕ್ಷವನ್ನು ತೊರೆದು ನಾಳೆ ಅಧಿಕೃತವಾಗಿ ಕಾಂಗ್ರೆಸ್​ ಪಕ್ಷ ಸೇರ್ಪಡೆಯಾಗಲಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ನಾಳೆ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: ಮತದಾನಕ್ಕೆ ಕರೆಯೋಲೆ ನೀಡಿದ ಗ್ರಾಪಂ : ಮತದಾನ ಪ್ರಮಾಣ ಹೆಚ್ಚಳಕ್ಕೆ ವಿನೂತನ ಪ್ರಯತ್ನ

    ಬಿಎಸ್​ವೈ ವಿರುದ್ಧ ಸೋಲು

    ಗೀತಾ ಶಿವರಾಜ್​ಕುಮಾರ್​ ಅವರು 2014 ರಲ್ಲಿ ಜೆಡಿಎಸ್​ ಪಕ್ಷದಿಂದ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಫರ್ಧೆ ಮಾಡಿದ್ದರು. ಬಿಎಸ್​ವೈ ವಿರುದ್ಧ ಸ್ಪರ್ಧಿಸಿದ್ದ ಅವರು ಸೋಲುಂಡಿದ್ದರು. ಆಗ ಸಹೋದರ ಮಧು ಬಂಗಾರಪ್ಪ ಅವರು ಜೆಡಿಎಸ್​ ಪಕ್ಷದಲ್ಲಿದ್ದರು.

    ಸಹೋದರನ ಹಾದಿ

    ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಮಧು ಬಂಗಾರಪ್ಪ ಅವರು ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇದೀಗ ಸಹೋದರ ನಡೆಯನ್ನೇ ಹಿಂಬಾಲಿಸಿರುವ ಗೀತಾ ಶಿವರಾಜ್​ಕುಮಾರ್​ ಕಾಂಗ್ರೆಸ್​ ಸೇರುತ್ತಿದ್ದಾರೆ. ಇದನ್ನೂ ಓದಿ: ನನ್ನನ್ನು ಸೋಲಿಸಬೇಕೆಂದೇ ಬಿಜೆಪಿ-ಕಾಂಗ್ರೆಸ್​ ಒಂದಾಗಿದೆ: ನಿಖಿಲ್​ ಕುಮಾರಸ್ವಾಮಿ

    ಮಧು ಬಂಗಾರಪ್ಪ ಅವರು ಸೊರಬ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಸಹೋದರನ ಗೀತಾ ಶಿವರಾಜ್​ಕುಮಾರ್​ ಅವರು ಪ್ರಚಾರ ಸಹ ಮಾಡುತ್ತಿದ್ದಾರೆ. ಹೀಗಾಗಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

    ಮಲ್ಲಿಕಾರ್ಜುನ ಖರ್ಗೆ‌ ಕೂಡಲೇ ಮೋದಿಯವರ ಬಳಿ ಕ್ಷಮೆ‌ ಕೇಳಬೇಕು:ಶೋಭಾ ಕರಂದ್ಲಾಜೆ

    ರಾಜ್ಯದಲ್ಲಿ ಚುನಾವಣೆ ನಡೆಸುತ್ತಿರುವುದು ಚುನಾವಣಾ ಆಯೋಗವೋ? ಬಿಜೆಪಿಯೋ? ಸಿದ್ದು ಕಿಡಿ

    https://www.vijayavani.net/submission-of-duplicate-form-a-form-and-b-form-aiadmk-candidate-file-an-fir-in-bangalore

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts