More

    ಪಂಜಾಬ್ ತಂಡ ಪುಟಿದೇಳಲು ಇವರಿಬ್ಬರು ಕನ್ನಡಿಗರೇ ಕಾರಣ ಎಂದ ಗಾವಸ್ಕರ್

    ದುಬೈ: ಸತತ 5 ಸೋಲಿನಿಂದ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈಗ ಸತತ 4 ಗೆಲುವಿನೊಂದಿಗೆ ಪ್ಲೇಆಫ್​ ರೇಸ್‌ಗೆ ಮರಳಿರುವುದಕ್ಕೆ ದಿಗ್ಗಜ ಬ್ಯಾಟ್ಸ್‌ಮನ್ ಸುನೀಲ್ ಗಾವಸ್ಕರ್, ಇಬ್ಬರು ಕನ್ನಡಿಗರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕನ್ನಡಿಗ ಕೆಎಲ್ ನಾಯಕತ್ವ ಮತ್ತು ಕೋಚ್ ಅನಿಲ್ ಕುಂಬ್ಳೆ ಅವರ ಹೋರಾಟ ಮನೋಭಾವವೇ ತಂಡದ ಯಶಸ್ಸಿಗೆ ಕಾರಣ ಎಂದು ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

    ಆಡಿದ 11 ಪಂದ್ಯಗಳಲ್ಲಿ 5 ಜಯ, 6 ಸೋಲಿನೊಂದಿಗೆ 10 ಅಂಕ ಕಲೆಹಾಕಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವೀಗ ಟೂರ್ನಿಯಲ್ಲಿ ಬಾಕಿ ಉಳಿದಿರುವ ಎಲ್ಲ 3 ಪಂದ್ಯಗಳನ್ನು ಜಯಿಸಿದರೆ ಪ್ಲೇಆಫ್​ ಪ್ರವೇಶಿಸುವ ಉತ್ತಮ ಅವಕಾಶ ಹೊಂದಿದೆ.

    ‘ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈಗ ಗೆಲುವಿನ ಲಯ ಕಂಡುಕೊಂಡಿದೆ. ಟೂರ್ನಿಯ ಆರಂಭದಲ್ಲಿ ಇದು ಮಿಸ್ ಆಗಿತ್ತು. ಮೊದಲ ಪಂದ್ಯದಲ್ಲೇ ಗೆಲುವಿನ ಸನಿಹವಿದ್ದಾಗ ಸೂಪರ್ ಓವರ್‌ಗೆ ಹೋಗಿತ್ತು. ಬಳಿಕ ಅಂತಿಮ ಓವರ್‌ಗಳಲ್ಲಿ ಎಡವಿತ್ತು. ಆದರೆ ಈಗ ಕೊನೆಗೂ ಅವರಿಗೆ ಗೆಲುವಿನ ಲಯ ಲಭಿಸಿದ್ದು, ಕಳೆದ ಕೆಲ ಪಂದ್ಯಗಳಿಂದ ಭರ್ಜರಿ ನಿರ್ವಹಣೆ ತೋರುತ್ತಿದೆ’ ಎಂದ ಗಾವಸ್ಕರ್ ಐಪಿಎಲ್ ಪ್ರಸಾರ ವಾಹಿನಿಯ ವಿಶ್ಲೇಷಣೆಯ ವೇಳೆ ಹೇಳಿದ್ದಾರೆ.

    ‘ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಕೇವಲ 126 ರನ್‌ಗಳನ್ನು ರಕ್ಷಿಸಿಕೊಂಡಿದೆ. ಇದಕ್ಕೆ ಸಾಕಷ್ಟು ಆತ್ಮನಂಬಿಕೆ ಬೇಕಾಗುತ್ತದೆ. ಅದನ್ನು ಅವರು ಪ್ರದರ್ಶಿಸಿದ್ಧಾರೆ. ಕೆಎಲ್ ರಾಹುಲ್ ತಂಡವನ್ನು ಅಮೋಘವಾಗಿ ಮುನ್ನಡೆಸುತ್ತಿದ್ದಾರೆ. ನಾಯಕರಾಗಿ ರಾಹುಲ್ ಬೆಳವಣಿಗೆ ಕಾಣುತ್ತಿದ್ದಾರೆ. ಫೀಲ್ಡಿಂಗ್ ಮತ್ತು ಬೌಲಿಂಗ್ ಬದಲಾವಣೆಯಿಂದ ಇದನ್ನು ನಿರೂಪಿಸಿದ್ದಾರೆ. 19ನೇ ಓವರ್‌ಅನ್ನು ಕ್ರಿಸ್ ಜೋರ್ಡನ್‌ಗೆ ನೀಡಿದ್ದು ಮತ್ತು ಅಂತಿಮ ಓವರ್‌ನಲ್ಲಿ ಅರ್ಷದೀಪ್ ಸಿಂಗ್ 14 ರನ್ ರಕ್ಷಿಸುವ ಭರವಸೆ ಇಟ್ಟಿದ್ದು ಉತ್ತಮ ನಡೆ’ ಎಂದು ಗಾವಸ್ಕರ್ ಶ್ಲಾಸಿದ್ದಾರೆ.

    ‘ಕಿಂಗ್ಸ್ ಇಲೆವೆನ್ ತಂಡದ ಯಶಸ್ಸಿನಲ್ಲಿ ಅನಿಲ್ ಕುಂಬ್ಳೆ ಪಾತ್ರವನ್ನೂ ಮರೆಯದಿರಿ. ಅವರು ವೃತ್ತಿಜೀವನದುದ್ದಕ್ಕೂ ಹೋರಾಟ ಮನೋಭಾವ ಹೊಂದಿದ್ದರು. ಮುರಿದ ಗಲ್ಲದೊಂದಿಗೆ ಅವರು ಬೌಲಿಂಗ್‌ಗೆ ಇಳಿದಿದ್ದು ಇದಕ್ಕೆ ಸಾಕ್ಷಿ. ಈಗ ಅದೇ ಹೋರಾಟ ಮನೋಭಾವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲೂ ಕಾಣಿಸುತ್ತಿದೆ. ಅದರಿಂದಾಗಿಯೇ ತಂಡವೀಗ ಪ್ಲೇಆ್ ರೇಸ್‌ಗೆ ಮರಳುವಂತಾಗಿದೆ’ ಎಂದು ಗಾವಸ್ಕರ್ ಹೇಳಿದ್ದಾರೆ.

    ಕನ್ನಡಿಗ ಕೆಎಲ್ ರಾಹುಲ್‌ಗೆ ಟೀಮ್ ಇಂಡಿಯಾ ಉಪನಾಯಕರಾಗಿ ಬಡ್ತಿ, ಆಸೀಸ್​ ಪ್ರವಾಸಕ್ಕೆ ಹೊಸ ಹೊಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts