More

    ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಇಬ್ಬರಿಗೆ ಗಾಯ

    ಭಟ್ಕಳ: ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಬೈಕ್​ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಬೈಕ್​ನ ಹಿಂಬದಿಯಲ್ಲಿದ್ದ ಮಹಿಳೆ ಮತ್ತು ಟ್ಯಾಂಕರ್ ಚಾಲಕ ಗಾಯಗೊಂಡ ಘಟನೆ ತಾಲೂಕಿನ ಪುರವರ್ಗ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಸಂಭವಿಸಿದೆ.

    ಬೈಕ್​ನಲ್ಲಿ ಹಿಂಬದಿ ಕುಳಿತಿದ್ದ ಹೊನ್ನಾವರ ತಾಲೂಕಿನ ಮಂಕಿಯ ಮಹಿಳೆ ಖಾತುನ ಇಮ್ತಿಯಾಜ್ ಬೈಲೂರಕರ್ ಹಾಗೂ ಚಾಲಕ ಮಂಜುನಾಥ ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹುಬ್ಬಳ್ಳಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಶಿರೂರಿನಿಂದ ಮಂಕಿಗೆ ತೆರಳುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದೆ. ಬೈಕ್​ನಲ್ಲಿದ್ದ ಮಹಿಳೆ ಟ್ಯಾಂಕರ್ ಮಧ್ಯೆ ಸಿಲುಕಿಕೊಂಡಿದ್ದಳು. ಬಳಿಕ ಹೊರಗೆ ತರಲಾಯಿತು. ಟ್ಯಾಂಕರ್ ಉರುಳಿ ಬೀಳುತ್ತಿದ್ದಂತೆ ಕೆಲಕಾಲ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಟ್ಯಾಂಕರ್ ಖಾಲಿ ಇದೆ ಎಂದು ತಿಳಿಯುತ್ತಿದ್ದಂತೆ ಜನರು ಸಮಾಧಾನದ ನಿಟ್ಟುಸಿರು ಬಿಟ್ಟರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts