More

    ಗಾಂಜಾ ಆರೋಪಿ ಬಳಿ ಪಿಸ್ತೂಲ್, ಸಜೀವ ಗುಂಡು ಪತ್ತೆ

    ಪುತ್ತೂರು : ಬಂಧಿತ ಆರೋಪಿಗಳು ತನಿಖೆ ವೇಳೆ ನೀಡಿದ ಮಾಹಿತಿ ಅನುಸಾರ ಗಾಂಜಾ ಸರಬರಾಜುದಾರನೊಬ್ಬನನ್ನು ಪುತ್ತೂರು ಪೊಲೀಸರು ಬೆನ್ನಟ್ಟಿ ಮಾಲು ಸಹಿತ ಬಂಧಿಸಿದಾಗ, ಆತನ ಬಳಿ ಪಿಸ್ತೂಲ್ ಮತ್ತು ಸಜೀವ ಗುಂಡು ಪತ್ತೆಯಾಗಿದೆ. ವಿಟ್ಲ ಕುಂಡಡ್ಕ ನಿವಾಸಿ, ಪಿಎಫ್‌ಐ ಕಾರ್ಯಕರ್ತ ಮಹಮ್ಮದ ಮುವಾಝ್(30) ಬಂಧಿತ.

    ಈತನನ್ನು ಮೇ 22 ರಂದು ರಾತ್ರಿ ಕೆದಿಲ ಗ್ರಾಮದ ಪೇರಮೊಗ್ರು ಎಂಬಲ್ಲಿ ಬಂಧಿಸಲಾಗಿದೆ. ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಕೋಚಕಟ್ಟೆಯ ಶಫೀಕ್ ಕೆ.ವಿ(24), ಕುಂತೂರು ಎರ್ಮಲ ನಿವಾಸಿ ರಾಝೀಕ್(28) ಎಂಬವರನ್ನು ಬಂಧಿಸಿದ್ದರು. ಇವರಿಬ್ಬರು ವೀರಮಂಗಲ ರೈಲ್ವೆ ಹಳಿ ಬಳಿ ಗಾಂಜಾ ತುಂಬಿದ್ದ ಬ್ಯಾಗ್ ಹಿಡಿದು ನಿಂತಿದ್ದರು. ವಿಚಾರಣೆ ವೇಳೆ ಸ್ನೇಹಿತ ಮಹಮ್ಮದ್ ಮುವಾಝ್ ಎಂಬಾತ ಗಾಂಜಾ ಸರಬರಾಜು ಮಾಡುವ ಮಾಹಿತಿ ಲಭಿಸಿತ್ತು.

    2 ಕೆ.ಜಿ ಗಾಂಜಾ, ನಗದು ವಶ: ಪಿಎಫ್‌ಐ ಸಂಘಟನೆಗೆ ಸೇರಿದ ಬಂಧಿತ ಮಹಮ್ಮದ್ ಮುವಾಝ್ ಮಂಗಳೂರಿನಿಂದ ಗಾಂಜಾ ಖರೀದಿಸಿ ಆರೋಪಿಗಳಿಗೆ ಮಾರಲು ಕಾರಿನಲ್ಲಿ ವೀರಮಂಗಲಕ್ಕೆ ಬರುತ್ತಿದ್ದ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆರೋಪಿಗಳ ಮೂಲಕ ಕೆದಿಲ ಗ್ರಾಮದ ಪೇರಮೊಗ್ರು ಸಮೀಪಕ್ಕೆ ಆತನನ್ನು ಬರುವಂತೆ ಮಾಡಿ ಅಲ್ಲಿ ಪೊಲೀಸರು ತಡೆದರು.

    ಈ ವೇಳೆ ಮುವಾಝ್ ಕಾರು ನಿಲ್ಲಿಸಿ ಪರಾರಿಯಾಗುತ್ತಿದ್ದಂತೆ ಬೆನ್ನಟ್ಟಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು. ಪರಿಶೀಲನೆ ವೇಳೆ ಆತನ ಬಳಿ ಪರವಾನಗಿ ಇಲ್ಲದ ಪಿಸ್ತೂಲ್ ಮತ್ತು ಎರಡು ಸಜೀವ ಗುಂಡುಗಳು ಪತ್ತೆಯಾಗಿವೆ. 2 ಕೆ.ಜಿ ಗಾಂಜಾ, ನಗದು, 11 ಎಟಿಎಂ ಕಾರ್ಡ್‌ಗಳು, ಮೊಬೈಲ್ ಪೋನ್, ಕಾರು ಸೇರಿದಂತೆ ಒಟ್ಟು 5,86,530 ರೂ. ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts