More

    ವಜ್ರದ ವ್ಯಾಪಾರಿಯ ಮಗಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಗೌತಮ್ ಅದಾನಿ ಪುತ್ರ

    ನವದೆಹಲಿ: ಉದ್ಯಮಿ ಗೌತಮ್ ಅದಾನಿ ಅವರ ಪುತ್ರ ಜೀತ್ ಅದಾನಿ ಕಳೆದ ಭಾನುವಾರ (ಮಾ.12) ದಿವಾ ಜೈಮಿನ್ ಶಾ ಎಂಬಾಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ನಿಶ್ಚಿತಾರ್ಥದಲ್ಲಿ ಎರಡೂ ಕುಟುಂಬಗಳ ಆಪ್ತರು ಮಾತ್ರ ಭಾಗಿಯಾಗಿದ್ದರು ಎಂದು ವರದಿಯಾಗಿದೆ.

    ಜೀತ್ ಅದಾನಿ ಪ್ರಸ್ತುತ ಅದಾನಿ ಸಮೂಹದ ಹಣಕಾಸು ವಿಭಾಗದ ಉಪಾಧ್ಯಕ್ಷರಾಗಿದ್ದಾರೆ. ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ಅನ್ವಯಿಕ ವಿಜ್ಞಾನಗಳ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಜೀತ್ ಅದಾನಿ ಮದುವೆ ಆಗುತ್ತಿರುವ ದಿವಾ ಜೈಮಿನ್ ಶಾ, ಸಿ.ದಿನೇಶ್ & ಕೋ.ಪ್ರೈ.ಲಿ.ನ ವಜ್ರದ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ.

    ಇದನ್ನೂ ಓದಿ: ಗಂಡನ ಮನೆಯಲ್ಲಿದ್ದ ಚಿನ್ನ ಕದ್ದ ನವವಿವಾಹಿತೆ ಪ್ರಿಯಕರನೊಂದಿಗೆ ಪರಾರಿ!

    ಸದ್ಯ ಜೀತ್ ಅದಾನಿ ಮತ್ತು ದಿವಾ ಜೈಮಿನ್ ಅವರ ನಿಶ್ಚಿತಾರ್ಥ ಖಾಸಕಿಯಾಗಿ ನಡೆದಿದೆ. ಎರಡು ಶ್ರೀಮಂತ ಕುಟುಂಬಗಳ ನಡುವಿನ ವಿವಾಹ ಇದಾಗಿದ್ದು, ಅದ್ಧೂರಿಯಾಗಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಇವರಿಬ್ಬರ ವಿವಾಹ ಸಧ್ಯದಲ್ಲೇ ನಡೆಯಲಿದ್ದು, ದಿನಾಂಕ ಇನ್ನೂ ಬಹಿರಂಗಗೊಂಡಿಲ್ಲ. ಸದ್ಯ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್)

    ಇದನ್ನೂ ಓದಿ: ತುಮಕೂರು | 500 ರೂ. ವಿಚಾರಕ್ಕೆ ಗಲಾಟೆ; ಸಿಟ್ಟಿನಲ್ಲಿ ಹೆಂಡತಿ, ಮಕ್ಕಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದವನ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts