More

    ನಾಳೆ GATE ಫಲಿತಾಂಶ ಪ್ರಕಟ

    ಬೆಂಗಳೂರು: ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ಸಿ) ಮಾ.16ರಂದು ಗ್ರಾಜುಯೇಟ್ ಆ್ಯಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ 2024 (GATE) ಪರೀಕ್ಷೆಯ ಫಲಿತಾಂಶ ಪ್ರಕಟಿಸಲಿದೆ. ಅಭ್ಯರ್ಥಿಗಳು gate2024.iisc.ac.in.ನಲ್ಲಿ ಫಲಿತಾಂಶ ನೋಡಬಹುದು.

    ಮಾ.23ರಿಂದ ಮೇ.31ರವರೆಗೂ ಸ್ಕೋರ್ ಕಾರ್ಡ್ ಲಭ್ಯವಿರಲಿದ್ದು, 3 ವರ್ಷಗಳ ಅವಧಿಗೆ ಸ್ಕೋರ್‌ಕಾರ್ಡ್‌ಗಳು ಚಾಲ್ತಿಯಲ್ಲಿರಲಿವೆ. ಗೇಟ್ ಸ್ಕೋರ್ ಬಳಸಿಕೊಂಡು ಅಭ್ಯರ್ಥಿಗಳು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಲ್ಲಿ ಎಂಇ, ಎಂ.ಟೆಕ್‌ಗೆ ದಾಖಲಾತಿ ಪಡೆಯಬಹುದು.

    ಇಂಟರ್ನ್‌ಶಿಪ್ ಮಾಡಲು ಅವಕಾಶ
    ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 7 ಮತ್ತು 8ನೇ ಸೆಮಿಸ್ಟರ್‌ನಲ್ಲಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒಂದು ವರ್ಷದವರೆಗೆ ಇಂಟರ್ನ್‌ಶಿಪ್ ಮತ್ತು ಪ್ರಾಜೆಕ್ಟ್ ಮಾಡಲು ಅವಕಾಶ ನೀಡಲು ಮುಂದಾಗಿದೆ. ವಿದ್ಯಾರ್ಥಿಗಳು ಈ ಸೆಮಿಸ್ಟರ್‌ಗಳಲ್ಲಿ ತಮ್ಮ ಥಿಯರಿ ವಿಷಯಗಳನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದಾಗಿದೆ. ಈಗಾಗಲೇ 7ನೇ ಸೆಮಿಸ್ಟರ್‌ನಲ್ಲಿ 6-8 ವಾರಗಳ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಕಡ್ಡಾಯಗೊಳಿಸಲಾಗಿದ್ದು, ಈ ನಿಯಮಗಳ ಪ್ರಕಾರ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮತ್ತು ಪ್ರಾಜೆಕ್ಟ್‌ಗಳಿಗೆ ಅಂತಿಮ ವರ್ಷವನ್ನು ಬಳಸಿಕೊಳ್ಳಬಹುದಾಗಿದೆ.

    ಕೆಪಿಎಸ್‌ಸಿಯಿಂದ ಗ್ರೂಪ್ ‘ಬಿ’ಗೆ ನೇಮಕಾತಿ; ಸ್ಪರ್ಧಾ ಪರೀಕ್ಷೆ ಮೂಲಕ ಹುದ್ದೆಗಳ ಭರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts