ರುಂಡ-ಮುಂಡ ಬೇರೆ ಮಾಡಿ ಸೇಡು ತೀರಿಸಿಕೊಂಡರು; ಚಿಕ್ಕಪ್ಪನ ಮೇಲಿನ ದ್ವೇಷಕ್ಕೆ ಮಗನ ಕೊಲೆ

ಬೆಂಗಳೂರು: ಚಿಕ್ಕಪ್ಪನ ಮೇಲಿನ ಹಳೇ ದ್ವೇಷಕ್ಕಾಗಿ ಮಗನನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ರುಂಡ- ಮುಂಡ ಬೇರೆ ಮಾಡಿದ್ದಾರೆ. ಶ್ರೀನಿವಾಸಪುರದ ರಾಘವೇಂದ್ರ (28) ಕೊಲೆಯಾದ ವ್ಯಕ್ತಿ. ಭಾನುವಾರ ಸಂಜೆ 6 ಗಂಟೆಯಲ್ಲಿ ಕೃತ್ಯ ನಡೆದಿದ್ದು, ಆರೋಪಿಗಳಾದ ಹೇಮಣ್ಣ ಮತ್ತು ವೇಲು ಎಂಬುವರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಟೈಲ್ಸ್ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಪಾಲಕರ ಜತೆ ನೆಲೆಸಿದ್ದ. ಮೃತ ವ್ಯಕ್ತಿಗೆ ಚಿಕ್ಕಪ್ಪಂದಿರಾದ ಮುನಿರಾಜು ಮತ್ತು ಮುನಿಸ್ವಾಮಿ ಎಂಬುವರು ಇದ್ದಾರೆ. ಎರಡು ವರ್ಷಗಳ ಹಿಂದೆ ಮುನಿಸ್ವಾಮಿ ಮನೆ ಮುಂದೆ ಮುನಿರಾಜು … Continue reading ರುಂಡ-ಮುಂಡ ಬೇರೆ ಮಾಡಿ ಸೇಡು ತೀರಿಸಿಕೊಂಡರು; ಚಿಕ್ಕಪ್ಪನ ಮೇಲಿನ ದ್ವೇಷಕ್ಕೆ ಮಗನ ಕೊಲೆ