More

    ಬಜ್ಪೆಯಲ್ಲಿ ಕಸ ನಿರ್ವಹಣೆ ಕಾರ್ಯಾಗಾರ

    ಮಂಗಳೂರು: ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು, ಸಹೋದಯ ಬೆಥನಿ ಸೇವಾಕೇಂದ್ರ ಬೈಂದೂರು, ಎಪಿಡಿ ಫೌಂಡೇಶನ್ ಮಂಗಳೂರು ಹಾಗೂ ಲಿಟ್ಲ್‌ಫ್ಲವರ್ ಪ್ರಾಥಮಿಕ ಶಾಲೆ ಬಜ್ಪೆ ಸಹಯೋಗದಲ್ಲಿ ಬಜ್ಪೆಯಲ್ಲಿ ಕಸ ನಿರ್ವಹಣೆ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ಎಪಿಡಿ ಫೌಂಡೇಶನ್ ಮುಖ್ಯಸ್ಥೆ ಗೀತಾ ಸೂರ್ಯ ಮತ್ತು ಪರಿಸರ ತಜ್ಞೆ ಅಶ್ವಿನಿ ಭಟ್ ಕಸ ವಿಂಗಡಣೆ ಹಾಗೂ ಅಪಾಯಕಾರಿ ಕಸಗಳಿಂದ ಆಗುವ ದುಷ್ಪಪರಿಣಾಮಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿ ಪ್ರಾಯೋಗಿಕವಾಗಿ ತ್ಯಾಜ್ಯ ನಿರ್ವಹಣೆ ಪ್ರಕ್ರಿಯೆಯ ವಿಧಾನ ತೋರಿಸಿದರು. ಬಜ್ಪೆ ಲಿಟ್ಲ್‌ಫ್ಲವರ್ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕಿ ಡೆಲ್ಸಿ ಡಿಸೋಜ, ರೆನಿಲ್ಲಾ ರೋಶ್ನಿ ಉಪಸ್ಥಿತರಿದ್ದರು. ಅನುಷ್ಕಾ ಕಾರ್ಯಕ್ರಮ ನಿರೂಪಿಸಿದರು. ನೀಲ್, ಅನುಷ್ಕಾ, ಆಗ್ನೇಷಿಯಾ ಕಾರ್ಯಕ್ರಮ ಸಂಯೋಜಿಸಿದರು. ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts