More

    ಗಾರ್ಮೆಂಟ್ಸ್ ಮಹಿಳೆಯರಿಗೆ 105 ರೂಪಾಯಿಗೇ ಮಾಸಿಕ ಬಸ್ ಪಾಸ್; ವನಿತಾ ಸಂಗಾತಿ ಯೋಜನೆಯ ಕೊಡುಗೆ

    ಬೆಂಗಳೂರು: ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಲು ರಾಜ್ಯ ಸರ್ಕಾರವು ವನಿತಾ ಸಂಗಾತಿ ಯೋಜನೆಯಡಿ 105 ರೂಪಾಯಿಗೇ ಮಾಸಿಕ ಬಸ್ ಪಾಸ್ ನೀಡಲಾಗುತ್ತದೆ. 2020-21ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಗಾರ್ಮೆಂಟ್ಸ್ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ನೀಡುವ ಯೋಜನೆ ಘೋಷಿಸಲಾಗಿತ್ತು. ಮಾಸಿಕ ಬಸ್ ಪಾಸ್‌ನ ನಿಗದಿತ ದರದಲ್ಲಿ ಗಾರ್ಮೆಂಟ್ಸ್‌ಗಳಿಂದ ಶೇ.60, ರಾಜ್ಯ ಸರ್ಕಾರ ಶೇ.20, ಬಿಎಂಟಿಸಿ ಹಾಗೂ ಮಹಿಳೆಯಿಂದ ತಲಾ ಶೇ.10 ಹಣ ಭರಿಸಿಕೊಳ್ಳಲಾಗುವುದು. ಸದ್ಯ ಬಿಎಂಟಿಸಿ ಮಾಸಿಕ ಬಸ್‌ಪಾಸ್ ದರ 1,050 ರೂ. ಆಗಿದ್ದು, ಅದರಂತೆ ಮಹಿಳೆಯರು ಕೇವಲ 105 ರೂ. ಪಾವತಿಸಿ ಬಸ್ ಪಾಸ್ ಪಡೆಯಬಹುದು.

    ಯೋಜನೆಗೆ ಕಾರ್ಮಿಕ ಇಲಾಖೆ ಅನುಮೋದನೆ ಬಾಕಿ ಇದ್ದು, ಶೀಘ್ರದಲ್ಲೇ ಒಪ್ಪಿಗೆ ದೊರೆಯುವ ನಿರೀಕ್ಷೆ ಇದೆ. ನಗರದ ಗಾರ್ಮೆಂಟ್ಸ್‌ಗಳಲ್ಲಿ 5 ಲಕ್ಷಕ್ಕೂ ಅಧಿಕ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದು, ರಿಯಾಯಿತಿ ದರದ ಮಾಸಿಕ ಬಸ್ ಪಾಸ್‌ನಿಂದಾಗಿ ಅವರ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಕಾರ್ಮಿಕ ಇಲಾಖೆ ಅನುಮೋದನೆ ಸಿಕ್ಕ ಬಳಿಕ ಪಾಸ್ ವಿತರಣೆಗೆ ಕ್ರಮ ವಹಿಸುವುದಾಗಿ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮೈಮೇಲೇ ಲಾರಿ ಚಲಿಸಿ 3 ವರ್ಷದ ಮಗು ಸ್ಥಳದಲ್ಲೇ ಸಾವು; ಪುತ್ರಿಯೊಂದಿಗೆ ದಂಪತಿ ಸಾಗುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ

    ‘ನಿನ್ನ ಮಾತನ್ನು ಕೇಳಿಯೇ ನಾನು ಈ ಪರಿಸ್ಥಿತಿಗೆ ಬಂದಿದ್ದು’ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ? ಯಾರ ಬಗ್ಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts