More

    ಚಂದ್ರನಲ್ಲಿ ಭಾರತೀಯನೊಬ್ಬ ಇಳಿಯವವರಿಗೆ ಚಂದ್ರಯಾನ ಮಿಷನ್​ ಮುಂದುವರಿಕೆ; ಇಸ್ರೋ ಅಧ್ಯಕ್ಷ ಎಸ್​. ಸೋಮನಾಥ್​

    ಅಹಮದಾಬಾದ್​: ಚಂದ್ರಯಾನ 3ನೇ ಭಾಗ ಭರ್ಜರಿ ಯಶಸ್ಸು ಕಂಡಿದೆ. ಇದರ ಬೆನ್ನೆಲ್ಲೇ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್‌ ಅವರು ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.

    ಇದನ್ನೂ ಓದಿ: ಮತದಾನದ ದಿನ ಕೋಚ್ ಬೆಹರ್‌ಗೆ ತೆರಳದಂತೆ ರಾಜ್ಯಪಾಲರಿಗೆ ಇಸಿ ಸಲಹೆ!

    ಚಂದ್ರನ ಅಂಗಳದಲ್ಲಿ ದೇಶದ ಗಗನಯಾನಿಯೊಬ್ಬನನ್ನು ಇಳಿಯುವವರೆಗೂ ಚಂದ್ರಯಾನ ಮಿಷನ್‌ ಸರಣಿಯನ್ನು ಮುಂದುವರಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್​. ಸೋಮನಾಥ್​ ಅವರು ಬುಧವಾರ ಹೇಳಿದ್ದಾರೆ.

    ಭಾರತೀಯ ಗಗನಯಾನ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
    ಚಂದ್ರಯಾನ 3 ಯಶಸ್ವಿಯಾಗಿದ್ದು ದತ್ತಾಂಶ ಸಂಗ್ರಹ ಸಂಗ್ರಹಿಸಲಾಗಿದೆ. ಈ ಬಾಹ್ಯಕಾಶ ಕಾರ್ಯಕ್ರಮ ಕುರಿತು ವೈಜ್ಞಾನಿಕ ವರದಿ ಪ್ರಕಟಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗ, ನಾವು ದೇಶದ ಗಗನಯಾತ್ರಿಯೊಬ್ಬರು ಚಂದ್ರನ ಮೇಲೆ ಇಳಿಯುವವರೆಗೂ ಈ ಕಾರ್ಯಕ್ರಮವನ್ನು ಮುಂದುವರಿಸಲು ಬಯಸಿದ್ದೇವೆ ಎಂದು ಹೇಳಿದರು.

    ಚಂದ್ರನ ಅಂಗಳಕ್ಕೆ ಮನುಷ್ಯನನ್ನು ಕಳುಹಿಸುವ ಮುನ್ನ ಭಾರಿ ಪ್ರಮಾಣದ ತಯಾರಿ ಬೇಕಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತದೆ. ಮುಂದಿನ ಮಿಷನ್‌ನಲ್ಲಿ ನಾವು ಇದೆಲ್ಲವನ್ನೂ ಸಾಧಿಸುವ ಹಾಗೂ ಆ ಮೂಲಕ ಮಾನವಸಹಿತ ಚಂದ್ರಯಾನ ಕೈಗೊಳ್ಳುವ ವಿಶ್ವಾಸದಲ್ಲಿದ್ದೇವೆ ಎಂದರು. ಇದೇ ವೇಳೆ, ಗಗನಯಾನದ ಸಿದ್ಧತೆಯೂ ಮುಂದುವರಿದಿದೆ ಎಂದು ಕೂಡ ಹೇಳಿದರು.

    ಭಾರತದ ಮೊಟ್ಟಮೊದಲ ಮಾನವ ಬಾಹ್ಯಾಕಾಶ ಹಾರಾಟದ ಮಿಷನ್ ಗಗನ್‌ಯಾನ್ ಕುರಿತು ಸೋಮನಾಥ್ ಅವರು ಈ ವರ್ಷ ಇಸ್ರೋ ಸಿಬ್ಬಂದಿಗಳಿಲ್ಲದ ಮಿಷನ್, ಪರೀಕ್ಷಾ ವಾಹನ ಹಾರಾಟದ ಮಿಷನ್ ಮತ್ತು ಏರ್‌ಡ್ರಾಪ್ ಪರೀಕ್ಷೆಯನ್ನು ನಡೆಸಲಿದೆ ಎಂದು ಹೇಳಿದರು.

    “ಏಪ್ರಿಲ್ 24 ರಂದು ಏರ್‌ಡ್ರಾಪ್ ಪರೀಕ್ಷೆ ನಡೆಯಲಿದೆ. ನಂತರ ಮುಂದಿನ ವರ್ಷ ಎರಡು ಗಗನಯಾತ್ರೆ ನಡೆಸಲಾಗುವುದು. ಎಲ್ಲವೂ ಸರಿ ಎಂಬುದು ಖಚಿತವಾದರೆ ಮುಂದಿನ ವರ್ಷಾಂತ್ಯಕ್ಕೆ ಮಾನ ಸಹಿತ ಗಗನಯಾನವನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಶ್ರೀರಾಮನವಮಿ ಆಚರಿಸಿ ಹೋಗುತ್ತಿದ್ದವರನ್ನ ಅಡ್ಡಗಟ್ಟಿ ಅನ್ಯಕೋಮಿನ ಯುವಕರಿಂದ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts