More

    ತೆಂಗಿನಕಾಯಿ ಚೀಲಗಳಲ್ಲಿ 90 ಕೆ.ಜಿ. ಗಾಂಜಾ; ಕಳ್ಳಸಾಗಣೆಗೆ ಹೀಗೂ ಒಂದು ದಾರಿ ಕಂಡುಕೊಂಡ ಖದೀಮರು

    ಬೆಂಗಳೂರು: ಕಳ್ಳಸಾಗಣೆಗಾಗಿ ನಾನಾ ದಾರಿಯನ್ನು ಕಂಡುಕೊಳ್ಳುವ ಸ್ಮಗ್ಲರ್ಸ್ ಇಲ್ಲೊಂದು ಕಡೆ ತೆಂಗಿನಕಾಯಿಗೆ ಮೊರೆ ಹೋಗಿದ್ದಾರೆ. ಅರ್ಥಾತ್, ತೆಂಗಿನಕಾಯಿ ಚೀಲಗಳ ಮಧ್ಯೆ ಗಾಂಜಾ ತುಂಬಿಟ್ಟುಕೊಂಡು ಸಾಗಿಸುತ್ತಿದ್ದ ಆರೋಪಿಗಳು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಆಂಧ್ರಪ್ರದೇಶದಿಂದ ಟ್ರಕ್‌ನಲ್ಲಿ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ಪಡೆ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿ 90 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ. ಟ್ರಕ್ ಚಾಲಕ ಎ. ಕುಮಾರ್ ಮತ್ತು ಝಡ್. ಹುಸೇನ್ ಬಂಧಿತರು.

    ರಾಜ್ಯದ ಈ ಇಬ್ಬರು ಏಪ್ರಿಲ್ 9ರಂದು ಆಂಧ್ರಪ್ರದೇಶದಿಂದ ಐಷರ್ ವಾಹನದಲ್ಲಿ ತೆಂಗಿನಕಾಯಿ ಚೀಲದ ಜತೆಯಲ್ಲಿ ಗಾಂಜಾ ತುಂಬಿದ್ದ ಚೀಲಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದರು. ಬಾತ್ಮೀದಾರರಿಂದ ಖಚಿತ ಮಾಹಿತಿ ಪಡೆದ ಎನ್‌ಸಿಬಿ ಅಧಿಕಾರಿಗಳು ದೇವನಹಳ್ಳಿ ಬಳಿ ಟ್ರಕ್ ತಡೆದು ಪರಿಶೀಲನೆ ನಡೆಸಿದ್ದಾರೆ. ತೆಂಗಿನ ಚೀಲದ ಜೊತೆಗೆ 3 ಗೋಣಿ ಚೀಲದಲ್ಲಿ ಗಾಂಜಾ ಪತ್ತೆಯಾಗಿದೆ. ಬೆಂಗಳೂರಿಗೆ ಗಾಂಜಾ ತಂದು ಬೇರೆ ಜಿಲ್ಲೆಗಳಿಗೆ ಸಾಗಾಟ ಮಾಡಲು ಸಜ್ಜಾಗಿದ್ದರು ಎಂದು ಎನ್‌ಸಿಬಿ ಪ್ರಾದೇಶಿಕ ನಿರ್ದೇಶಕ ಅಮಿತ್ ಘೌವೇಟ್ ತಿಳಿಸಿದ್ದಾರೆ.

    ಇದನ್ನೂ ಓದಿ: ಅಂಗಡಿಯಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟ; ಬಾಲಕಿ ಸೇರಿ ಇಬ್ಬರು ಜೀವಂತ ದಹನಗೊಂಡು ಸ್ಥಳದಲ್ಲೇ ಸಾವು! 

    ನಕ್ಸಲ್ ಪ್ರದೇಶವಾದ ಆಂಧ್ರಪ್ರದೇಶ, ಒಡಿಶಾ ಗಡಿಭಾಗದಲ್ಲಿ ಹೆಚ್ಚಾಗಿ ಗಾಂಜಾ ಬೆಳೆಯಲಾಗುತ್ತಿದೆ. ಅಲ್ಲಿಂದ ದೆಹಲಿ, ಮುಂಬೈ, ರಾಜಸ್ಥಾನ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಶ್ರೀಲಂಕಾಗೆ ಕಳ್ಳಸಾಗಣೆ ಮಾಡಲಾಗುತ್ತಿದೆ. ಗುಡ್ಡಗಾಡು ಪ್ರದೇಶಗಳಾದ ಹಿಮಾಚಲಪ್ರದೇಶ, ಉತ್ತರಾಖಂಡ, ಈಶಾನ್ಯ ರಾಜ್ಯಗಳಲ್ಲಿ ಸಹ ಹೆಚ್ಚಾಗಿ ಗಾಂಜಾ ಬೆಳೆಯುತ್ತಿದ್ದಾರೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೆ ನಂಬರ್​ ಪ್ಲೇಟ್ ಮರೆಮಾಚಿ ಪರಾರಿ!; ದಂಡ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರಚಂಡರು..

    ರುಂಡ-ಮುಂಡ ಬೇರೆ ಮಾಡಿ ಸೇಡು ತೀರಿಸಿಕೊಂಡರು; ಚಿಕ್ಕಪ್ಪನ ಮೇಲಿನ ದ್ವೇಷಕ್ಕೆ ಮಗನ ಕೊಲೆ

    ರಾಜ್ಯದಲ್ಲಿ ಮತ್ತೆ ಲಾಕ್​ಡೌನ್?!; ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದ್ದೇನು?​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts