More

    ಬುಮ್ರಾರನ್ನು ನಡೆಸಿಕೊಂಡ ರೀತಿಗೆ ವಿರಾಟ್​ ಕೊಹ್ಲಿ ವಿರುದ್ಧ ಗೌತಮ್​ ಗಂಭೀರ್​ ಗರಂ..!

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಕೈಚೆಲ್ಲಿರುವ ಟೀಮ್​ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​, ನಾಯಕ ವಿರಾಟ್​ ಕೊಹ್ಲಿ ಅವರದ್ದು ಕಳಪೆ ನಾಯಕತ್ವ ಎಂದು ಜರಿದಿದ್ದಾರೆ.

    ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿರುವ ಭಾರತ ಸರಣಿಯನ್ನು ಕೈಚೆಲ್ಲಿದೆ. ಎರಡನೇ ಪಂದ್ಯದಲ್ಲಿ ವೇಗಿ ಜಸ್ಪ್ರಿತ್​ ಬುಮ್ರಾರನ್ನು ನಾಯಕ ಕೊಹ್ಲಿ ನಿರ್ವಹಿಸಿದ ರೀತಿಗೆ ಗಂಭೀರ ಅಸಮಾಧಾನಗೊಂಡಿದ್ದಾರೆ.

    ಬುಮ್ರಾ ಮೊದಲ ಓವರ್​ನಲ್ಲಿ ಕೇವಲ 7 ರನ್​ ನೀಡಿದ್ದರು. ಇನ್ನಿಂಗ್ಸ್​ನ ಎರಡನೇ ಮತ್ತು ನಾಲ್ಕನೇ ಓವರ್​ ಎಸೆದ ಬೂಮ್ರಾ, ಮೊದಲನೇ ಪವರ್​ ಪ್ಲೇನಲ್ಲಿ ಇನ್ನೊಂದು ಓವರ್​ ಎಸೆಯಬಹುದಿತ್ತು. ಆದರೆ, ಹೊಸ ಬಾಲ್​ನಲ್ಲಿ ಕೊಹ್ಲಿ ಅವರು ಬುಮ್ರಾಗೆ ಕೇವಲ ಎರಡು ಓವರ್​ ಯಾಕೆ ಕೊಟ್ಟರು ಎಂಬುದೇ ಅರ್ಥವಾಗುತ್ತಿಲ್ಲ ಎಂದು ಗಂಭೀರ್​ ಹೇಳಿದ್ದಾರೆ.

    ಇದನ್ನೂ ಓದಿ: FACT CHECK | ಅರ್ಚಕರ ಜತೆಗೆ ಚಿರತೆ ಕುಟುಂಬ ಮಲಗುತ್ತಿದ್ದ ವೈರಲ್ ವಿಡಿಯೋದ ನಿಜಾಂಶವೇನು?

    ನಿಜಕ್ಕೂ ಅವರ (ಕೊಹ್ಲಿ) ನಾಯಕತ್ವವನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಈ ರೀತಿಯ ಬ್ಯಾಟಿಂಗ್​ ಲೈನ್​ ಅಪ್​ ರೀತಿ ತಡೆಯಬೇಕಾದರೆ, ವಿಕೆಟ್​ ಪಡೆಯುವುದು ಎಷ್ಟು ಮಹತ್ವ ಎನ್ನುವುದರ ಬಗ್ಗೆ ನಾವು ಚರ್ಚಿಸುತ್ತೇವೆ. ಆದರೂ, ಪ್ರೀಮಿಯರ್ ಬೌಲರ್​ಗೆ ಎರಡು ಓವರ್‌ ಮಾಡಲು ಹೇಳುತ್ತೀರಿ. ಸಾಮಾನ್ಯವಾಗಿ ಏಕದಿನ ಪಂದ್ಯಗಳಲ್ಲಿ 4-3-3 ಮಾದರಿಯಲ್ಲಿ ಓವರ್​ ಎಸೆಯುತ್ತಾರೆ. ಬಹುಶಃ ನಾಲ್ಕು ಓವರ್​ಗಳನ್ನು ಮಾಡಿದ್ದುಂಟು ಎಂದು ಗಂಭೀರ್​ ತಿಳಿಸಿದ್ದಾರೆ.

    ಕೇವಲ ಎರಡೇ ಓವರ್​ಗೆ ನಿಮ್ಮ ಪ್ರೀಮಿಯರ್​ ಫಾಸ್ಟ್​ ಬೌಲರ್​ ಅನ್ನು ನಿಲ್ಲಿಸಿದರೆ ಅದು ಪ್ರಮುಖ ಸುದ್ದಿಯೇ, ಈ ರೀತಿಯ ನಾಯಕತ್ವವನ್ನು ಈ ಕ್ಷಣದವರೆಗೂ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಆ ನಾಯಕತ್ವದ ಬಗ್ಗೆ ವಿವರಣೆಯನ್ನು ನೀಡಲಾಗುತ್ತಿಲ್ಲ. ಇದು ಟಿ20 ಕ್ರಿಕೆಟ್​ ಅಲ್ಲ. ಕೊಹ್ಲಿ ಅವರದ್ದು ನಿಜಕ್ಕೂ ಕಳಪೆ ನಾಯಕತ್ವ ಎಂದು ಗಂಭೀರ್​ ಟೀಕಿಸಿದ್ದಾರೆ.

    ಮುಂದಿನ ಪಂದ್ಯದಲ್ಲಿ ವಾಷಿಂಗ್ಟನ್​ ಸುಂದರ್​ ಅಥವಾ ಶಿವಂ ದುಬೆಗೆ ಅವಕಾಶ ಕೊಡಬಹುದು. ಅವರು ಏಕದಿನ ಮಾದರಿ ಪಂದ್ಯಗಳಲ್ಲಿ ಹೇಗೆ ನಿರ್ವಹಿಸುತ್ತಾರೆ ಎಂಬುದು ತಿಳಿಯುತ್ತದೆ. ಆದರೆ, ನೀವು ಆಸ್ಟ್ರೇಲಿಯಾದಲ್ಲಿ ಯಾರೂ ಸಹ ಸರಿಯಾಗಿ ನಿರ್ವಹಿಸದಿದ್ದರೆ, ಅದು ಆಯ್ಕೆಯಲ್ಲಿನ ದೋಷ ಎಂದಿದ್ದಾರೆ. (ಏಜೆನ್ಸೀಸ್​)

    ಸರಣಿ ಸೋಲಿನ ನಡುವೆ ಹಲವು ದಾಖಲೆ ಬರೆದ ವಿರಾಟ್ ಕೊಹ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts